ಬೆಂಗಳೂರು: ಮೇಯರ್ ಗೌತಮ್ ಕುಮಾರ್ ನೇತೃತ್ವದಲ್ಲಿ ಮಲ್ಲೇಶ್ವರಂನ ಐಪಿಪಿ ಸೆಂಟರ್ನಲ್ಲಿ ಬಿಬಿಎಂಪಿ ಆಯವ್ಯಯದ ಕುರಿತು ಚರ್ಚೆ ನಡೆಯಿತು.
ಬಿಬಿಎಂಪಿ 2020-21 ಸಾಲಿನ ಬಜೆಟ್ ಮಂಡನೆ ಕುರಿತು ಪಾಲಿಕೆ ಇಲಾಖೆ ಮುಖ್ಯಸ್ಥರ ಜೊತೆ ಸರ್ಕಾರದ ಮಾರ್ಗದರ್ಶನದಂತೆ ಯಾವ ರೀತಿಯಲ್ಲಿ, ಎಷ್ಟು ಗಾತ್ರದಲ್ಲಿ ಬಜೆಟ್ ಮಾಡಬೇಕೆಂದು ಚರ್ಚೆ ನಡೆದಿದೆ ಎಂದು ಮೇಯರ್ ತಿಳಿಸಿದರು. ಆದ್ರೆ ಬಜೆಟ್ ಗಾತ್ರದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಜೊತೆಗೆ ಬಜೆಟ್ ಮಂಡನೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಸಭೆ ಮುಗಿದ ಬಳಿಕ ಮಾತನಾಡಿದ ಮೇಯರ್, ಅಧಿಕಾರಿಗಳ ಜೊತೆ ಸರ್ಕಾರದ ಮಾರ್ಗದರ್ಶನದಂತೆ ಯಾವ ರೀತಿಯಲ್ಲಿ, ಎಷ್ಟು ಗಾತ್ರದಲ್ಲಿ ಬಜೆಟ್ ಮಾಡಬೇಕೆಂದು ಚರ್ಚೆ ನಡೆದಿದೆ. ಎಲ್ಲಾ ಇಲಾಖೆ ಮುಖ್ಯಸ್ಥರೂ ಭಾಗಿಯಾಗಿದ್ದರು. ಬಜೆಟ್ ದಿನಾಂಕ ಒಂದನ್ನು ಹೊರತುಪಡಿಸಿ ಉಳಿದೆಲ್ಲ ತಯಾರಿ ನಡೆದಿದೆ.
ನಗರದ ಅಭಿವೃದ್ಧಿಗೆ ಬೇಕಾದ ಎಲ್ಲಾ ಸಲಹೆ ಪಡೆದು ಬಜೆಟ್ ತಯಾರಿಸಲಾಗಿದೆ. ಆದಾಯ ಕ್ರೂಢೀಕರಣ, ಕೆರೆ, ಪಾರ್ಕ್, ಮಳೆ ನೀರುಗಾಲುವೆಯ ಅಭಿವೃದ್ಧಿ ಸೇರಿದಂತೆ ಬಿಡಾಡಿ ದನಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ. ಕೊರೊನಾ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.