ಬೆಂಗಳೂರು: ಮುನಿರತ್ನ ಪರ ಭರ್ಜರಿ ಪ್ರಚಾರ ಮಾಡಿದ ನಾಯಕರಿಗೆ ಕಂದಾಯ ಸಚಿವ ಆರ್.ಅಶೋಕ್ ನಿವಾಸದಲ್ಲಿ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲ ನಾಯಕರೂ ಸಸ್ಯಹಾರಿ ಭೋಜನ ಸವಿದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮುನಿರತ್ನ ಪರ ಅಬ್ಬರದ ಪ್ರಚಾರ ನಡೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಟಿ ಅಮೂಲ್ಯ, ಸಚಿವರಾದ ಬಿ.ಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಆರ್.ವಿಶ್ವಾನಾಥ್ ಅವರಿಗೆ ಕಂದಾಯ ಸಚಿವ ಆರ್.ಅಶೋಕ್ ತಮ್ಮ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಿದ್ದರು.
ದರ್ಶನ್, ಅಭ್ಯರ್ಥಿ ಮುನಿರತ್ನ ಸೇರಿದಂತೆ ಎಲ್ಲ ನಾಯಕರು ಮುದ್ದೆ, ಚಪಾತಿ, ಅನ್ನ, ರಸಂ, ಪಾಯಸ ಸವಿದರು. ನಂತರ ಕೆಲಕಾಲ ಅಶೋಕ್ ನಿವಾಸದಲ್ಲಿಯೇ ವಿಶ್ರಾಂತಿ ಪಡೆದು ಪರಸ್ಪರ ಮಾತುಕತೆಯಲ್ಲಿ ತಲ್ಲೀನರಾಗಿದ್ದರು.