ಬೆಂಗಳೂರು: ನಾಲ್ಕೈದು ದಿನಗಳ ಹಿಂದೆ ಬೆಳಕಿಗೆ ಬಂದಿದ್ದ ಡಾಮಿನೋಸ್ನಲ್ಲಿ ಯುವತಿಯ ಮೇಲೆ ಮ್ಯಾನೇಜರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾನೇಜರ್ ಪುರುಷೋತ್ತಮ್ನನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಯನ್ನು ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ ಮ್ಯಾನೇಜರ್ ಪ್ರೇಮ ನಿವೇದನೆಯನ್ನು ಯುವತಿ ರಿಜೆಕ್ಟ್ ಮಾಡಿದ್ದಳು. ಪದೇ ಪದೆ ಯುವತಿಗೆ ಇದೇ ರೀತಿ ಕೆಲಸದ ಸ್ಥಳದಲ್ಲಿ ಕಿರುಕುಳ ಕೊಟ್ಟಿದ್ದ. ಆದರೆ, ಯುವತಿ ಈತನ ಪ್ರೀತಿಯನ್ನು ನಿರಾಕರಿಸಿ ಮತ್ತೊಬ್ಬ ಯುವಕನನ್ನು ಲವ್ ಮಾಡುತ್ತಿದ್ದಳು. ಮತ್ತೊಬ್ಬನ ಜೊತೆ ಚಾಟ್ ಮಾಡುತ್ತೀಯಾ ಎಂದು ಯುವತಿಯ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದ.
ಮೂರು ತಿಂಗಳ ಹಿಂದೆ ನಡೆದ ಯುವತಿಯ ಮೇಲಿನ ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕಪಾಳಕ್ಕೆ ಹೊಡೆದ ರಭಸಕ್ಕೆ ಯುವತಿ ಕೆಳಗೆ ಬಿದ್ದಿದ್ದಾಳೆ. ಘಟನೆ ನಡೆದು ಮೂರು ತಿಂಗಳಾದರೂ ಯುವತಿಯು ತನ್ನ ಕೆಲಸ ಹೋಗುತ್ತೆ ಎಂಬ ಆತಂಕದಿಂದ ಪೊಲೀಸರಿಗೆ ದೂರು ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಸುಮೋಟೋ ಕೇಸ್ ದಾಖಲಿಸಿದ್ದ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮ್ಯಾನೇಜರ್ ಪುರುಷೋತ್ತಮ್ನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.
ಓದಿ: ಪಿಜ್ಜಾ ಹಟ್‌ನಲ್ಲಿ ಕೆಲಸ ಮಾಡ್ತಿದ್ದ ಯುವತಿ ಮೇಲೆ ಮ್ಯಾನೇಜರ್‌ನಿಂದ ಕಪಾಳಮೋಕ್ಷ : ವಿಡಿಯೋ ವೈರಲ್