ETV Bharat / state

ಅಪರಿಚಿತರಿಂದ ಜೀವ ಬೆದರಿಕೆ: ಸಿಡಿ ಯುವತಿ ಪರ ದೂರು ನೀಡಿದ ವಕೀಲರ ಆರೋಪ

ಮಾಜಿ ಸಚಿವ ರಮೇಶ್​ ಜಾರಕಿಹೊಳಿಯವರ ಸಿಡಿ ಪ್ರಕರಣ ಸಂಬಂಧ ವಕೀಲ ಜಗದೀಶ್ ಅವರು ಯುವತಿ ಪರವಾಗಿ ದೂರು ದಾಖಲಿಸಿದ್ದರು. ಇದೀಗ ಇವರಿಗೆ ಅಪರಿಚಿತರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಫೇಸ್​​ಬುಕ್​​ ಲೈವ್​ನಲ್ಲಿ ಬಂದು ಆತಂಕ ವ್ಯಕ್ತಪಡಿಸಿದ್ದಾರೆ‌.

ವಕೀಲ ಜಗದೀಶ್
Lawyer Jagadish
author img

By

Published : Mar 29, 2021, 11:18 AM IST

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗಗೊಂಡ ಪ್ರಕರಣ ಸಂಬಂಧ ಯುವತಿ ಪರ ವಕೀಲ ಜಗದೀಶ್ ಎಂಬುವವರಿಗೆ ಅಪರಿಚಿತರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಯುವತಿ ಪರ ದೂರು ನೀಡಿದಾಗಿನಿಂದಲೂ ನನಗೆ ಜೀವ ಬೆದರಿಕೆ ಬರುತ್ತಿದೆ‌. ಅಲ್ಲದೇ ಅಪರಿಚಿತ ವಾಹನಗಳ ನನ್ನ ವಾಹನ ಹಿಂದೆ ಸುಳಿದಾಡುತ್ತಿವೆ ಎಂದು ಫೇಸ್​ಬುಕ್​​ ಲೈವ್​​​​ನಲ್ಲಿ ಬಂದು ವಕೀಲ ಜಗದೀಶ್ ಆತಂಕ ವ್ಯಕ್ತಪಡಿಸಿದ್ದಾರೆ‌. ಇವರು ಸಿಡಿ ಯುವತಿ ಪರವಾಗಿ ಇತ್ತೀಚೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಓದಿ: ಸಿಡಿ ಪ್ರಕರಣ ಕುರಿತು ನನಗೆ ಏನೂ ಕೇಳಬೇಡಿ : ಡಿ.ಕೆ. ಶಿವಕುಮಾರ್

ಇದರಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಐಪಿಸಿ ಸೆಕ್ಷನ್ 354 ಎ ಅಡಿ (ಉದ್ದೇಶಪೂರ್ವಕವಾಗಿ ಲೈಂಗಿಕ ದೌರ್ಜನ್ಯ) ಸೇರಿದಂತೆ ವಿವಿಧ ಸೆಕ್ಷನ್ ಅಡಿ ಎಫ್ಐಆರ್ ದಾಖಲಾಗಿತ್ತು. ಯುವತಿ ಹಾಗೂ ಆಕೆಯ ಕುಟುಂಬಸ್ಥರಿಗೆ ಜೀವ ಬೆದರಿಕೆಯಿದೆ. ಹೀಗಾಗಿ ಪೊಲೀಸ್ ರಕ್ಷಣೆ ನೀಡಬೇಕೆಂದು ಅವರು ಇದೇ ವೇಳೆ ಮನವಿ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.