ಬೆಂಗಳೂರು: ಫ್ಯಾಷನ್ ಬ್ರ್ಯಾಂಡ್ ಆಗಿರುವ ಮ್ಯಾಕ್ಸ್ ಫ್ಯಾಷನ್ ಇನ್ಮುಂದೆ ಅಮೆಜಾನ್ ಫ್ಯಾಷನ್ ಇಂಡಿಯಾದಲ್ಲಿ ಲಭ್ಯವಿರಲಿದೆ.
ಆಗಸ್ಟ್ 1 ರಿಂದಲೇ ಅಮೆಜಾನ್ ಆ್ಯಪ್ನಲ್ಲಿ ಮ್ಯಾಕ್ಸ್ ನಲ್ಲಿ ಸಿಗುವ ಎಲ್ಲ ಟ್ರೆಂಡಿ, ಫ್ಯಾಷನ್ ಉತ್ಪನ್ನಗಳು ಸಿಗಲಿವೆ. ಬರೋಬ್ಬರಿ 5000 ಕ್ಕೂ ಹೆಚ್ಚು ಟ್ರೆಂಡಿ ಉತ್ಪನ್ನಗಳು ಇನ್ಮುಂದೆ ಅಮೆಜಾನ್ ನಲ್ಲೇ ಲಭ್ಯವಾಗುತ್ತವೆ.
ಈ ಕುರಿತು ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ, ಮ್ಯಾಕ್ಸ್ ಫ್ಯಾಷನ್ ಇಂಡಿಯಾದ ಸಿ ಇ ಓ ಶೀತಲ್ ಮೆಹ್ತಾ, ಯುವಪೀಳಿಗೆಗೆ ಮತ್ತು ಇಡೀ ಕುಟುಂಬಕ್ಕೆ ಮ್ಯಾಕ್ಸ್ ಫ್ಯಾಷನ್ ನೆಚ್ಚಿನ ಬ್ರ್ಯಾಂಡ್ ಆಗಿದೆ. ಗ್ರಾಹಕರಿಗೆ ಉತ್ತಮ ಬೆಲೆಗಳಲ್ಲಿ ಫಾಸ್ಟ್ ಆ್ಯಂಡ್ ಫ್ಯಾಷನ್ ಒದಗಿಸುವ ನಿಟ್ಟಿನಲ್ಲಿ ಮ್ಯಾಕ್ಸ್ ಮುಂದಿದೆ. ಗ್ರಾಹಕರಿಗೆ ಸೇವೆ ಒದಗಿಸಲು ಅಮೆಜಾನ್ ಜೊತೆಗೆ ಪಾಲುದಾರಿಕೆಗೆ ಮುಂದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತಾನಾಡಿದ ಅಮೆಜಾನ್ ಫ್ಯಾಷನ್ ಇಂಡಿಯಾದ ವ್ಯವಸ್ಥಾಪನ ವಿಭಾಗದ ನಿರ್ದೇಶಕ ಮಯಾಂಕ್ ಶಿವಂ, ಮ್ಯಾಕ್ಸ್ ಫ್ಯಾಷನ್ ಅಮೆಜಾನ್ ಜೊತೆ ಸಹಯೋಗ ಹೊಂದಿ, ಉತ್ಪನ್ನಗಳನ್ನು ಅಮೆಜಾನ್ ಫ್ಯಾಷನ್ ನಲ್ಲಿ ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ. ದೇಶದ ಪ್ರತಿಯೊಬ್ಬರಿಗೂ ಇನ್ನು ಮುಂದೆ ಅಮೆಜಾನ್ ಮೂಲಕವೇ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳು ಸಿಗಲಿದೆ ಎಂದರು.