ಕೆಆರ್‌ಪುರಂ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬೆಂಗಳೂರು ಪೂರ್ವ ತಾಲೂಕು ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಉತ್ತರಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಉಂಟಾದ ಕಾರಣ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂ.ಪೂರ್ವ ತಾಲೂಕಿನ ವಾಲ್ಮೀಕಿ ಜನಾಂಗದ ಎಲ್ಲಾ ಮುಖಂಡರು ಭಾಗವಹಿಸಿದ್ದರು.
ತಹಶೀಲ್ದಾರ್ ಡಾ.ತೇಜಸ್ರವರಿಗೆ ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ನಿರ್ಮಾಣಕ್ಕೆ ವಾಲ್ಮೀಕಿ ಜನಾಂಗದ ಮುಖಂಡರು ಮನವಿ ಮಾಡಿದರು.ಬೆಂ.ಪೂರ್ವ ತಾಲೂಕು ತಹಶೀಲ್ದಾರ್ ಡಾ. ತೇಜಸ್ ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು. ವಾಲ್ಮೀಕಿ ಅವರು ಸಮಾಜಮುಖಿಯಾಗಿ ತತ್ವಗಳನ್ನು ನೀಡಿದ ಮಹಾನ್ ಜ್ಞಾನಿ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿಯಿಂದ ಪ್ರೇರಿತರಾದ ಪ್ರತಿಯೊಬ್ಬರು ಸಮಾಜದ ಹಿತದೃಷ್ಟಿಯಿಂದ ಚಿಂತನೆಗೆ ಆಲೋಚನೆ ಮಾಡಿ ಸಮಾಜದ ಏಳಿಗೆಗೆ ಕ್ರಮ ಕೈಗೊಂಡಿದ್ದಾರೆ ಎಂದು ನುಡಿದರು. ಸತ್ಯ, ನೀತಿ, ನಿಷ್ಠೆಯನ್ನು ಪ್ರತಿಯೊಬ್ಬ ಪ್ರಜೆಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ತಮ್ಮ ಜೀವನ ಶೈಲಿ ಹಾಗೂ ಉತ್ತಮ ಸಮಾಜಕ್ಕೆ ನಾಂದಿಗೆ ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.
ವಾಲ್ಮೀಕಿ ನಾಯಕ ಮಹಾ ಸಂಘದ ರಾಜ್ಯಾಧ್ಯಕ್ಷ ಅಂಜಿನಪ್ಪ, ಕೆಆರ್‌ಪುರಂ ವಿಭಾಗದ ಅಧ್ಯಕ್ಷ ನಾಗರಾಜ್, ಗೌರವ ಅಧ್ಯಕ್ಷ ರಾಮಚಂದ್ರಪ್ಪ, ಇಒ ಮಂಜುನಾಥ್, ಯುವ ಮುಖಂಡ ಅಜಯ್ ನಾಯಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.