ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸುತ್ತಿರುವ ಬಿಜೆಪಿಯ ರಾಜ್ಯ ಚುನಾವಣಾ ಸಮಿತಿ ಬೆಂಗಳೂರಿನ ಹಾಲಿ ಶಾಸಕರು ಇರುವ ಕ್ಷೇತ್ರದಿಂದ ಒಂದೇ ಹೆಸರನ್ನು ಹೈಕಮಾಂಡ್ಗೆ ಕಳುಹಿಸುವ ನಿರ್ಧಾರಕ್ಕೆ ಬಂದಿದೆ. ಜಿಲ್ಲಾ ಕೋರ್ ಕಮಿಟಿಗಳಿಂದಲೂ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದ್ದು, ನಾಳೆ ನಡೆಯಲಿರುವ ಎರಡನೇ ದಿನದ ಚುನಾವಣಾ ಸಮಿತಿ ಸಭೆಯಲ್ಲಿ ಬೆಂಗಳೂರಿನ 28 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿನ ಪರಿಶೀಲನೆ ನಡೆಯಲಿದೆ.
ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಮತದಾನ ನಡೆಸಲಾಗಿದ್ದು, ಜಿಲ್ಲಾ ಕೋರ್ ಕಮಿಟಿಗಳಿಂದ ಅಭಿಪ್ರಾಯವನ್ನೂ ಸಂಗ್ರಹ ಮಾಡಲಾಗಿದೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕು ಎನ್ನುವ ಒಲವು ಸಭೆಯಲ್ಲಿ ವ್ಯಕ್ತವಾಗಿದ್ದು, ಸೋತಿರುವ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು, ನಾಳೆ ಈ ಬಗ್ಗೆ ರಾಜ್ಯ ಚುನಾವಣಾ ಸಮಿತಿ ತನ್ನ ನಿರ್ಧಾರವನ್ನು ಅಂತಿಮಗೊಳಿಸಲಿದೆ.
ಬೆಂಗಳೂರಿನ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ:
- ಯಲಹಂಕ- ವಿಶ್ವನಾಥ್.
- ಯಶವಂತಪುರ- ಎಸ್.ಟಿ.ಸೋಮಶೇಖರ್.
- ರಾಜರಾಜೇಶ್ವರಿ ನಗರ- ಮುನಿರತ್ನ.
- ಪದ್ಮನಾಭನಗರ- ಆರ್.ಅಶೋಕ್.
- ಬೆಂಗಳೂರು ದಕ್ಷಿಣ- ಎಂ. ಕೃಷ್ಣಪ್ಪ.
- ಬೊಮ್ಮನಹಳ್ಳಿ- ಸತೀಶ್ ರೆಡ್ಡಿ.
- ಕೆ.ಆರ್ ಪುರ- ಬೈರತಿ ಬಸವರಾಜ್.
- ಮಹದೇವಪುರ- ಅರವಿಂದ್ ಲಿಂಬಾವಳಿ.
- ಸಿ.ವಿ ರಾಮನ್ ನಗರ- ಎಸ್.ರಘು.
- ರಾಜಾಜಿ ನಗರ- ಸುರೇಶ್ ಕುಮಾರ್.
- ಮಹಾಲಕ್ಷ್ಮಿ ಲೇಔಟ್- ಗೋಪಾಲಯ್ಯ.
- ಮಲ್ಲೇಶ್ವರ- ಅಶ್ವಥ್ ನಾರಾಯಣ್.
- ಗೋವಿಂದರಾಜನಗರ- ಸೋಮಣ್ಣ
- ವಿಜಯನಗರ- ರವೀಂದ್ರ / ಉಮೇಶ್ ಶೆಟ್ಟಿ.
- ಬಸವನಗುಡಿ- ರವಿಸುಬ್ರಹ್ಮಣ್ಯ / ತೇಜಸ್ವಿನಿ ಅನಂತ್ ಕುಮಾರ್.
- ಜಯನಗರ- ಸಿ.ಕೆ.ರಾಮಮೂರ್ತಿ/ ಎನ್.ಆರ್ ರಮೇಶ್/ ಎಸ್.ಕೆ.ನಟರಾಜ್.
- ಚಿಕ್ಕಪೇಟೆ- ಉದಯ್ ಗರುಡಾಚಾರ್/ ಹೇಮಚಂದ್ರ ಸಾಗರ್.
- ಹೆಬ್ಬಾಳ- ಕಟ್ಟಾ ಸುಬ್ರಹ್ಮಣ್ಯ ನಾಯ್ಡು/ ನಾರಾಯಣಸ್ವಾಮಿ.
- ಶಿವಾಜಿನಗರ- ನಿರ್ಮಲ್ ಕುಮಾರ್ ಸುರಾನಾ/ ಸರವಣ/ರುಮಾನ್ ಬೇಗ್
- ಬ್ಯಾಟರಾಯನಪುರ- ತಮ್ಮೇಶ್ ಗೌಡ/ ಎ.ರವಿ/ ಮುನೀಂದ್ರ ಕುಮಾರ್.
- ಶಾಂತಿನಗರ- ಗೌತಮ್ ಕುಮಾರ್/ ವಾಸುದೇವ ಮೂರ್ತಿ.
- ಗಾಂಧಿನಗರ- ಸಪ್ತಗಿರಿ ಗೌಡ/ ಶಿವಕುಮಾರ್.
- ದಾಸರಹಳ್ಳಿ- ಮುನಿರಾಜು/ ಲೋಕೇಶ್.
- ಚಾಮರಾಜಪೇಟೆ- ಬಾಸ್ಕರ್ ರಾವ್/ ಬಿ.ವಿ.ಗಣೇಶ್/ ಲಹರಿ ವೇಲು.
- ಬಿಟಿಎಂ ಲೇಔಟ್- ಅನಿಲ್ ಶೆಟ್ಟಿ/ ವಿವೇಕ್ ರೆಡ್ಡಿ.
- ಆನೇಕಲ್- ಶಿವರಾಮ್/ ಶ್ರೀನಿವಾಸ್/ ಡಾ. ಸಂದೀಪ್.
- ಸರ್ವಜ್ಞ ನಗರ- ಪದ್ಮನಾಭ ರೆಡ್ಡಿ.
- ಪುಲಕೇಶಿ ನಗರ- ಸುಶೀಲಾ ದೇವರಾಜ್.
ಇದನ್ನೂ ಓದಿ:ಕುಮಾರಸ್ವಾಮಿ ಯಾರೊಂದಿಗೂ ಮೈತ್ರಿ ಬಯಸುತ್ತಿಲ್ಲ: ಚುನಾವಣೋತ್ತರ ಮೈತ್ರಿ ಬಗ್ಗೆ ದೇವೇಗೌಡರ ಮಾತು