ETV Bharat / state

ಬೆಂಗಳೂರು ಮೆಟ್ರೋ ನೇಮಕಾತಿ: ಮ್ಯಾನೇಜರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಿಎಂಆರ್​ಸಿಯಲ್ಲಿ ಖಾಲಿ ಇರುವ ವಿವಿಧ ಮ್ಯಾನೇಜರ್​ ಹುದ್ದೆಗಳ ಕುರಿತ ಮಾಹಿತಿ ಇಲ್ಲಿದೆ.

Manager Job notification From BMRCL
Manager Job notification From BMRCL
author img

By ETV Bharat Karnataka Team

Published : Dec 8, 2023, 5:54 PM IST

ಬೆಂಗಳೂರು ಮೆಟ್ರೋ ರೈಲು​ ಕಾರ್ಪೊರೇಷನ್​​ ಲಿಮಿಟೆಡ್​​ನಲ್ಲಿ (ಬಿಎಂಆರ್​ಸಿಎಲ್​) ಖಾಲಿ ಇರುವ ಮ್ಯಾನೇಜರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 10 ಹುದ್ದೆಗಳಿವೆ. ನಿಯೋಜನೆ/ನೇರ ನೇಮಕಾತಿ ಆಧಾರದಡಿ ಭರ್ತಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಹಾಕಬಹುದು.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ: ಮ್ಯಾನೇಜರ್​ - 4, ಡೆಪ್ಯೂಟಿ ಜನರಲ್​ ಮ್ಯಾನೇಜರ್​ 6.

ವಿದ್ಯಾರ್ಹತೆ: ಬಿಇ/ಬಿ.ಟೆಕ್​ ಪದವಿ.

ವಯೋಮಿತಿ: ಜನರಲ್​ ಮ್ಯಾನೇಜರ್​ ಹುದ್ದೆಗೆ 50 ವರ್ಷ, ಡೆಪ್ಯೂಟಿ ಜನರಲ್​ ಮ್ಯಾನೇಜರ್​​ ಹುದ್ದೆಗೆ 45 ವರ್ಷ ವಯೋಮಿತಿ.

ಆಯ್ಕೆ ಪ್ರಕ್ರಿಯೆ: ಸಂದರ್ಶನದ ಮೂಲಕ ಆಯ್ಕೆ

ವೇತನ: ಜನರಲ್ ಮ್ಯಾನೇಜರ್​​ಗೆ 1,12,610- 1,60,620 ರೂ ಮತ್ತು ಡೆಪ್ಯೂಟಿ ಜನರಲ್​ ಮ್ಯಾನೇಜರ್‌ ಹುದ್ದೆಗೆ​ 63,880- 1,22,540 ರೂ ವೇತನ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತರು ಜನರಲ್​ ಮ್ಯಾನೇಜರ್​ (ಎಚ್​ಆರ್​​), ಬೆಂಗಳೂರು ಮೆಟ್ರೋ ರೈಲ್​ ಕಾರ್ಪೊರೇಷನ್​​ ಲಿಮಿಟೆಡ್​​, 3ನೇ ಮಹಡಿ​, ಬಿಎಂಟಿಸಿ ಕಾಂಪ್ಲೆಕ್ಸ್​, ಕೆ.ಎಚ್.ರಸ್ತೆ, ಶಾಂತಿನಗರ, ಬೆಂಗಳೂರು- 560027 ಇಲ್ಲಿಗೆ ಅರ್ಜಿ ಕಳುಹಿಸಿ.

ನವೆಂಬರ್​ 16ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕಡೆಯ ದಿನಾಂಕ ಡಿಸೆಂಬರ್​ 15. ಹಾರ್ಡ್​ ಕಾಪಿ ಸಲ್ಲಿಕೆಗೆ ಡಿಸೆಂಬರ್​​ 20 ಕಡೆ ದಿನ.

ಆರು ಮ್ಯಾನೇಜರ್​ ಹುದ್ದೆ: ಇದರ ಹೊರತಾಗಿ ಬಿಎಂಆರ್​ಸಿಎನಲ್ಲಿ ಸಿವಿಲ್​, ಪಿ-ವೇ, ಆಪರೇಷನ್ಸ್​ನ ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಆರು ಹುದ್ದೆ ನೇಮಕಾತಿ ನಡೆಸಲಾಗುವುದು. ಸಿವಿಲ್​, ಎಲೆಕ್ಟ್ರಾನಿಕ್​ ಹುದ್ದೆಗೆ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದಕ್ಕೆ ಮೆಟ್ರೋದಲ್ಲಿ 10 ವರ್ಷದ ಸೇವಾ ಅನುಭವ ಹೊಂದಿರಬೇಕಿದೆ. ಮೇಲ್ಕಂಡ ವಿಳಾಸಕ್ಕೆ ಆಫ್​ಲೈನ್​ ಮೂಲಕ ಡಿಸೆಂಬರ್​ 22ರೊಳಗೆ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು english.bmrc.co.inಗೆ ಭೇಟಿ ನೀಡಿ.

ಇದನ್ನೂ ಓದಿ: ಹಾಸನ ಜಿಲ್ಲಾ ಪಂಚಾಯತ್​ ನೇಮಕಾತಿ; 10 ನೇ ತರಗತಿ ಪಾಸ್​ ಆಗಿದ್ರೆ ಅರ್ಜಿ ಸಲ್ಲಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.