ಬೆಂಗಳೂರು: ಮೊದಲ ಹೆಂಡತಿ ಜೊತೆ ಬಾಳಲಾರದೆ ಎರಡನೇ ಮದುವೆ ಮಾಡಿಕೊಂಡಿರುವ ವ್ಯಕ್ತಿಯೊಬ್ಬ ಆಕೆಯೊಂದಿಗೂ ಕ್ಯಾತೆ ತೆಗೆದು ವರದಕ್ಷಿಣೆ ನೀಡುವಂತೆ ಒತ್ತಾಯಿಸಿ ಕೈ ಕೊಟ್ಟಿದ್ದಾನೆ. ಇದೀಗ ಪತಿಯಿಂದ ಮೋಸ ಹೋದ ಸಂತ್ರಸ್ತೆ ಜೆ.ಸಿ.ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕೆಲ ವರ್ಷಗಳ ಹಿಂದೆ ಬೆಂಗಳೂರು ಮೂಲದ ಉದ್ಯಮಿ ಮೊಹಮ್ಮದ್ ಸಲ್ಮಾನ್ ಷರೀಫ್ನೊಂದಿಗೆ ಸಂತ್ರಸ್ತೆ ವಿವಾಹ ಮಾಡಿಕೊಂಡಿದ್ದರು. ವರದಕ್ಷಿಣೆಯಾಗಿ 20 ಲಕ್ಷ ಮೌಲ್ಯದ 400 ಗ್ರಾಂ ಚಿನ್ನ ಹಾಗೂ ಕಾರು ನೀಡಲಾಗಿತ್ತು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಈ ದಂಪತಿಗೆ ಒಂದು ಮಗುವಾಗಿತ್ತು. ಕಾಲ ಕ್ರಮೇಣ ಸಂತ್ರಸ್ತೆಗೆ ತನ್ನ ಪತಿಗೆ ಮೊದಲೇ ಮದುವೆಯಾಗಿರುವ ವಿಚಾರ ಗೊತ್ತಾಗಿದೆ. ಇದನ್ನು ಪ್ರಶ್ನಿಸಿದ ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಕರ್ನೂಲ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದರು.
ಇದನ್ನೂ ಓದಿ: ಕಾರು ಖರೀದಿಗೆ ಹೋಗಿದ್ದ ತುಮಕೂರು ರೈತನಿಗೆ ಅವಮಾನ : ಟ್ವೀಟ್ ಮಾಡಿ ಆನಂದ್ ಮಹೀಂದ್ರಾ ಹೇಳಿದ್ರು ಈ ಮಾತು!
ಬೆಂಗಳೂರಿನ ಬೆನ್ಸನ್ ಟೌನ್ನಲ್ಲಿರುವ ಪತಿಯ ನಿವಾಸಕ್ಕೆ ಬಂದಾಗ, ಈ ವೇಳೆ ತನ್ನ ಅಸಲಿ ವರಸೆ ಬದಲಿಸಿದ ಪತಿ, ಸಂಸಾರ ನಡೆಸಬೇಕಾದರೆ ₹25 ಲಕ್ಷ ನೀಡುವಂತೆ ಡಿಮ್ಯಾಂಡ್ ಮಾಡಿ ನುಣುಚಿಕೊಂಡು ನಾಪತ್ತೆಯಾಗಿದ್ದನಂತೆ. ಈ ಸಂಬಂಧ ಜೆ.ಸಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ