ETV Bharat / state

ಐಎಂಎ ವಂಚನೆ ಪ್ರಕರಣ: ಮನ್ಸೂರ್ ಅಸಲಿ ಆಸ್ತಿಯ ಜಾಡು ಹಿಡಿದ ಎಸ್ಐಟಿ

author img

By

Published : Jun 25, 2019, 3:51 PM IST

ಮನ್ಸೂರ್, ನನ್ನ ಬಳಿ 500 ಕೋಟಿ ರೂ ಮೌಲ್ಯದ ಆಸ್ತಿ ಇದೆ. ಇದನ್ನು ಹೂಡಿಕೆದಾರರಿಗೆ ನೀಡಿ ಎಂದಿದ್ದ. ಆದರೆ ಮನ್ಸೂರ್ ಹೆಸರಿನಲ್ಲಿ ಒಟ್ಟು 23 ಕಂಪನಿಯಲ್ಲಿ 300 ಕೋಟಿ ರೂ ಆಸ್ತಿ ಮಾತ್ರ ಇದೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಐಎಂಎ ಕಂಪನಿ ಕಚೇರಿ

ಬೆಂಗಳೂರು: ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಸಿಸಿಬಿ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಇಂದು ತಿಲಕ್ ನಗರದಲ್ಲಿರುವ ಮತ್ತೊಂದು ಐಎಂಎ ಕಂಪನಿ ಕಚೇರಿಯಲ್ಲಿ ಎಸ್​​ಐಟಿ ತಂಡದ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ತಿಲಕ್ ನಗರದಲ್ಲಿ ಎರಡು ಅಂತಸ್ತಿನ ಐಎಂಎ ಕಚೇರಿ ಇದ್ದು, ಈ ಕಚೇರಿಯಲ್ಲಿ ಹೂಡಿಕೆದಾರರ ಚಿನ್ನಾಭರಣವನ್ನು ಅಡಮಾನವಾಗಿ ಇರಿಸಿಕೊಳ್ಳಲಾಗುತ್ತಿತ್ತು ಎಂದು ಐಎಂಎ ಕಂಪನಿಯ ಸಿಬ್ಬಂದಿ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಎಸ್ಐಟಿ ತಂಡ ಪರಿಶೀಲನೆಯಲ್ಲಿ ತೊಡಗಿದೆ.

ಐಎಂಎ ಕಂಪನಿ ಕಚೇರಿ

ಮತ್ತೊಂದೆಡೆ ಎಸ್ಐಟಿ ತನಿಖೆಯಲ್ಲಿ ಮನ್ಸೂರ್ ಅಸಲಿ ಆಸ್ತಿ ಎಷ್ಟು ಎನ್ನುವುದು ಬಹಿರಂಗವಾಗಿದೆ. ಮನ್ಸೂರು ವಿಡಿಯೋ ಹಾಗೂ ಆಡಿಯೋದಲ್ಲಿ ನನ್ನ ಬಳಿ 500 ಕೋಟಿ ರೂ ಮೌಲ್ಯದ ಆಸ್ತಿ ಇದೆ. ಇದನ್ನು ಹೂಡಿಕೆದಾರರಿಗೆ ನೀಡಿ ಎಂದಿದ್ದ. ಆದರೆ ಮನ್ಸೂರ್ ಹೆಸರಿನ ಒಟ್ಟು 23 ಕಂಪನಿಯಲ್ಲಿ 300 ಕೋಟಿ ಮೌಲ್ಯದ ಆಸ್ತಿ ಮಾತ್ರ ಇದೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಐಎಂಎ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 7 ಮಂದಿ ನಿರ್ದೇಶಕರನ್ನು ಈಗಾಗಲೇ ಬಂಧಿಸಿದ್ದು ಇಂದು ಕಸ್ಟಡಿ ಅವಧಿ ಮುಗಿಯುವ ವ ಹಿನ್ನೆಲೆಯಲ್ಲಿ 4ನೇ ಎಸಿಎಂಎಂ ಕೋರ್ಟ್​ಗೆ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.

Intro:ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ
‌ಮನ್ಸೂರ್ ಆಸ್ತಿ ಜಾಡು ಹಿಡಿದ ಎಸ್ಐಟಿ

ಭವ್ಯ

ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಸಿಸಿಬಿ ಎಸಿಪಿ ಬಾಲ್ ರಾಜ್ ನೇತೃತ್ವದಲ್ಲಿ ಇಂದು ತಿಲಕ್ ನಗರದಲ್ಲಿರುವ ಮತ್ತೊಂದು ಐಎಂಎ ಕಂಪನಿ ಕಛೇರಿಯಲ್ಲಿ ಎಸ್ ಐಟಿ ತಂಡ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ತಿಲಕ್ ನಗರದಲ್ಲಿ ಎರಡು ಅಂತಸ್ತಿನ ಐಎಂಎ ಕಛೇರಿ ಇದ್ದು ಈ ಕಚೇರಿಯಲ್ಲಿ ಹೂಡಿಕೆದಾರರ ಚಿನ್ನಾಭರಣವನ್ನ ಮಾತ್ರ ಅಡಮಾನವಾಗಿ ಇರಿಸಿಕೊಳ್ಳಲಾಗುತ್ತಿತ್ತು ಎಂದು ಐಎಂಎ ಕಂಪನಿಯ ಸಿಬ್ಬಂದಿಗಳು ಮಾಹಿತಿ ನೀಡಿದ್ರು. ಈ ಮಾಹಿತಿ ಆಧರಿಸಿ ಎಸ್ಐಟಿ ತಂಡ ಪರಿಶೀಲನೆಯಲ್ಲಿ ತೊಡಗಿದೆ.

ಮತ್ತೊಂದೆಡೆ ಎಸ್ಐಟಿ ತನಿಖೆಯಲ್ಲಿ ಮನ್ಸೂರ್ ಅಸಲಿ ಆಸ್ತಿ ಎಷ್ಟು ಎನ್ನುವುದು ಬಹಿರಂಗವಾಗಿದೆ. ಮನ್ಸೂರು ವಿಡಿಯೋ ಹಾಗು ಆಡಿಯೊದಲ್ಲಿ ನನ್ನ ಬಳಿ ಐನೂರು ಕೋಟಿ ಆಸ್ತಿ ಇದೆ. ಇದನ್ನ ಹೂಡಿಕೆದಾರರಿಗೆ ನೀಡಿ ಎಂದಿದ್ದ. ಆದ್ರೆ ಮನ್ಸೂರ್ ಹೆಸರಿನಲ್ಲಿ
ಒಟ್ಟು 23 ಕಂಪನಿಯಲ್ಲಿ ಮೂನ್ನೂರು ಕೋಟಿ ಆಸ್ತಿ ಮಾತ್ರ ಸದ್ಯ ತನಿಕೆ ಯಲ್ಲಿ ಪತ್ತೆಯಾಗಿದೆ.

ಹಾಗೆ ಐಎಂಎ ಕಚೇರಿಯ ಕೆಲಸ ನಿರ್ವಹಿಸ್ತಿದ್ದ ೭ ನಿರ್ದೇಶಕರನ್ನು ಈಗಾಗ್ಲೆ ಎಸ್ಐಟಿ ಬಂಧಿಸದ್ದು ಇಂದು ಕಸ್ಟಡಿ ಅಂತ್ಯ ಹಿನ್ನೆಲೆ ೪ನೇ ಎಸಿಎಂಎಂ ಕೋರ್ಟ್ ಗೆ ಆರೋಪಿಗಳನ್ನ ಎಸ್ಐಟಿ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ .
Body:KN_BNG_04_25_IMA_BHAVYA_7204498Conclusion:KN_BNG_04_25_IMA_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.