ETV Bharat / state

ದುಸ್ಥಿತಿಯಿಂದ ಸುಸ್ಥಿತಿಗೆ ಬಂದ ಜಲಮೂಲ.. ಪುನರುಜ್ಜೀವನಗೊಂಡ ಮಾರಗೊಂಡನಹಳ್ಳಿ ಕೆರೆ - Maragondanahalli Lake Rejuvenation Project

ದುಸ್ಥಿತಿಯಲ್ಲಿದ್ದ ಮಾರಗೊಂಡನಹಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ನೀರು ಮತ್ತು ಹಸಿರ ಪರಿಸರದೊಂದಿಗೆ ಕಂಗೊಳಿಸುತ್ತಿದೆ.

Maragondanahalli lake
ಮಾರಗೊಂಡನಹಳ್ಳಿ ಕೆರೆ
author img

By

Published : Feb 28, 2023, 9:09 AM IST

ಬೆಂಗಳೂರು: ಭಾರತದ ಪ್ರಮುಖ ಉದ್ಯಮ ಸಮೂಹವಾದ ಜೆಎಸ್‌ಡಬ್ಲ್ಯೂ ಗ್ರೂಪ್ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ 21 ಎಕರೆ ವಿಸ್ತೀರ್ಣದ ಮಾರಗೊಂಡನಹಳ್ಳಿ ಕೆರೆಯ ಮರುಸ್ಥಾಪನೆ ಮತ್ತು ಪುನರುಜ್ಜೀವನಗೊಂಡಿದೆ. ಈ ಕುರಿತು ಇಂದು ನಗರದ ಜೆಎಸ್‌ಡಬ್ಲ್ಯು ಸ್ಟೀಲ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಜೆಎಸ್‌ಡಬ್ಲ್ಯು ಸ್ಟೀಲ್‌, ವಿಜಯನಗರ ಮತ್ತು ಸೇಲಂ ವರ್ಕ್ಸ್‌ ಅಧ್ಯಕ್ಷ ಪಿ ಕೆ ಮುರುಗನ್ ಪುನಃ ಸ್ಥಾಪಿತ ಕೆರೆಯನ್ನು ಸಾಮುದಾಯಿಕವಾಗಿ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

Maragondanahalli lake
ಭೀಕರ ಸ್ಥಿತಿಯಲ್ಲಿದ್ದ ಮಾರಗೊಂಡನಹಳ್ಳಿ ಕೆರೆ

ಮಾರಗೊಂಡನಹಳ್ಳಿ ಕೆರೆ ಪುನಶ್ಚೇತನ ಯೋಜನೆಯನ್ನು 2021 ರಲ್ಲಿ ಮಗವಾಡ ಫೌಂಡೇಶನ್‌ನ ಆನಂದ ಮಲ್ಲಿಗವಾಡ್ ಪೂರ್ಣಗೊಳಿಸಿದ್ದಾರೆ. ಈ ಯೋಜನೆಯನ್ನು ಜೆಎಸ್‌ಡಬ್ಲ್ಯು, ಗ್ರೂಪ್ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ, ಉಪಕ್ರಮದ ಭಾಗವಾಗಿ ಜೆಎಸ್‌ಡಬ್ಲ್ಯು, ಫೌಂಡೇಶನ್ಸ್ ಮೂಲಕ ಬೆಂಬಲಿಸಿದೆ. ಮುಂದಿನ ಎರಡು ವರ್ಷಗಳವರೆಗೆ ಹೊಸದಾಗಿ ಮರುಸ್ಥಾಪಿಸಲಾದ ಮಾರಗೊಂಡನಹಳ್ಳಿ ಕರೆಯ ನಿರ್ವಹಣೆಗೆ ಬದ್ಧವಾಗಿದೆ ಎಂದರು.

Maragondanahalli lake
ನಿರ್ಮಾಣ ಹಂತದಲ್ಲಿ ಕೆರೆಯ ಚಿತ್ರ.

ಕೆರೆಯ ಸಂಪೂರ್ಣ ಪುನಶ್ಚೇತನದ ಕುರಿತು ಮಾತನಾಡಿದ ಪರಿಸರ ತಜ್ಞ ಕಾರ್ಯದ ರೂವಾರಿ ಆನಂದ ಮಲ್ಲಿಗವಾಡ್ ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ವಸ್ತುಗಳ ಬಳಕೆ ಮಾಡುವ ಮೂಲಕ ಮಾರಗೊಂಡನಹಳ್ಳಿ ಕೆರೆಯನ್ನು ಪರಿಸರ ಸ್ನೇಹಿ ರೀತಿಯಲ್ಲಿ ಮತ್ತೆ ಜೀವಂತಗೊಳಿಸಲಾಗಿದೆ. ಜೆಎಸ್‌ಡಬ್ಲ್ಯು, ಫೌಂಡೇಶನ್ ಸರೋವರದ ಸ್ಥಳಕ್ಕೆ ಸೇರುವ ಕೊಳಚೆ ನೀರನ್ನು ಸಂಸ್ಕರಿಸಲು ಚೌಗು ಪ್ರದೇಶಗಳನ್ನು ನಿರ್ಮಿಸುವ ಮೂಲಕ ಈ ಸರೋವರದ ಪುನಃಸ್ಥಾಪನೆಯನ್ನು ಕಾರ್ಯಗತಗೊಳಿಸಿದೆ ಎಂದರು.

Maragondanahalli lake
ನಿರ್ಮಾಣ ಹಂತದಲ್ಲಿ ಕೆರೆಯ ಚಿತ್ರ.

ನೈಸರ್ಗಿಕವಾಗಿ ಕೆರೆಗೆ ಮರುಜೀವ: ಸರೋವರದಾದ್ಯಂತ 10 ತೇಲುವ ಚೌಗು ಪ್ರದೇಶಗಳನ್ನು ನಿರ್ಮಿಸಲು 12,000 ಕ್ಕೂ ಹೆಚ್ಚು ಕ್ಯಾನಾ ಮತ್ತು ವೆಟಿವರ್ ಸಸ್ಯಗಳನ್ನು ಬಳಸಲಾಯಿತು. ಈ ಸಸ್ಯಗಳ ಬೇರುಗಳು ವಿಷ ಮತ್ತು ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವ ಮೂಲಕ ನೈಸರ್ಗಿಕ ಶುದ್ಧಿಕಾರಕಗಳಾಗಿ ಕಾರ್ಯನಿರ್ವಹಿಸುತ್ತಿವೆ. ನೀರನ್ನು ನೈಸರ್ಗಿಕವಾಗಿ ಸಂಸ್ಕರಿಸುತ್ತಿವೆ. ವಾಸನೆ ಮತ್ತು ಬಣ್ಣದಿಂದ ದೂರವಿರಿಸುತ್ತಿವೆ. ಸ್ಥಳೀಯ ನಿವಾಸಿಗಳು ಕೆರೆಯ ಸುತ್ತಲೂ 4,500 ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪುನಶ್ಚೇತನ ಯೋಜನೆಗೆ ಸಹಕರಿಸಿದರು ಎಂದು ತಿಳಿಸಿದರು.

Maragondanahalli lake
ಮಾರಗೊಂಡನಹಳ್ಳಿ ಕೆರೆ ಮೊದಲು ಮತ್ತು ನಂತರ

ಜೆಎಸ್‌ಡಬ್ಲ್ಯು ಫೌಂಡೇಶನ್ ನಿಂದ ಅಪಾರ ಬೆಂಬಲ: ಆನಂದ ಮಲ್ಲಿಗವಾಡ ಮುಂದುವರೆದು ಮಾತನಾಡಿ ಈ ಪ್ರಯತ್ನದ ಮೂಲಕ ಮಾರ್ಗೊಂಡನಹಳ್ಳಿ, ಕರೆಯ ಪರಿಸರ ಸಮತೋಲನವನ್ನು ಮರುಸ್ಥಾಪಿಸುವಲ್ಲಿ ಜೆಎಸ್‌ಡಬ್ಲ್ಯು ಫೌಂಡೇಶನ್ ಅಪಾರ ಬೆಂಬಲವನ್ನು ಒದಗಿಸಿದೆ. ಬೆಂಗಳೂರಿನ ಸ್ಥಳೀಯ ನಿವಾಸಿಗಳು ಮತ್ತು ಜನರು ಈ ಸುಂದರವಾದ ಕೆರೆಯ ಸಂಪೂರ್ಣ ಪ್ರಯೋಜನವನ್ನು ಪಡೆದು ಆನಂದಿಸಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದುಸ್ಥಿತಿಯಲ್ಲಿದ್ದ ಕೆರೆ ಸುಸ್ಥಿತಿಗೆ: ಈ ಮೊದಲು ಮಾರಗೊಂಡನಹಳ್ಳಿ ಕೆರೆಯು ಭೀಕರ ಸ್ಥಿತಿಯಲ್ಲಿತ್ತು, ಅದರಲ್ಲಿ ಕೊಳಚೆ ಮತ್ತು ಕೆಸರು ತುಂಬಿತ್ತು. ದುರ್ವಾಸನೆಯನ್ನು ಬೀರುತ್ತಿತ್ತು, ಸ್ಥಳೀಯ ನಿವಾಸಿಗಳು ಮತ್ತು ಸಮುದಾಯಕ್ಕೆ ಸುತ್ತ ಮುತ್ತ ಹೋಗಲು ಆಗದ ಪರಿಸ್ಥಿತಿಯಲ್ಲಿತ್ತು. ನಗರದ ತ್ಯಾಜ್ಯ ಮತ್ತು ಇತರ ಕಸವನ್ನು ಸುರಿಯುವುದರಿಂದ ಕೆರೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಅತೀವವಾಗಿ ಅತಿಕ್ರಮಿಸಲ್ಪಟ್ಟಿತು ಎಂದು ಮಾಹಿತಿ ನೀಡಿದರು. ಮಾಧ್ಯಮಗೋಷ್ಟಿಯಲ್ಲಿ ಜೆಎಸ್‌ಡಬ್ಲ್ಯೂ ಫೌಂಡೇಶನ್ ವ್ಯವಸ್ಥಾಪಕರಾದ ಅಶ್ವಿನಿ ಸಕ್ಸೇನಾ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ನಮಗೆ ಹಳ್ಳದ ನೀರೇ ಗತಿ..: ಸರ್ಕಾರಕ್ಕೆ ಕೇಳುವುದೇ ಆದಿವಾಸಿಗಳ ಅರಣ್ಯರೋಧನೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.