ಬೆಂಗಳೂರು: ಜಿಎಸ್ಟಿ ಪರಿಹಾರಕ್ಕಾಗಿ ರಾಜ್ಯಗಳು ಸಾಲ ತೆಗೆದುಕೊಳ್ಳಲಿ ಎಂಬ ಕೇಂದ್ರ ಸರ್ಕಾರದ ಸಲಹೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ.
ಟ್ವೀಟ್ ಮೂಲಕ ರಾಜ್ಯಸರ್ಕಾರಕ್ಕೆ ಈ ಸಲಹೆ ನೀಡಿರುವ ಅವರು, ಕೇಂದ್ರವು ರೂಪಿಸಿರುವ ಜಿಎಸ್ಟಿ ಪರಿಹಾರಕ್ಕಾಗಿ ನೀಡಿರುವ 2 ಆಯ್ಕೆಗಳನ್ನು ಕರ್ನಾಟಕ ಸರ್ಕಾರ ತಿರಸ್ಕರಿಸಬೇಕು. ಕೇಂದ್ರ ಸರ್ಕಾರದ ತಪ್ಪುಗಳಿಗೆ ರಾಜ್ಯಗಳಿಗೆ ಹೊರೆ ಹೊರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವೇ ಸಾಲ ಪಡೆಯುವ ಕಾರ್ಯ ಮಾಡುವ ಬದಲು ಕೇಂದ್ರವೇ ಸಾಲ ಪಡೆದು ರಾಜ್ಯಗಳಿಗೆ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು. ಈ ರೀತಿ ಮಾಡಿ ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಕೇಳಬೇಕು ಎಂದು ತಿಳಿಸಿದ್ದಾರೆ.
-
Karnataka too should reject the two options for GST compensation mooted by the Centre. States cannot be burdened for the mistakes of the Central Govt. State should ask the Centre to take a loan & provide compensation to the States, instead of the state borrowing.
— Mallikarjun Kharge (@kharge) August 31, 2020 " class="align-text-top noRightClick twitterSection" data="
">Karnataka too should reject the two options for GST compensation mooted by the Centre. States cannot be burdened for the mistakes of the Central Govt. State should ask the Centre to take a loan & provide compensation to the States, instead of the state borrowing.
— Mallikarjun Kharge (@kharge) August 31, 2020Karnataka too should reject the two options for GST compensation mooted by the Centre. States cannot be burdened for the mistakes of the Central Govt. State should ask the Centre to take a loan & provide compensation to the States, instead of the state borrowing.
— Mallikarjun Kharge (@kharge) August 31, 2020
ರಾಹುಲ್ ಗಾಂಧಿ ಪ್ರಾರಂಭದಿಂದಲೂ ಜಿಎಸ್ಟಿಯ ದೋಷಪೂರಿತ ಅನುಷ್ಠಾನದ ಬಗ್ಗೆ ಸರ್ಕಾರವನ್ನು ಎಚ್ಚರಿಸುತ್ತಲೇ ಬಂದಿದ್ದರು. ಆದರೆ ಇವರ ಮಾತಿಗೆ ಕೇಂದ್ರ ಬೆಲೆ ಕೊಡಲಿಲ್ಲ. ಕೇಂದ್ರ ಸರ್ಕಾರ ತನ್ನ ದುರಹಂಕಾರವನ್ನು ಬಿಡಬೇಕು ಮತ್ತು ವ್ಯಾಪಾರ ಸಮುದಾಯಗಳು ನೀಡುವ ಸಲಹೆಯನ್ನು ಆಲಿಸಬೇಕು ಎಂದಿದ್ದಾರೆ.
ಪ್ರಸ್ತುತ ಕಾರ್ಯತಂತ್ರವು ವ್ಯವಹಾರಗಳನ್ನು ಮತ್ತು ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.