ಬೆಂಗಳೂರು: ವಿಧಾನಸಭೆ ಉಪ ಚುನಾವಣಾ ಕಣ ರಂಗೇರುತ್ತಿದ್ದು, ಮಹಾಲಕ್ಷ್ಮೀ ಲೇಔಟ್ನ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಕಾರಣ ಅಭ್ಯರ್ಥಿಗಳು ಪೂಜೆ ಪುನಸ್ಕಾರದೊಂದಿಗೆ ನಾಮಪತ್ರ ಸಲ್ಲಿಸಲು ತಮ್ಮ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಬಂದಿದ್ದರು. ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ, ನೂರಕ್ಕೆ ನೂರರಷ್ಟು ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಭದ್ರಕೋಟೆ. ಎಲ್ಲ ಬಿಜೆಪಿ ಮುಖಂಡರ ಸಹಕಾರದೊಂದಿಗೆ ಹೆಚ್ಚು ಮತಗಳು ಬರಲಿವೆ. ಇವತ್ತು ಸಂಜೆಯಿಂದ ಬೂತ್ ಮಟ್ಟದಲ್ಲಿ ಕೆಲಸಗಳು ಶುರುವಾಗಲಿದೆ ಅಂತ ತಿಳಿಸಿದರು.
ನಂತರ ಮಾತನಾಡಿದ ಸಚಿವ ಸುರೇಶ್ ಕುಮಾರ್, ಪಕ್ಷದ ತೀರ್ಮಾನದಂತೆ ಮಹಾಲಕ್ಷ್ಮೀ ಲೇಔಟ್ನಿಂದ ಗೋಪಾಲಯ್ಯರನ್ನ ನಿಲ್ಲಿಸಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆಯಲ್ಲೇ ಕಾರ್ಯಕರ್ತರ ಸಂಖ್ಯೆ, ಉತ್ಸಾಹ ನೋಡಿದರೆ ನನಗೆ ವಿಶ್ವಾಸವಿದ್ದು, ಮಹಾಲಕ್ಷ್ಮೀ ಲೇಔಟ್ನಲ್ಲಿ ಗೋಪಾಲಯ್ಯ ಅತ್ಯಧಿಕ ಮತಗಳಿಂದ ಗೆಲ್ಲಲಿದ್ದಾರೆ ಎಂದ್ರು.