ETV Bharat / state

ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ಅದೇ ನನಗೆ ನಿಮ್ಮ ಗೌರವ: ಮಲ್ಲಿಕಾರ್ಜುನ ಖರ್ಗೆ - ಕಲಬುರಗಿ ಬ್ಲಾಕ್ ಕಾಂಗ್ರೆಸ್ ಕಮಿಟಿ

ನನಗೆ ನಿಜವಾದ ಗೌರವ ಸಲ್ಲಿಸಬೇಕು, ನೀಡಬೇಕು ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
author img

By

Published : Nov 6, 2022, 7:31 PM IST

Updated : Nov 6, 2022, 8:13 PM IST

ಬೆಂಗಳೂರು: ನಮ್ಮ ಜನ ಜಾಗೃತರಾಗಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕು ಎಂಬ ಪಣ ತೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟರು.

ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಸದ್ಭಾವನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ನನಗೆ ನಿಜವಾದ ಗೌರವ ಸಲ್ಲಿಸಬೇಕು, ನೀಡಬೇಕು ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ವೇದಿಕೆ ಮೇಲಿರುವ ಎಲ್ಲಾ ಕಾಂಗ್ರೆಸ್ ನಾಯಕರು ಒಗ್ಗಟ್ಟು ಮೂಡಿಸಿಕೊಳ್ಳಿ, ಸಣ್ಣ ಪುಟ್ಟ ವೈಮನಸ್ಸು ಮರೆಯಿರಿ. 40 ಪರ್ಸಂಟ್ ಕಮಿಷನ್​​ ಸರ್ಕಾರ ತೊಲಗಬೇಕು. ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಹೋರಾಡಬೇಕು. ಹಿಂದಿನ ಸರ್ಕಾರ ನೀಡಿ ವಿವಿಧ ಕಾರ್ಯಕ್ರಮವನ್ನು ಜನರಿಗೆ ತಿಳಿಸಿ. ನಾವು ಸಾಧನೆಗಳನ್ನು ಮುಂದಿಟ್ಟು ಹೋದರೆ ಸಾಧಿಸಬಹುದು. ಪಕ್ಷದ ವಿರುದ್ಧ ಮುನಿಸಿಕೊಂಡವರು, ಕಾರಣಾಂತರದಿಂದ ದೂರಾದವರು, ಯುವಕರನ್ನು ಪಕ್ಷಕ್ಕೆ ಮರಳಿ ಕರೆಸಬೇಕು ಎಂದರು.

ಸದ್ಭಾವನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಪಕ್ಷದ ಅಧ್ಯಕ್ಷನಾಗಿ ನನ್ನ ಜವಾಬ್ದಾರಿ ಹೆಚ್ಚಿದೆ. ಸಾಕಷ್ಟು ಡಿಕ್ಲರೇಷನ್​ಗಳನ್ನು ನಾನು ಈಡೇರಿಸಬೇಕಿದೆ. ಅದನ್ನು ಒಂದೊಂದಾಗಿ ಆರಂಭಿಸಿದ್ದೇನೆ. ಯುವಕರಿಗೆ, ಮಹಿಳೆಯರಿಗೆ ಪ್ರಾಧಾನ್ಯತೆ ನೀಡಬೇಕಿದೆ. ಅವರವರ ಶಕ್ತ್ಯಾನುಸಾರ ಕೆಲಸ ಕೊಡಿಸಬೇಕಿದೆ. ಪ್ರತಿಯೊಬ್ಬ ಯುವಕರಲ್ಲೂ ಒಗ್ಗಟ್ಟು ಮೂಡಿಸಬೇಕು. ಜನರ ಬಳಿ ತೆರಳಿ ವಿಷಯ ಮನದಟ್ಟು ಮಾಡಿ. ಕಾಂಗ್ರೆಸ್ ಸರ್ಕಾರ ತಂದಿದ್ದ ಯೋಜನೆಯನ್ನು ಇಂದಿನ ಸರ್ಕಾರ ನಿಲ್ಲಿಸಿದೆ. ಅದನ್ನು ಅರಿತು, ಜನರಿಗೆ ತಿಳಿಸಬೇಕು.

ರಾಹುಲ್​ ಗಾಂಧಿ ನಮಗೆ ಶಕ್ತಿ ತುಂಬಿದ್ದಾರೆ: ಮಾಧ್ಯಮಗಳು ಸಹ ಮನೆ ಮನೆಗೆ ತೆರಳಿ ಜನರ ಅಭಿಪ್ರಾಯ ಸ್ವೀಕರಿಸಬೇಕು. ಪಕ್ಷದ ಕಾರ್ಯಕರ್ತರು ಪಟ್ಟಣ ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿ ಜನ ಜಾಗೃತಿ ಮೂಡಿಸಿದಾಗ ಮಾತ್ರ ಬಿಜೆಪಿಯನ್ನು ಕಿತ್ತೆಸೆದು ಕಾಂಗ್ರೆಸ್​ ಅನ್ನು ಅಧಿಕಾರಕ್ಕೆ ತರಲು ಸಾಧ್ಯ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ನಮಗೆ ಶಕ್ತಿ ತುಂಬಿದ್ದಾರೆ. ನಾವು ನಮ್ಮನ್ನು ತೊಡಗಿಸಿಕೊಂಡು ಮುಂದುವರಿಯಬೇಕು. ಭಾರತ್ ಜೋಡೊ ಯಾತ್ರೆ ಯಶಸ್ವಿಯಾಗಿದೆ ಎಂದರು.

ನನ್ನ ಸೇವೆಯನ್ನು ಪಕ್ಷ ಪರಿಗಣಿಸಿದೆ: ಬೃಹತ್ ಸಂಸ್ಥೆಗಳಲ್ಲಿ ಸಾವಿರಾರು ಮಂದಿ ನಡುವೆ ಕೆಲಸ ಮಾಡುವಾಗ ಅಲ್ಲಿ ಸಂಘಟನೆ ಕಟ್ಟಿ ನೇತೃತ್ವ ವಹಿಸಿ ನಮ್ಮವರನ್ನು ಮುಂದುವರಿಸಿಕೊಂಡು ಹೋಗುವ ಕಾರ್ಯ ಮಾಡಿದೆ. ನಮ್ಮ ಕೆಲಸಕ್ಕೆ ಬೆಲೆ ಸಿಗಬೇಕಾದರೆ ಈ ರೀತಿ ತಳ ಮಟ್ಟದಿಂದ ಬೆಳೆಯಬೇಕು. ನನ್ನ ಸೇವೆಯನ್ನು ಪಕ್ಷ ಪರಿಗಣಿಸಿದೆ. ವಕೀಲ ವೃತ್ತಿಗಾಗಿ ಬೆಂಗಳೂರಿಗೆ ಬಂದಿದ್ದೆ. ಇಲ್ಲಿನ ಬಾರ್ ಕೌನ್ಸಿಲ್​ಗೆ ಬಂದು ಕುಳಿತಾಗೆಲ್ಲಾ ನನ್ನನ್ನು ನಾಯಕರನ್ನಾಗಿಸುವ ಪ್ರಯತ್ನವನ್ನು ನಡೆಸುತ್ತಿದ್ದರು.

ಇಂದಿರಾ ನಾಯಕತ್ವ ಗೆಲ್ಲಲಿದೆ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಬಲವಾಗಿದೆ. ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಪಕ್ಷ ಇಬ್ಬಾಗ ಆದರೂ ಇಂದಿರಾ ನಾಯಕತ್ವ ಗೆಲ್ಲಲಿದೆ ಎಂದು ವಿವರಿಸುವ ಕಾರ್ಯ ನನಗಾಯಿತು. ಮಾಜಿ ಸಿಎಂ ದೇವರಾಜ್ ಅರಸ್ ರಾಜ್ಯಕ್ಕೆ ಸಮನ್ವಯಕಾರರಾಗಿದ್ದರು. 35 ವರ್ಷ ಒಳಗಿನ 10-15 ಮಂದಿಯನ್ನು ಕರೆದು ಕಲಬುರಗಿಯಲ್ಲಿ ಪಕ್ಷದ ಕೆಲಸ ಮಾಡಿ. ನಿಮಗೆ ಟಿಕೆಟ್ ಕೊಡುತ್ತೇನೆ. ನೀವು ಶಾಸಕರಾಗುತ್ತೀರಿ, ನಿಮ್ಮಿಂದ ಸಾಕಷ್ಟು ಕೆಲಸ ಆಗಬೇಕು ಎಂದು ಹೇಳಿದ್ದರು.

ರಾಷ್ಟ್ರೀಯ ನಾಯಕರ ಕೊಡುಗೆ: 1969 ರಲ್ಲಿ ಕಲಬುರಗಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಿದರು. ಹಂತ ಹಂತವಾಗಿ ಬೆಳೆದು ಇಂದು ರಾಷ್ಟ್ರೀಯ ಅಧ್ಯಕ್ಷಸ್ಥಾನ ಅಲಂಕರಿಸಿದ್ದೇನೆ. ಪಕ್ಷದ ರಾಷ್ಟ್ರೀಯ ನಾಯಕರ ಕೊಡುಗೆ ಇದು. ನಾನು ಒಂದೇ ಸಾರಿ ಮೇಲಕ್ಕೆ ಹಾರಿಲ್ಲ. ಮೆಟ್ಟಿಲುಗಳನ್ನು ಹತ್ತಿಕೊಂಡು ಬಂದು ಇಂದು ಉತ್ತುಂಗ ತಲುಪಿದ್ದೇನೆ. ಇಂದಿನ ಯುವ ಜನಾಂಗದವರು ಶಾಸಕ, ಮಂತ್ರಿ, ಸಿಎಂ, ಕೇಂದ್ರ ಸಚಿವರಾಗಬೇಕೆಂದು ಬಯಸುತ್ತಾರೆ. ರಾಜಕಾರಣಕ್ಕೆ ಬರುತ್ತಿದ್ದಂತೆ ತಾವು ಅಧಿಕಾರದ ಆಸೆ ಪಡುತ್ತಾರೆ. ಕಠಿಣ ಪರಿಶ್ರಮದಿಂದ ಸಾಗಿದರೆ, ನಿಷ್ಠೆಯಿಂದ ಮುನ್ನಡೆದರೆ ಗುರಿ ತಲುಪುತ್ತೀರಿ ಎಂದರು.

ಇದನ್ನೂ ಓದಿ: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಆಗಮನ; ಕಾರ್ಯಕರ್ತರ ಜೈಕಾರ

Last Updated : Nov 6, 2022, 8:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.