ETV Bharat / state

ಬೀದಿಗಿಳಿದ ಖಾಸಗಿ ಶಾಲೆಗಳ ಶಿಕ್ಷಕರಿಂದ ಬೃಹತ್ ರ‍್ಯಾಲಿ.. ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಸಾಥ್‌ - Massive rally by private teachers news

ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕನಿಷ್ಟ ಸಹಕಾರ ಹಾಗೂ ಅವರ ಬೆನ್ನಿಗೆ ಶಿಕ್ಷಣ ಸಂಸ್ಥೆಗಳು ನಿಂತು ಶಿಕ್ಷಣದ ವ್ಯವಸ್ಥೆಯಲ್ಲಿ ಅವರನ್ನು ಉಳಿಸಿ, ಗೌರವಿಸುವಂತಹ ಕೆಲಸ ಆಗಬೇಕಾಗಿದೆ..

ಬೀದಿಗಿಳಿದ ಖಾಸಗಿ ಶಿಕ್ಷಕರಿಂದ ಬೃಹತ್ ರ‍್ಯಾಲಿ

author img

By

Published : Dec 16, 2020, 12:54 PM IST

ಬೆಂಗಳೂರು : 'ನಮ್ಮ ನಡೆ ಶಿಕ್ಷಕರ ಕಡೆ, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಉಳಿದರೆ ಶಿಕ್ಷಣ' ಎಂಬ ಘೋಷವಾಕ್ಯದೊಂದಿಗೆ ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆಯನ್ನ ಖಾಸಗಿ ಶಾಲೆಗಳು ನಡೆಸುತ್ತಿವೆ.

ಬೀದಿಗಿಳಿದ ಖಾಸಗಿ ಶಿಕ್ಷಕರಿಂದ ಬೃಹತ್ ರ‍್ಯಾಲಿ

ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕನಿಷ್ಟ ಸಹಕಾರ ಹಾಗೂ ಅವರ ಬೆನ್ನಿಗೆ ಶಿಕ್ಷಣ ಸಂಸ್ಥೆಗಳು ನಿಂತು ಶಿಕ್ಷಣದ ವ್ಯವಸ್ಥೆಯಲ್ಲಿ ಅವರನ್ನು ಉಳಿಸಿ, ಗೌರವಿಸುವಂತಹ ಕೆಲಸ ಆಗಬೇಕಾಗಿದೆ ಎಂದು ಎಂಎಲ್​ಸಿ ಪುಟ್ಟಣ್ಣ ಆಗ್ರಹಿಸಿದರು.

ಮೌರ್ಯ ವೃತ್ತದ ಫ್ರೀಡಂ ಪಾರ್ಕ್​ವರೆಗೆ ಶಿಕ್ಷಕರು ಬೃಹತ್ ರ‍್ಯಾಲಿ ನಡೆಸಿದರು. ‌ಈ ವೇಳೆ ಕೈನಲ್ಲಿ ತಟ್ಟೆ ಸೌಟು ಹಿಡಿದು ಸರ್ಕಾರದ ವಿರುದ್ಧ ವ್ಯಂಗ್ಯ ಪ್ರದರ್ಶನ ಮಾಡಿದರು‌‌. ತರಕಾರಿ ಗಾಡಿ ತಳ್ಳಿಕೊಂಡು ಶಿಕ್ಷಕರನ್ನು ಶಿಕ್ಷಣ ಮಂತ್ರಿಗಳು ಬೀದಿಗೆ ತಳ್ಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಓದಿ:ಬಿಎಂಟಿಸಿ ಬಸ್ ಹತ್ತಿ‌ 'ನಾನೇ ಸಿಎಂ'‌ ಎಂದ ಮಹಿಳೆ: ಟಿಕೆಟ್ ಖರೀದಿಸದೆ ಸುಮ್ನೆ ಕಿರಿಕ್! ವೈರಲ್‌ ವಿಡಿಯೋ

ಖಾಸಗಿ ಶಿಕ್ಷಕರ ಬೇಡಿಕೆಗಳು ಇಂತಿವೆ :

ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್​ ಎಂದು ಪರಿಗಣಿಸಿ ಕೋವಿಡ್ ಲಸಿಕೆ ಉಚಿತ ನೀಡಬೇಕು.

ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ಆಹಾರ ಕಿಟ್ ನೀಡಬೇಕು.

ಗೌರವಧನ ಬಿಡುಗಡೆ ಮಾಡಬೇಕು.

ರಾಜ್ಯ ಸರ್ಕಾರ ಪ್ರತ್ಯೇಕ ವಿಮೆ ಸೌಲಭ್ಯ ನೀಡುಬೇಕು.

ಶಿಕ್ಷಣ ಸಂಸ್ಥೆಗಳ ಪುನಾರಂಭ, ದಾಖಲಾತಿ, ಹಾಜರಾತಿ, ಕನಿಷ್ಠ ಮೌಲ್ಯಮಾಪನದ ತೇರ್ಗಡೆ ಬಾಕಿ ಹಾಗೂ ಪ್ರಸ್ತುತ ಕನಿಷ್ಠ ಶುಲ್ಕ ಕಟ್ಟಿ ದಾಖಲಾತಿ ಮಾಡುವ ಬಗ್ಗೆ ಸ್ಪಷ್ಟೀಕರಣದ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.