ETV Bharat / state

ಆಟೋ ಕಿತ್ತುಕೊಂಡಿದ್ದಕ್ಕೆ ಪ್ರಾಣ ಕಿತ್ತುಕೊಂಡ ಹಂತಕ.. ಸಂಧಾನಕ್ಕೆ ಕರೆಸಿ ಸಮಾಧಿ ದಾರಿ ತೋರಿಸಿದ ಆರೋಪಿ ಅರೆಸ್ಟ್

ನಂದಿನಿ ಲೇಔಟ್​ನ ನರಸಿಂಹಸ್ವಾಮಿ ಲೇಔಟ್​ನಲ್ಲಿ ವಿಶ್ವನಾಥನನ್ನು ಕೊಲೆ ಮಾಡಿದ ಆರೋಪದಡಿ ರವಿ ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿ ರವಿ ಹಾಗೂ ವಿಶ್ವ ಇಬ್ಬರು ಸ್ನೇಹಿತರಾಗಿದ್ದರು‌. ಒಂದೇ ಏರಿಯಾದಲ್ಲಿ ವಾಸವಾಗಿದ್ದರು.

author img

By

Published : Feb 10, 2022, 4:36 PM IST

Updated : Feb 10, 2022, 4:47 PM IST

ravi
ಆರೋಪಿ ರವಿ

ಬೆಂಗಳೂರು: ಮಾತುಕತೆಗಾಗಿ ಮನೆ ಬಳಿ ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಸ್ನೇಹಿತನ ಕುತ್ತಿಗೆ ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ನಂದಿನಿ ಲೇಔಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ‌‌. ನಂದಿನಿ ಲೇಔಟ್​ನ ನರಸಿಂಹಸ್ವಾಮಿ ಲೇಔಟ್​ನಲ್ಲಿ ವಿಶ್ವನಾಥ್ ನನ್ನ ಕೊಲೆ ಮಾಡಿದ ಆರೋಪದಡಿ ರವಿ ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿ ರವಿ ಹಾಗೂ ವಿಶ್ವ ಇಬ್ಬರು ಸ್ನೇಹಿತರಾಗಿದ್ದರು‌. ಒಂದೇ ಏರಿಯಾದಲ್ಲಿ ವಾಸವಾಗಿದ್ದರು.

ಡಿಸಿಪಿ ವಿನಾಯಕ್ ಪಾಟೀಲ್ ಮಾತನಾಡಿದರು

ಹತ್ಯೆಯಾದ ವಿಶ್ವ, ಸ್ನೇಹಿತ ರವಿಗೆ ಬೇರೊಬ್ಬರಿಗೆ ಹೇಳಿ ಜೀವನಕ್ಕೆಂದು ಆಟೋ ಕೊಡಿಸಿದ್ದ. ಆದರೆ, ಕೊಲೆಯಾದ ವಿಶ್ವ ರವಿಯ ಪತ್ನಿ ಮೇಲೆ ಕಣ್ಣು ಹಾಕಿ ಸಲುಗೆ ಬೆಳೆಸಿಕೊಂಡಿದ್ದ. ಮೊದ ಮೊದಲು ಫ್ಯಾಮಿಲಿ ಫ್ರೆಂಡ್ ಅಂತ ಹತ್ತಿರ ಸೇರಿಸಿಕೊಂಡಿದ್ದ ರವಿಗೆ ಯಾವಾಗ ಸ್ನೇಹಿತ ವಿಶ್ವ, ತನ್ನ ಫ್ಯಾಮಿಲಿ ಮೇಲೆನೇ ಕಣ್ಣು ಹಾಕ್ತಿದ್ದಾನೆಂದು ಗೊತ್ತಾಯ್ತೋ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ. ಆದರೆ, ಆತನ ಪತ್ನಿಗೆ ತನ್ನ ಪತಿ ರವಿ ವಿಶ್ವನ‌ ಮೇಲೆ ಹಗೆ ಸಾಧಿಸುತ್ತಿದ್ದಾನೆಂದು ಗೊತ್ತಿರಲಿಲ್ಲ.

ಯಾವಾಗ ರವಿಗೆ ಮ್ಯಾಟರ್ ಗೊತ್ತಾಗಿದೆ ಎಂದು ವಿಶ್ವನಿಗೆ ಗೊತ್ತಾಯ್ತೋ ಒಂದಷ್ಟು ಕಿರಿಕ್ ನಡೆದಿತ್ತು. ಇದೇ ವಿಚಾರವಾಗಿ ವಿಶ್ವ ಏರಿಯಾ ಬಿಟ್ಟು ವಿದ್ಯಾರಣ್ಯಪುರಕ್ಕೆ ಶಿಫ್ಟ್ ಆಗಿದ್ದ. ಇನ್ನೂ ಮದ್ವೆಯಾಗದ ವಿಶ್ವನಿಗೆ ರವಿ ಪತ್ನಿ ಮೇಲೆ ಸಲುಗೆ ಹೆಚ್ಚಾಗಿತ್ತು. ಸಹನೆಯ ಕಟ್ಟೆ ಒಡೆದು ರವಿ ಮತ್ತೆ ಕಿರಿಕ್ ಮಾಡಿದ್ದ. ಇದಕ್ಕೆ ವಿಶ್ವನಿಗೆ ನೀಡಿದ್ದ ಆಟೋವನ್ನ ತನ್ನ ಸ್ನೇಹಿತನಿಗೆ ಹೇಳಿ ವಾಪಸ್ ಪಡೆದು ನಂತರ ಫೋನ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ.

ಆಟೋ ವಾಪಸ್ ಪಡೆದ ದಿನವೇ ವಿಶ್ವನಿಗೆ ಸ್ಕೆಚ್ ಹಾಕಿದ್ದ ರವಿ ಪ್ಲಾನ್ ಮಾಡಿ ನರಸಿಂಹ ಲೇಔಟ್​ನಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದ. ಮನೆ ಬಾಗಿಲಲ್ಲಿ ಬಂದು ಮಾತನಾಡಿ ಹೋಗುವಷ್ಟರಲ್ಲಿ ಮತ್ತೊಂದು ಆಟೋದಲ್ಲಿ ಬಂದ ರವಿ, ವಿಶ್ವನ ಕತ್ತು ಸೀಳಿ ತುಮಕೂರಿಗೆ ಎಸ್ಕೇಪ್ ಆಗಿದ್ದ.

ಸ್ಥಳದಲ್ಲಿದ್ದ ಸಿಸಿಟಿವಿಗಳನ್ನ ಆಧರಿಸಿ ಆಟೋ ಯಾವ ರಸ್ತೆಯಲ್ಲಿ ಸಾಗಿದೆ ಎಂದು ಫಾಲೋ ಮಾಡಿ ಹತ್ಯೆ ನಡೆದು 24 ಗಂಟೆ ಅವಧಿಯಲ್ಲಿ ನಂದಿನಿ ಲೇಔಟ್ ಪೊಲೀಸರು ಆರೋಪಿಯನ್ನ ತುಮಕೂರಿನಲ್ಲಿ ಬಂಧಿಸಿದ್ದಾರೆ. ಸದ್ಯ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.

ಓದಿ: ಚಿಕ್ಕಬಳ್ಳಾಪುರ: ದಂಪತಿಗಳ ಕೊಲೆ, ಬೆಚ್ಚಿ ಬಿದ್ದ ಜನತೆ

Last Updated : Feb 10, 2022, 4:47 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.