ETV Bharat / state

ಮಾಸ್ಕ್ ತಯಾರಿಕೆಗೆ ಮುಂದಾದ ಲೈಂಗಿಕ ಶೋಷಿತೆಯರು

ಬೆಂಗಳೂರಿನ ವನಿತ ಸಹಾಯ ವಾಣಿಯಿಂದ ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರಿಗೆ ತರಬೇತಿ ನೀಡಿ, ಮಾಸ್ಕ್​ ತಯಾರಿಕೆ ಮಾಡಿಸಲಾಗುತ್ತಿದೆ ಎಂದು ವನಿತ ಸಹಾಯ ವಾಣಿ ಅಧ್ಯಕ್ಷೆ ರಾಣಿ ಶೆಟ್ಟಿ ಹೇಳಿದರು.

Mask making by women of sexual exploitation
ವನಿತ ಸಹಾಯವಾಣಿ ಅಧ್ಯಕ್ಷೆ ರಾಣಿ ಶೆಟ್ಟಿ
author img

By

Published : Apr 15, 2020, 12:38 PM IST

ಬೆಂಗಳೂರು: ಲೈಂಗಿಕ ಶೋಷಣೆಗೆ ಒಳಗಾಗಿ, ಮಾನಸಿಕವಾಗಿ ಜರ್ಜರಿತವಾದ ಮಹಿಳೆಯ ಬದುಕು ಕಟ್ಟಿಕೊಡುತ್ತಿದೆ ಮಾಸ್ಕ್​ ತಯಾರಿಕೆ ಕೆಲಸ. ದೇಶಾದ್ಯಂತ ಭಾರಿ ಬೇಡಿಕೆ ವಸ್ತುವಾಗಿರುವ ಮಾಸ್ಕ್​ಗಳನ್ನು ಈ ಮಹಿಳೆಯರು ತಯಾರಿಸುತ್ತಿದ್ದಾರೆ. ಇವರ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿರುವುದು, ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿರುವ ವನಿತ ಸಹಾಯ ವಾಣಿ ಕಚೇರಿ ಎಂಬುದು ವಿಶೇಷ.

ವನಿತ ಸಹಾಯವಾಣಿ ಅಧ್ಯಕ್ಷೆ ರಾಣಿ ಶೆಟ್ಟಿ

ಅನೇಕ ಸಮಸ್ಯೆಗಳನ್ನು ಹೊತ್ತು ಸಹಾಯವಾಣಿಗೆ ಬರುವ ಮಹಿಳೆಯರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಡುತ್ತಿದೆ. ಸುಮಾರು 25 ಮಹಿಳೆಯರಿಗೆ ಮಾಸ್ಕ್​ ಹಾಗೂ ಇತರೆ ವಸ್ತುಗಳ ತಯಾರಿಕೆ ತರಬೇತಿ ನೀಡಿಲಾಗಿದೆ. ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಿದ್ದು, 10 ಮಹಿಳೆಯರು ಮನೆಯಲ್ಲಿ ಮಾಸ್ಕ್​ಗಳನ್ನು ತಯಾರಿಸಿ ಕೊಡುತ್ತಿದ್ದಾರೆ ಎಂದು ವನಿತ ಸಹಾಯವಾಣಿ ಅಧ್ಯಕ್ಷೆ ರಾಣಿ ಶೆಟ್ಟಿ ಈಟಿವಿ ಭಾರತ ಸಂದರ್ಶನದಲ್ಲಿ ತಿಳಿಸಿದರು.

ಸಮಸ್ಯೆಗಳ ಬಗ್ಗೆ ಕೌನ್ಸಿಲಿಂಗ್​ ಮಾಡಿ, ಜೊತೆಗೆ ಟೈಲರಿಂಗ್, ಕ್ಯಾಂಡಲ್ ಮೇಕಿಂಗ್ ಹೀಗೆ ಅನೇಕ ರೀತಿಯ ತರಬೇತಿ ನೀಡಲಾಗುತ್ತದೆ. ಕೋವಿಡ್-19ನಿಂದ ಬೇಡಿಕೆ ಇರುವ ಮಾಸ್ಕ್​ಗಳನ್ನು ತಯಾರಿಸಿ, 10 ರೂಪಾಯಿಗೆ ಒಂದನ್ನು ಮಾರಾಟ ಮಾಡಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.