ಬೆಂಗಳೂರು: ಹಲಸೂರು ಕೆರೆಉ ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯದ ಬಳಿಕ, ಕೆರೆ ಆವರಣದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಚಾಲನೆ ನೀಡಿದರು.

ಹಲಸೂರು ಕೆರೆ ಆವರಣದಲ್ಲಿ ಬಿಬಿಎಂಪಿ ಹಾಗೂ ಕೋಟಿ ವೃಕ್ಷ ಸೈನ್ಯ ಸಹಯೋಗದಲ್ಲಿ 8 ಸಾವಿರ ವಿವಿಧ ಜಾತಿಯ ಸಸಿಗಳನ್ನು ನೆಡಲಾಗುತ್ತಿದೆ. ಈ ಸಂಸ್ಥೆಯು ಎರಡು ವರ್ಷಗಳ ಕಾಲ ಪೋಷಣೆ ಮಾಡಲಿದೆ. ಸಸಿಗಳನ್ನು ಸೆಟ್ರೀಸ್ ಮತ್ತು ಬಯೋಟಾ ಸಾಯಿಲ್ ಸಂಸ್ಥೆ ವಿತರಿಸಿದೆ.


ಮೇಯರ್ ಗೌತಮ್ ಕುಮಾರ್ ಮಾತನಾಡಿ, ನಗರವನ್ನು ಹಸಿರುಮಯವಾಗಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಪಾಲಿಕೆ ವತಿಯಿಂದ ಸಸಿಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.
ಸಂಸದ ಪಿಸಿ ಮೋಹಮ್, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಇತರರು ಭಾಗಿಯಾಗಿದ್ದರು.