ETV Bharat / state

ಬಿಎಂಟಿಸಿ ಬಸ್ ಟಯರ್ ಸ್ಫೋಟ: ಕಾಲು‌ ಮುರಿದುಕೊಂಡ ಪ್ರಯಾಣಿಕ - ಈಟಿವಿ ಭಾರತ ಕನ್ನಡ

ಬಿಎಂಟಿಸಿ ಬಸ್​ನ ಹಿಂಬದಿ ಚಕ್ರ ಸ್ಫೋಟಗೊಂಡು ಅದೇ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡರು.

Kn_bng
ಬಿಎಂಟಿಸಿ ಬಸ್ ಟೈಯರ್ ಬ್ಲಾಸ್ಟ್
author img

By

Published : Dec 5, 2022, 8:25 PM IST

ಬೆಂಗಳೂರು: ಚಲಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ನ ಚಕ್ರ ಸ್ಫೋಟಗೊಂಡು ಪ್ರಯಾಣಿಕನೋರ್ವನ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿರುವ ಘಟನೆ ಇಂದು ಮಧ್ಯಾಹ್ನ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆಯಿತು.

ಗಾಯಾಳು ಪ್ರಯಾಣಿಕ

ದುರ್ಗಪ್ಪ ಗಾಯಾಳು ಪ್ರಯಾಣಿಕ. ಬಾಗಲಕೋಟೆ ಮೂಲದ ದುರ್ಗಪ್ಪ ಡ್ರೈವಿಂಗ್ ಕೆಲಸ ಮಾಡುತ್ತಿದ್ದು ಮಧ್ಯಾಹ್ನ ಮಹಾಲಕ್ಷ್ಮೀ ಲೇಔಟ್‌ನಿಂದ ಯಲಹಂಕಗೆ ಕೆಲಸದ ನಿಮಿತ್ತ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ವಿದ್ಯಾರಣಪುರ ಬಳಿ ಬಸ್​ನ ಹಿಂಬದಿ ಚಕ್ರ ಸ್ಫೋಟಗೊಂಡಿದೆ. ಬಸ್​ನ ಒಳಭಾಗದ ತಗಡು ಕಿತ್ತು ಬಂದು ದುರ್ಗಪ್ಪ ಕಾಲಿಗೆ ಬಲವಾಗಿ ಬಡಿದು ಕಾಲು ಮುರಿದಿದೆ. ಕೂಡಲೇ ಸಹಪ್ರಯಾಣಿಕರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ‌‌‌‌. ಜಾಲಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಏರ್​ಪೋರ್ಟ್​ ರಸ್ತೆಯಲ್ಲಿ ಕಾರು ಅಪಘಾತ: ತಪ್ಪಿದ ಭಾರಿ ಅನಾಹುತ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.