ಬೆಂಗಳೂರು: ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆ ಈಗ ಆಮ್ಲಜನಕ ಪೂರೈಸುವ ಆಸ್ಪತ್ರೆಯಾಗಿ ಬದಲಾಗಿದ್ದು, ಪಾಲಿಕೆ ವತಿಯಿಂದ ತಾತ್ಕಲಿಕ ಆಕ್ಸಿಜನ್ ಸೆಂಟರ್ ಪ್ರಾರಂಭಿಸಲಾಗಿದೆ.
ಹೆರಿಗೆ ಆಸ್ಪತ್ರೆ ಈಗ ಕೋವಿಡ್ ಆಕ್ಸಿಜನ್ ಸೆಂಟರ್ ಆಗಿದ್ದು, ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆ ಚಿತ್ರಣ ಸಂಪೂರ್ಣ ಬದಲಾಗಿದೆ. ಆಕ್ಸಿಜನ್ ಸೆಂಟರ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಸಿಗುವವರೆಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಹೇಗೆ ಕೆಲಸ ಮಾಡುತ್ತದೆ ಈ ಸೆಂಟರ್ ? ಉಪಯೋಗ ಏನು ?
- ಪಾಲಿಕೆಗೆ ನೇರವಾಗಿ ರೋಗಿಗೆ ಆರೋಗ್ಯದ ಸ್ಥಿತಿ ಗತಿ ತಿಳಿಸುತ್ತದೆ.
- ಆಸ್ಪತ್ರೆ ಸಿಗದೇ ಇದ್ದಾಗ ಮದ್ಯವರ್ತಿಯಾಗಿ ಸೆಂಟರ್ ಕೆಲಸ ಮಾಡುತ್ತದೆ.
- ಟ್ರಾನ್ಸ್ ಸಿಟ್ ಆಕ್ಸಿಜನ್ ಸೆಂಟರ್ ನಲ್ಲಿ ತಾತ್ಕಲಿಕ ಚಿಕಿತ್ಸೆ ದೊರೆಯಲಿದೆ.
- ಆಕ್ಸಿಜನ್ ಬೆಡ್ ಇರುವ ಆಸ್ಪತ್ರೆಗೆ ಶಿಫ್ಟ್ ಆಗುವವರೆಗೂ ಸೆಂಟರ್ ನಲ್ಲಿ ಚಿಕಿತ್ಸೆ.
- 24 ಬೆಡ್ ಗಳು ಇರಲಿವೆ.
- 12 ಪುರಷರಿಗೆ 12 ಮಹಿಳೆಯರಿಗೆ ಬೆಡ್ ವ್ಯವಸ್ಥೆ.
- ಎಲ್ಲಾ ಬೆಡ್ ಗಳಿಗೂ ಆಕ್ಸಿಜನ್ ಸಪ್ಲೈ.
- 30 ಆಕ್ಸಿಜನ್ ಸಿಲಿಂಡರ್ ಸ್ಟಾಕ್ ಆಗಿರುತ್ತದೆ.
- ಸೆಂಟರ್ ಆರಂಭವಾದ ಒಂದು ವಾರಕ್ಕಾಗುವಷ್ಟು ಸ್ಟಾಕ್ ಇದ್ದು ಯಾವುದೇ ಆಕ್ಸಿಜನ್ ಸಂಭಂಧಿಸಿದ ತೊಂದರೆ ಇರುವುದಿಲ್ಲ
- ರೋಗಿಗೆ ಸೂಕ್ತ ಆಸ್ಪತ್ರೆ ಬೆಡ್ ಸಿಗುವವರೆಗೂ ತಾತ್ಕಲಿಕ ಆಕ್ಸಿಜನ್ ಪೂರೈಕೆಯಾಗಲಿದೆ.