ETV Bharat / state

ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಹಿಂದಿದೆ ಪ್ರಶಾಂತ್​ ಕಿಶೋರ್​ ತಂಡದಲ್ಲಿದ್ದ ಚಾಣಾಕ್ಷನ ಪ್ಲಾನ್

ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮತ್ತು ಪೊಲಿಟಿಕಲ್ ಸ್ಟ್ರಾಟಜಿಸ್ಟ್ ಸುನಿಲ್ ಕನುಗೋಳ್ ಕಾಂಗ್ರೆಸ್​​ ಮಾಸ್ಟರ್​ ಮೈಂಡ್​ ಆದ ಇವರಿಬ್ಬರು ಕಾಂಗ್ರೆಸ್​​ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

master-strategists-behind-the-victory-of-congress-in-the-karnataka
ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಹಿಂದಿದೆ ಆ ಮಾಸ್ಟರ್ ಸ್ಟ್ರೆಟಜಿಸ್ಟ್​​ಗಳ ಮಾಸ್ಟರ್ ಪ್ಲಾನ್..!
author img

By

Published : May 14, 2023, 9:59 PM IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ ಐತಿಹಾಸಿಕ ಗೆಲುವು ಸಾಧಿಸಿದೆ. ಸ್ಪಷ್ಟ ಬಹುಮತ ಗಳಿಸುವ ಮೂಲಕ ರಾಜ್ಯದ ಗದ್ದುಗೆ ಹಿಡಿದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​​ನ ಈ ಅಭೂತಪೂರ್ವ ಗೆಲುವಿನ ಹಿಂದೆ ಮಾಸ್ಟರ್ ಸ್ಟ್ರೆಟಜಿಸ್ಟ್ ತಂಡವೊಂದರ ಪರಿಶ್ರಮ ಇದೆ. 136 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಕರುನಾಡ ಗದ್ದುಗೆ ಹಿಡಿದಿದೆ.

ಪ್ರಧಾನಿ ಮೋದಿ-ಅಮಿತ್ ಶಾ ಚರಿಷ್ಮಾ, ಕಾರ್ಯತಂತ್ರಗಳಿಗೆ ಪ್ರತಿತಂತ್ರ ಹೂಡಿ ಬಿಜೆಪಿ ಮಂಡಿಯೂರುವಂತೆ ಮಾಡಿದೆ. ಚುನಾವಣಾ ಅಖಾಡದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಧೂಳಿಪಟ ಗೈದಿದೆ. ಕರ್ನಾಟಕದ ಫಲಿತಾಂಶ ದೇಶವೇ ಹುಬ್ಬೇರಿಸುವಂತೆ ಮಾಡಿದೆ. ರಾಜ್ಯ ಕಾಂಗ್ರೆಸ್​​ನ ಆಭೂತಪೂರ್ವ ಗೆಲುವಿನ ಹಿಂದೆ ಅದೊಂದು ಸ್ಟ್ರಾಟೆಜಿಸ್ಟ್ ತಂಡವೊಂದು ಹಗಲಿರುಳು ದುಡಿದಿದೆ. ಆ ಕಾಣದ ಮಾಸ್ಟರ್ ಮೈಂಡ್ ಕಾಂಗ್ರೆಸ್​​ನ ಗೆಲುವಿನ ಕಾರ್ಯತಂತ್ರ ರೂಪಿಸಿ ಗೆಲುವಿನ ಕೊಡುಗೆ ನೀಡಿದೆ.

ಸುನಿಲ್ ಕನುಗೋಲ್ ಎಂಬ ಮಾಸ್ಟರ್ ಸ್ಟ್ರೆಟೆಜಿಸ್ಟ್: ಹೌದು, ಕಾಂಗ್ರೆಸ್​​ನ ಐತಿಹಾಸಿಕ ಗೆಲುವಿನ ಹಿಂದೆ ಸುನಿಲ್ ಕನುಗೋಳ್ ಎಂಬ ಮಾಸ್ಟರ್ ಮೈಂಡ್ ಇದ್ದಾರೆ. 40 ವರ್ಷದ ಸುನಿಲ್ ಕಾಂಗ್ರೆಸ್​​ಗೆ ಗೆಲುವಿನ ಮ್ಯಾಜಿಕ್ ಮಾಡಿದ್ದಾರೆ. ಸುನಿಲ್ ಕನುಗೋಲ್ ಸೈಲೆಂಟಾಗಿ ಕಾಂಗ್ರೆಸ್​​ನ ಗೆಲುವಿನ ತಂತ್ರವನ್ನು ಹೆಣೆದು ಅದನ್ನು ನಿಖರವಾಗಿ ಅನುಷ್ಠಾನಗೊಳಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರದ ಹಿಂದಿನ ಆತ್ಮ, ಮೆದುಳು ಇದೇ ಸುನಿಲ್.

ಮೂಲತ: ಆಂಧ್ರ ಪ್ರದೇಶದವರಾದ ಅವರು ಖ್ಯಾತ ಪೊಲಿಟಿಕಲ್ ಸ್ಟ್ರಾಟಜಿಸ್ಟ್ ಪ್ರಶಾಂತ್ ಕಿಶೋರ್ ತಂಡದಲ್ಲಿದ್ದವರು. ಸುನಿಲ್ ತಮ್ಮ ನಾವಿನ್ಯ, ಕ್ರಿಯಾತ್ಮಕ ಹೊಸ ಚುನಾವಣಾ ಸ್ಟ್ರೆಟಜಿ ರೂಪಿಸಿದ್ದಲ್ಲದೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ಷೇತ್ರಕ್ಕನುಗುಣವಾಗಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಲ್ಲದೆ, ಬಿಜೆಪಿಯ ರಣತಂತ್ರಕ್ಕೆ ಪ್ರತಿತಂತ್ರ ಹೆಣೆದು ಚಾಣಾಕ್ಷತನದ ಹೆಜ್ಜೆ ಇಡುವುದರ ಹಿಂದೆ ಇದೇ ಸುನಿಲ್ ಸ್ಟ್ರೆಟೆಜಿ ಇದೆ.

ಇದೇ ಕೆಲಸವನ್ನು ಸುನಿಲ್ 2018ರಲ್ಲಿ ಬಿಜೆಪಿಗೆ ಮಾಡಿದ್ದರು. ಈ ಬಾರಿ ಕಾಂಗ್ರೆಸ್ ಗೆ ಗೆಲುವಿನ ಮಂತ್ರ ಹೇಳಿಕೊಟ್ಟಿದ್ದಾರೆ. ಸುಮಾರು ಎಂಟು ತಿಂಗಳ ಹಿಂದೆ ಸುಮಾರು 100 ಮಂದಿಯ ವಾರ್ ರೂಂ ಆರಂಭಿಸಿ ಸುನಿಲ್ ಕನುಗೋಳ್ ರಾಜ್ಯದಲ್ಲಿ ಕಾಂಗ್ರೆಸ್​​ನ ಚುನಾವಣಾ ರಣತಂತ್ರ ರೂಪಿಸುವ ಹೊಣೆಗಾರಿಕೆ ವಹಿಸಿಕೊಂಡಿದ್ದರು. ಐಐಟಿಯನ್ಸ್ ಹಾಗೂ ಐಐಎಂನಲ್ಲಿ ಕಲಿತವರ ತಂಡ ರಚಿಸಿ ಜಾಗರೂಕವಾಗಿ ರಾಜ್ಯದ ಪ್ರತಿ ಕ್ಷೇತ್ರಗಳ ಡೆಮಾಗ್ರಫಿಯನ್ನು ಅರಿತು ಅದಕ್ಕನುಗುಣವಾಗಿ ಸಾಮಾಜಿಕ ಇಂಜಿನಿಯರಿಂಗ್ ತಂತ್ರಗಾರಿಕೆಯನ್ನು ರೂಪಿಸಿದ್ದಾರೆ.

'ಪೇ ಸಿಎಂ', 40 ಪರ್ಸೆಂಟ್ ಅಸ್ತ್ರದ ಘಾತಕ ಅಭಿಯಾನ: ಬಿಜೆಪಿ ಸರ್ಕಾರದ ವಿರುದ್ಧ 40 % ಕಮಿಷನ್ ಆರೋಪವನ್ನು ಕಾಂಗ್ರೆಸ್​​ಗೆ ದೊಡ್ಡ ಅಸ್ತ್ರವನ್ನಾಗಿ ರೂಪಿಸಿರುವುದು ಇದೇ ಸುನಿಲ್. ಬಿಜೆಪಿ ಸರ್ಕಾರದ ವಿರುದ್ಧ ಅದನ್ನು ಪ್ರತಿ ಹಂತದಲ್ಲಿ ಪ್ರಯೋಗಿಸಿ ಸರ್ಕಾರದ ವಿರುದ್ಧ ಜನವಿರೋಧಿ ಅಲೆ ಸೃಷ್ಟಿಸಲು ಸಫಲರಾದರು. 40 ಪರ್ಸೆಂಟ್ ಆರೋಪವನ್ನು ಇನ್ನಷ್ಟು ಹರಿತವಾಗಿ, ಜನರಿಗೆ ಮುಟ್ಟುವಂತೆ ರೂಪಿಸಿದ 'ಪೇ ಸಿಎಂ, ಸೇ ಸಿಎಂ' ಅಭಿಯಾನ ಬಿಜೆಪಿ ಸರ್ಕಾರದ ವಿರುದ್ಧ ಅಲೆಯನ್ನೇ ಸೃಷ್ಟಿಸುವಂತೆ ಮಾಡಿದರು. ಡಿಜಿಟಲ್ ಅಭಿಯಾನ, ಲಂಚದ ದರಪಟ್ಟಿ ಜಾಹೀರಾತುಗಳೊಂದಿಗೆ ಸಿಎಂ ಹಾಗೂ ಬಿಜೆಪಿಗೆ ತೀವ್ರ ಮುಜುಗರ ಹುಟ್ಟಿಸಿ ಸಾರ್ವಜನಿಕರಲ್ಲಿ ಬಿಜೆಪಿ ವಿರೋಧಿ ಅಲೆ ಮೂಡಿಸಿದರು.

ಸೆಂಥಿಲ್ ನೇತೃತ್ವದ ವಾರ್ ರೂಂ: ಕಾಂಗ್ರೆಸ್ ಪರವಾದ ಪ್ರಬಲ ಅಲೆ ಸೃಷ್ಟಿಸುವಲ್ಲಿ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ನೇತೃತ್ವದ ವಾರ್ ರೂಂ ಪ್ರಮುಖ ಪಾತ್ರ ವಹಿಸಿತು. ಬಿಜೆಪಿ ಸರ್ಕಾರದ ವಿರುದ್ಧ ಡಿಜಿಟಲ್ ಅಭಿಯಾನ ನಡೆಸಿ ಬಿಜೆಪಿಯ ಪ್ರತಿ ಭ್ರಷ್ಟಾಚಾರ ಆರೋಪ, ವೈಫಲ್ಯಗಳು, ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಮನಮುಟ್ಟುವಂತೆ ನಿರಂತರವಾಗಿ ಹರಿಬಿಟ್ಟು ಬಿಜೆಪಿ ವಿರೋಧಿ ಅಲೆ ಸೃಷ್ಟಿಸಲು ಸಫಲರಾದರು. ಜೊತೆಗೆ ಕ್ಷೇತ್ರವಾರು ಸ್ಥಿತಿಗತಿ, ಬಿಜೆಪಿ ವಿರುದ್ಧದ ಅಲೆಗಳ ಮಾಹಿತಿ ಕಲೆ ಹಾಕಿ, ಅದಕ್ಕನುಗುಣವಾಗಿ ಕಾರ್ಯತಂತ್ರ ರೂಪಿಸುವಲ್ಲಿ ಸೆಂಥಿಲ್ ಮಹತ್ವದ ಪಾತ್ರ ವಹಿಸಿದರು.

ಸೆಂಥಿಲ್ ನೇತೃತ್ವದ ವಾರ್ ರೂಂ ಸಾಮಾಜಿಕ ಜಾಲತಾಣವನ್ನು ಅತಿ ಜಾಣ್ಮೆಯಿಂದ, ಕ್ರಿಯಾತ್ಮಕವಾಗಿ ಬಿಜೆಪಿ ವಿರುದ್ಧ ಟೀಕಾಸ್ತ್ರವನ್ನಾಗಿ ಬಳಸಿ ಕೌಂಟರ್ ನೀಡುತ್ತಿತ್ತು. ಬಿಜೆಪಿಯ ಟೀಕೆಗೆ ಪ್ರಬಲವಾದ ಪ್ರತ್ಯುತ್ತರಗಳನ್ನು ಕ್ರಿಯಾತ್ಮಕವಾಗಿ ಜನರಿಗೆ ಮುಟ್ಟುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಜನಾಂದೋಲನ ಸೃಷ್ಟಿಸಿದ್ದರು. ಸುನಿಲ್ ಕನುಗೋಳ್ ಹಾಗೂ ಸೆಂಥಿಲ್ ಜೋಡಿ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ, ಎಲ್ಲೂ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆ ಹಳಿ ತಪ್ಪದಂತೆ ನೋಡಿಕೊಂಡರು.

ಇದನ್ನೂ ಓದಿ: ಸಿಎಂ ಆಯ್ಕೆ ನಿರ್ಧಾರ ಖರ್ಗೆ ಹೆಗಲಿಗೆ.. ಸಿಎಲ್​ಪಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.