ETV Bharat / state

ಇಂದು ರಾಜ್ಯಾದ್ಯಂತ ಲಾಕ್​ಡೌನ್​ : ಸಿಲಿಕಾನ್​ ಸಿಟಿಯಲ್ಲಿ ಏನಿರುತ್ತೆ, ಏನಿರಲ್ಲ? - ಬೆಂಗಳೂರು ಲಾಕ್​ ಡೌನ್ ಎಫೆಕ್ಟ್ ಸುದ್ದಿ

ಕೊರೊನಾ ಸೋಂಕು ರಾಜಧಾನಿ ಬೆಂಗಳೂರಿನ ಎಲ್ಲೆಡೆ ಹಬ್ಬುತ್ತಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನಿನ್ನೆ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ ತನಕ ಯಾರೂ ಮನೆಯಿಂದ ಹೊರಗಡೆ ಬರುವಂತಿಲ್ಲ. ಸತತ 33 ಗಂಟೆಗಳ ಕಾಲ ಇಡೀ ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಲ್ಲಿರಲಿದೆ.

ಲಾಕ್​ ಡೌನ್
ಲಾಕ್​ ಡೌನ್
author img

By

Published : Jul 5, 2020, 7:09 AM IST

ಬೆಂಗಳೂರು: ಇಂದು ರಾಜ್ಯಾದ್ಯಂತ ಲಾಕ್​ಡೌನ್​ ​ಇದ್ದು, ಸಿಲಿಕಾನ್ ಸಿಟಿಯಲ್ಲಿ ಸದ್ಯ 144 ಸೆಕ್ಷನ್ ಜಾರಿಯಲ್ಲಿದೆ. ಹೊರಗಡೆ ಓಡಾಡುವವರ ವಿರುದ್ಧ ಎನ್​ಡಿಎಂಎ ಆ್ಯಕ್ಟ್ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ.

ಕೊರೊನಾ ಸೋಂಕು ರಾಜಧಾನಿ ಬೆಂಗಳೂರಿನ ಎಲ್ಲೆಡೆ ಹಬ್ಬುತ್ತಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನಿನ್ನೆ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ ತನಕ ಯಾರೂ ಮನೆಯಿಂದ ಹೊರಗಡೆ ಬರುವಂತಿಲ್ಲ. ಸತತ 33 ಗಂಟೆಗಳ ಕಾಲ ಇಡೀ ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಲ್ಲಿರಲಿದೆ.

ಇಂದು ಏನೆಲ್ಲಾ‌ ಸಿಗಲ್ಲ: ಸದ್ಯ ನಗರದ ಎಲ್ಲಾ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ. ಹೀಗಾಗಿ ಇಂದು ಸರ್ಕಾರಿ ಬಸ್​​, ಆಟೋ, ಟ್ಯಾಕ್ಸಿ ಸಂಚಾರ, ಯಾವುದೇ ಅಂಗಡಿ ಮುಂಗಟ್ಟು, ಶಾಪಿಂಗ್ ಮಾಲ್, ಮಸೀದಿ, ಚರ್ಚ್ ಮತ್ತು ದೇವಸ್ಥಾನ, ಮಾರುಕಟ್ಟೆ, ಬೀದಿಬದಿಯ ವ್ಯಾಪಾರ, ಖಾಸಗಿ ವಾಹನ ಮತ್ತು ಬೈಕ್​ಗಳಲ್ಲಿ ವಿನಾಕಾರಣ ಓಡಾಟ, ಪಾರ್ಕ್​​ಗಳಲ್ಲಿ ಸಮಯ ಕಳೆಯೋದು, ವಿಕೇಂಡ್ ಮೋಜು ಮಸ್ತಿಗೆ ಬ್ರೇಕ್ ಬೀಳಲಿದೆ.

ಏನೆಲ್ಲಾ ಲಭ್ಯವಿದೆ: ಮತ್ತೊಂದೆಡೆ ಮುಂಜಾನೆ ಅಗತ್ಯ ಸೇವೆಗಳಿಗೆ ಪೊಲೀಸರು ಅವಕಾಶ ನೀಡಲಿದ್ದಾರೆ. ಅಂದ್ರೆ ಹಾಲು, ಮೊಸರು, ಔಷದಿ ಅಂಗಡಿ, ಆ್ಯಂಬುಲೆನ್ಸ್, ತುರ್ತು ವಾಹನಗಳು ಓಡಾಟ‌ ಮಾಡಬಹುದು. ಸದ್ಯ ಪೊಲೀಸರಲ್ಲೂ ಅನೇಕರಿಗೆ ಕೊರೊನಾ ಸೋಂಕು ತಗುಲಿದ್ದು, ನಗರದ ಎಲ್ಲಾ ‌ರಸ್ತೆಗಳಲ್ಲಿ‌ ಬ್ಯಾರಿಕೇಡ್ ಅಳವಡಿಸಿ ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.