ETV Bharat / state

ಟ್ಯಾಕ್ಸಿ ಚಾಲಕನ ಜೊತೆ ಮನೆಬಿಟ್ಟು ಬಂದ ವಿವಾಹಿತೆ.. ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು, ಕಾರಣ ನಿಗೂಢ! - ದೇವನಹಳ್ಳಿ ಪೊಲೀಸ್​ ಠಾಣೆ

ಯುವಕ ಮತ್ತು ವಿವಾಹಿತ ಮಹಿಳೆ ಸಹ ಜೀವನ ನಡೆಸುತ್ತಿದ್ದು, ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಹೊರವಲಯದ ದೇವನಹಳ್ಳಿಯಲ್ಲಿ ನಡೆದಿದೆ.

Lovers committed suicide in Bengaluru, Bangalore crime news, Devanahalli police station, Married woman suicide in Devanahalli, ಬೆಂಗಳೂರಿನಲ್ಲಿ ಪ್ರೇಮಿಗಳು ಆತ್ಮಹತ್ಯೆ, ಬೆಂಗಳೂರು ಅಪರಾಧ ಸುದ್ದಿ, ದೇವನಹಳ್ಳಿ ಪೊಲೀಸ್​ ಠಾಣೆ, ದೇವನಹಳ್ಳಿಯಲ್ಲಿ ವಿವಾಹಿತೆ ಆತ್ಮಹತ್ಯೆಗೆ ಶರಣು,
ಟ್ಯಾಕ್ಸಿ ಚಾಲಕನ ಜೊತೆ ಮನೆಬಿಟ್ಟು ಬಂದ ವಿವಾಹಿತೆ
author img

By

Published : Jan 18, 2022, 12:05 PM IST

ದೇವನಹಳ್ಳಿ : ಆಕೆ ಮದುವೆಯಾಗಿದ್ದ ಗೃಹಿಣಿ. ಆತ ಮದುವೆಯಾಗದ ಟ್ಯಾಕ್ಸಿ ಚಾಲಕ. ಇಬ್ಬರು ಪರಸ್ಪರ ಇಷ್ಟಪಟ್ಟು, ಮನೆಬಿಟ್ಟು ಹೊರಬಂದು ದೇವನಹಳ್ಳಿಯಲ್ಲಿ ಗಂಡ ಹೆಂಡತಿ ಎಂದು ಹೇಳಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಗಂಡ - ಹೆಂಡತಿ ರೀತಿ ಜೀವನ ನಡೆಸುತ್ತಿದ್ದ ಈ ಪ್ರೇಮಿಗಳು ಇದೀಗ ನೇಣಿಗೆ ಶರಣಾಗಿದ್ದಾರೆ.

ಟ್ಯಾಕ್ಸಿ ಚಾಲಕನ ಜೊತೆ ಮನೆಬಿಟ್ಟು ಬಂದ ವಿವಾಹಿತೆ

ಬಸವರಾಜು(23) ಮತ್ತು ಜ್ಯೋತಿ(26) ನೇಣಿಗೆ ಶರಣಾದ ಪ್ರೇಮಿಗಳು. ಮೂಲತಃ ರಾಯಚೂರಿನವರಾದ ಇವರು ಭೇಟಿಯಾಗಿದ್ದು ಬೆಂಗಳೂರಿನ ಕೊಡಿಗೇಹಳ್ಳಿ ಬಳಿ. ಕಳೆದ ಒಂದು ತಿಂಗಳಿಂದ ಟ್ಯಾಕ್ಸಿ ಚಾಲಕ ಬಸವರಾಜು ಮತ್ತು ಜ್ಯೋತಿ ನಡುವೆ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆ ಪ್ರೇಮ ಮನೆ ಬಿಟ್ಟು ಬರುವಂತೆ ಕೂಡಾ ಮಾಡಿತ್ತು. ಕಳೆದ ಶನಿವಾರ ಏನಾಯ್ತೋ ಏನೋ, ಇಬ್ಬರು ದೇವನಹಳ್ಳಿಯಲ್ಲಿ ಹತ್ತು ದಿನಗಳ ಹಿಂದೆ ಬಾಡಿಗೆಗೆ ಬಂದಿದ್ದ ಮನೆಯಲ್ಲಿ ಒಂದೇ ವೇಲ್​ನಲ್ಲಿ ಪ್ಯಾನಿಗೆ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಓದಿ: 9 ವರ್ಷದಿಂದ ಕರೆಂಟ್​ ನೀಡಿಲ್ಲ.. ಆದರೆ ವಿಶೇಷಚೇತನ ವ್ಯಕ್ತಿಗೆ ಬಿಲ್​ ಕಳುಹಿಸುತ್ತಲೇ ಇದ್ದಾರೆ ವಿದ್ಯುತ್​ ಇಲಾಖೆ!

ರಾಯಚೂರಿನ‌ ಜ್ಯೊತಿ ಮತ್ತು ಕಲಬುರಗಿಯ ರಾಮು ಆರು ವರ್ಷಗಳ ಹಿಂದೆ ಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದರು. ಮದುವೆಯಾದ ನಂತರ ರಾಮು ಕೆಲಸಕ್ಕೆ ಎಂದು ಹೆಂಡತಿ ಜ್ಯೋತಿ ಜೊತೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಮದುವೆಯಾಗಿ ಆರು ವರ್ಷವಾದರೂ ಮಕ್ಕಳಿರಲಿಲ್ಲ ಎಂಬ ಬೇಸರವಿತ್ತು. ಇದೇ ಸಮಯಕ್ಕೆ ಗಂಡ ಕೆಲಸಕ್ಕೆ ಹೊಗಿದ್ದ ವೇಳೆ ಟ್ಯಾಕ್ಸಿ ಚಾಲಕ ಬಸವರಾಜು ಮನೆಗೆ ಬಂದು ಹೊಗುತ್ತಿದ್ದ. ಅಲ್ಲಿ ಪರಿಚಯವಾದ ಇಬ್ಬರು ಒಟ್ಟಿಗೆ ಜೀವನ ನಡೆಸುತ್ತಿದ್ದರು ಎನ್ನಲಾಗ್ತಿದೆ.

ಪ್ರೀತಿಸಿದ ಗಂಡನನ್ನು ಬಿಟ್ಟು ಪರಪುರುಷನ ಜೊತೆ ಬಂದ ಜ್ಯೋತಿ ಮತ್ತು ಮದುವೆಯಾಗದೇ ಒಪ್ಪಿಗೆ ಮೇರೆಗೆ ಒಟ್ಟಿಗೆ ವಾಸವಿದ್ದ ಬಸವರಾಜು ಸಂಬಂಧದ ವಿಷಯವಾಗಿ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದಿತ್ತು. ಆ ಮಾತುಕತೆ ನಂತರ ಏನಾಯ್ತೋ ಏನೋ ಸದ್ಯ ಇಬ್ಬರು ಆತ್ಯಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ದೇವನಹಳ್ಳಿ ಪೊಲೀಸರು ತನಿಖೆ ಮಾಡುತ್ತಿದ್ದು, ಇನ್ನಷ್ಟೇ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬರಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.