ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮತ್ತು ಬ್ಲ್ಯಾಕ್ ಫಂಗಸ್ ಸೋಂಕಿತರು ಔಷಧಿ ಸಿಗದೆ ಪರದಾಡುತ್ತಿದ್ದಾರೆ. ಒಂದೊಂದು ಡೋಸ್‌ಗಾಗಿ ದಿನವೆಲ್ಲ ಅಲೆದಾಡುತ್ತಿದ್ದಾರೆ. ಇಂಥ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಿಡಿಗೇಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಳಸಂತೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧಿ ಮಾರಾಟಕ್ಕೆ ಯತ್ನಿಸಿದ ಆರೋಪಿ ರಾಮ್ ಮೋಹನ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರಂ ಕುಂದಲಹಳ್ಳಿ ಐಟಿಐ ಗೇಟ್ ಬಳಿ ಔಷಧಿ ಮಾರುತ್ತಿದ್ದ ಈತನನ್ನು ಔಷಧಿ ಸಮೇತ ಖಾಕಿ ಪಡೆ ಬಂಧಿಸಿದೆ. ಬ್ಲ್ಯಾಕ್ ಫಂಗಸ್ನ 80 ಮಾತ್ರೆ ಮತ್ತು 17 ಇಂಜೆಕ್ಷನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಅಂದಾಜು ಬೆಲೆ ನಾಲ್ಕೂವರೆ ಲಕ್ಷ ರೂಪಾಯಿ ಎನ್ನಲಾಗಿದೆ. ಕೆ.ಆರ್.ಪುರಂ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆದಿದೆ.
ಇದನ್ನೂ ಓದಿ :ರೌಡಿಗಳಿಗೆ ಪಿಸ್ತೂಲ್ ಸಪ್ಲೈ: ಮಾರ್ಕೆಟ್ ಸತೀಶ್ ಸೇರಿ ಮೂವರ ಬಂಧನ