ETV Bharat / state

ಸಾಯೋವರೆಗೂ ನಾನು ಯಡಿಯೂರಪ್ಪ ಜೊತೆ ಇರ್ತೀನಿ: ಮಹೇಶ್ ಕುಮಟಳ್ಳಿ - ಮಹೇಶ್ ಕುಮಟಳ್ಳಿ

ಬಿಜೆಪಿಯಲ್ಲಿ ಎದ್ದಿರುವ ಬಂಡಾಯದ ಕುರಿತಂತೆ ಪ್ರತಿಕ್ರಿಯಿಸಿರುವ ನೀಡಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಮಾಧ್ಯಮದ ಮೂಲಕ ನನಗೆ ಆ ಸಭೆಯ ಬಗ್ಗೆ ತಿಳಿಯಿತು. ಆದರೆ, ಆ ಸಭೆಯಲ್ಲಿ ಯಾರು ಪಾಲ್ಗೊಂಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ವಿಷಯಗಳಲ್ಲಿ ನಾವು ಭಾಗಿಯಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

Mahesh Kumathalli
ಮಹೇಶ್ ಕುಮಟಳ್ಳಿ
author img

By

Published : May 29, 2020, 5:42 PM IST

ಬೆಂಗಳೂರು: ನಗರದ ಶಾಸಕರ ಭಾವನದಲ್ಲಿ ಉಮೇಶ್ ಕತ್ತಿ ಹಾಗೂ ಉತ್ತರ ಕರ್ನಾಟಕ ಶಾಸಕರ ಸಭೆಯ ಕುರಿತು ಪ್ರತಿಕ್ರಿಯೆ ನೀಡಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನಾನು ಸಾಯೋವರೆಗೆ ಯಡಿಯೂರಪ್ಪ ಜೊತೆ ಇರುತ್ತೇನೆ. ಬಿಜೆಪಿ ಪಕ್ಷ ಬಿಡುವುದಿಲ್ಲ ಎಂದು ಹೇಳಿದರು.

ಅಥಣಿ ಶಾಸಕ ಮಹೇಶ್ ಕುಮಟಳ್ಳಿ

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಭಾರತೀಯ ಜನತಾ ಪಕ್ಷವನ್ನು ನರೇಂದ್ರ ಮೋದಿ ನಾಯಕತ್ವ ಸೇರಿದಂತೆ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವವನ್ನು ಒಪ್ಪಿಕೊಂಡಿದ್ದೇವೆ. ಇದಕ್ಕೆ ಬದ್ಧರಾಗಿರುತ್ತೇವೆ ಎಂದರು.

ಮಾಧ್ಯಮದ ಮೂಲಕ ನನಗೆ ಆ ಸಭೆಯ ಬಗ್ಗೆ ತಿಳಿಯಿತು. ಆದರೆ, ಆ ಸಭೆಯಲ್ಲಿ ಯಾರು ಪಾಲ್ಗೊಂಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ವಿಷಯಗಳಲ್ಲಿ ನಾವು ಭಾಗಿಯಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಾಯಕತ್ವದ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಇವರು, ಏನೇ ಗೊಂದಲ ಇದ್ದರೂ ಹೈಕಮಾಂಡ್ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಹೇಗೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.