ETV Bharat / state

ಲಾಲ್​ಬಾಗ್​ನಲ್ಲಿ ಮಾವು ಮೇಳ: ಜನರಿಂದ ಉತ್ತಮ ಪ್ರತಿಕ್ರಿಯೆ

ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಮಾವು ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸುವ ಉದ್ದೇಶದಿಂದ ಲಾಲ್​​ಬಾಗ್​ನಲ್ಲಿ ಮಾವು ಮೇಳ ಆಯೋಜಿಸಲಾಗಿದೆ. ಇಲ್ಲಿ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಲಾಲ್​ಬಾಗ್​ನಲ್ಲಿ ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ
author img

By

Published : Jun 12, 2019, 6:54 PM IST

ಬೆಂಗಳೂರು: ಲಾಲ್​​ಬಾಗ್​ನಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿಯು ಮಾವು ಮೇಳ ಆಯೋಜಿಸಿದೆ. ರಾಸಾಯನಿಕ ಬಳಸದೇ ಸಹಜವಾಗಿ ಮಾಗಿದ ಮಾವಿನ ಹಣ್ಣನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಇಲ್ಲಿ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಹಣ್ಣಿನ ಪ್ರಮಾಣ ಹಾಗೂ ಗುಣಮಟ್ಟದ ಆಧಾರದ ಮೇಲೆ ಎರಡು ದಿನಕ್ಕೊಮ್ಮೆ ದರ ಕೂಡ ಬದಲಾಗುತ್ತದೆ. ಇಲ್ಲಿ ನಡೆಯುತ್ತಿರುವ ಮೇಳದಲ್ಲಿ ಕೋಲಾರ, ಚಿಂತಾಮಣಿ, ರಾಮನಗರ, ಶ್ರೀನಿವಾಸಪುರ ತಾಲೂಕು ಸೇರಿದಂತೆ ಮತ್ತಿತರ ಭಾಗಗಳ ಹಣ್ಣುಗಳು ಬಂದಿವೆ. ಬಾದಾಮಿ, ರಸಪುರಿ, ಸೆಂಧುರಾ, ಮಲ್ಲಿಕಾ, ನೀಲಂ, ತೋತಾಪುರಿ, ಮಲಗೋವಾ, ಆಮ್ರಪಾಲಿ, ಬಂಗನಪಲ್ಲಿ ಮತ್ತಿತರ ತಳಿಯ ಮಾವುಗಳು ಇಲ್ಲಿವೆ.

ಲಾಲ್​ಬಾಗ್​ನಲ್ಲಿ ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಈ ಬಾರಿ ಹಲವು ಹೊಸ ಬಗೆಯ ತಳಿಗಳನ್ನು ಕೂಡ ಪರಿಚಯಿಸಲಾಗಿದೆ. ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ ಮಂಡಳಿಯಿಂದ ಆಯೋಜಿಸಿದ್ದ ಮೇಳದಲ್ಲಿ 950ಕ್ಕೂ ಹೆಚ್ಚು ಟನ್‌ ಮಾವು ಮಾರಾಟವಾಗಿತ್ತು. ಈ ವರ್ಷ ಈಗಾಗಲೇ 100ಕ್ಕೂ ಹೆಚ್ಚು ಟನ್ ಮಾವು ಮಾರಾಟವಾಗಿದೆ.

Intro:Body:ಬೆಂಗಳೂರು: ಹತ್ತಾರು ಬಗೆಯ, ರಾಸಾಯನಿಕ ಬಳಸದೇ ಸಹಜವಾಗಿ ಮಾಗಿದ, ಹಣ್ಣುಗಳ ರಾಜ ಮಾವಿನ ಹಣ್ಣನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಗ್ರಾಹಕರಿಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಬೆಂಗಳೂರಿನ ಲಾಲ್ ಬಾಗ್ ನಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಮಾವು ಮೇಳ ಆಯೋಜಿಸಿದೆ.
ಮಾವಿನ ಹಣ್ಣುಗಳಿಗೆ ರಾಸಾಯನಿಕಗಳನ್ನು ಬಳಸಿ ಮಾಗಿಸಿದ ಹಣ್ಣುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಹಣ್ಣಿನ ಪ್ರಮಾಣ ಹಾಗೂ ಗುಣಮಟ್ಟದ ಆಧಾರದ ಮೇಲೆ ಎರಡು ದಿನಕ್ಕೊಮ್ಮೆ ದರ ಕೂಡ ಬದಲಾಗುತ್ತದೆ.
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಮೇಳದಲ್ಲಿ ಕೋಲಾರ, ಚಿಂತಾಮಣಿ, ರಾಮನಗರ, ಶ್ರೀನಿವಾಸಪುರ ತಾಲೂಕು ಸೇರಿದಂತೆ ಮತ್ತಿತರ ಭಾಗಗಳ ಹಣ್ಣುಗಳಿವೆ.
ಬಾದಾಮಿ, ರಸಪುರಿ, ಸೆಂಧುರಾ, ಮಲ್ಲಿಕಾ, ನೀಲಂ, ತೋತಾಪುರಿ, ಮಲಗೋವಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ ಮತ್ತಿತರ ತಳಿಯ ಮಾವುಗಳು ಇವೆ.
ಬೆಂಗಳೂರಿನ ವಿವಿದೆಡೆಗಳಿಂದ ಪ್ರತಿದಿನ ಸಾವಿರಾರು ಗ್ರಾಹಕರು ಆಗಮಿಸಿ ಕೆಜಿಗಟ್ಟಲೇ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.
ಈ ಬಾರಿ ಹಲವು ಹೊಸ ಬಗೆಯ ತಳಿಗಳನ್ನು ಕೂಡ ಪರಿಚಯಿಸಲಾಗಿದೆ. ನೈಸರ್ಗಿಕವಾಗಿ ಹಣ್ಣು ಮಾಡಲಾಗಿರುವುದನ್ನು ಮಾರಾಟ ಮಾಡಲಾಗುತ್ತಿದೆ.
ಕಳೆದ ವರ್ಷ ಮಂಡಳಿಯಿಂದ ಆಯೋಜಿಸಿದ್ದ ಮೇಳದಲ್ಲಿ 950ಕ್ಕೂ ಹೆಚ್ಚು ಟನ್‌ ಮಾವು ಮಾರಾಟವಾಗಿತ್ತು. ಈ ವರ್ಷ ಆಗಲೇ 100ಕ್ಕೂ ಹೆಚ್ಚು ಟನ್ ಮಾವು ಮಾರಾಟವಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.