ETV Bharat / state

ಕಿರುಕುಳ ಆರೋಪ: ಇನ್​ಸ್ಪೆಕ್ಟರ್ ವಿರುದ್ಧ ರಾಷ್ಟ್ರಪತಿಗೆ ಬರೆದಿದ್ದ ಪತ್ರ ವೈರಲ್ - subramanya police station

ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ದೂರಿನ ಪತ್ರದಲ್ಲಿ ಠಾಣೆಯ ಪ್ರತಿಯೊಂದು ಅವ್ಯವಹಾರ ಹಾಗೂ ಇನ್​ಸ್ಪೆಕ್ಟರ್​​ ಕಿರುಕುಳದ ಬಗ್ಗೆ ಮಾಹಿತಿಯನ್ನ ಬರೆದಿದ್ದಾರೆ.

letter-have-been-written-to-the-president-against-the-inspector-has-gone-viral
ಕಿರುಕುಳ ಆರೋಪ: ಇನ್​ಸ್ಪೆಕ್ಟರ್ ವಿರುದ್ಧ‌ ರಾಷ್ಟ್ರಪತಿಗೆ ಬರೆದಿದ್ದ ಎನ್ನಲಾದ ಪತ್ರ ವೈರಲ್: ಹಾಗಾದರೆ ಆ ಪತ್ರ ಬರೆದಿದ್ದು ಯಾರು?
author img

By

Published : Mar 27, 2023, 10:41 PM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನ್ಯಾಯ ಕೊಡಿಸಬೇಕಾದ ಪೊಲೀಸರು ಅಕ್ರಮವೆಸಗಿ ದುರ್ವರ್ತನೆ ತೋರುವ ಘಟನೆಗಳು ಹೆಚ್ಚಾಗುತ್ತಿವೆ.‌ ಕೆಲ ದಿನಗಳ ಹಿಂದಷ್ಟೇ ಹಣಕ್ಕಾಗಿ ವ್ಯಕ್ತಿಯೋರ್ವನನ್ನು ಮಾರತ್ತಹಳ್ಳಿ ಪೊಲೀಸರು ಅಪರಿಹರಿಸಿದ ಅಪಾದನೆ ಹಸಿಯಿರುವಾಗಲೇ ಮತ್ತೋರ್ವ ಪೊಲೀಸ್ ಇನ್​ಸ್ಪೆಕ್ಟರ್ ವಿರುದ್ಧ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಸುಬ್ರಮಣ್ಯನಗರ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಶರಣಗೌಡ ವಿರುದ್ಧ ಠಾಣಾ ಸಿಬ್ಬಂದಿಗಳೇ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಷ್ಟ್ರಪತಿ, ಪ್ರಧಾನಿಮಂತ್ರಿಗಳಿಗೆ ಸಿಬ್ಬಂದಿಯೊಬ್ಬರು ದೂರು ನೀಡಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದೂರಿನಲ್ಲಿ ಠಾಣೆಯ ಪ್ರತಿಯೊಂದು ಅವ್ಯವಹಾರ ಹಾಗೂ ಇನ್​ಸ್ಪೆಕ್ಟರ್​​ ಕಿರುಕುಳದ ಬಗ್ಗೆ ಇಂಚಿಂಚು ಮಾಹಿತಿಯನ್ನ ಬರೆದಿದ್ದಾರೆ. ಆ ದೂರಿನ ಪ್ರತಿಯಲ್ಲಿ ಬಹುತೇಕ ವಸೂಲಿ ವಿಚಾರಗಳು ಪ್ರಸ್ತಾಪವಾಗಿವೆ.

ಸುಬ್ರಮಣ್ಯ ನಗರ ಠಾಣೆ ಇನ್​ಸ್ಪೆಕ್ಟರ್ ಶರಣಗೌಡ ವಿರುದ್ಧ ಈ ಪತ್ರ ವೈರಲ್ ಆಗ್ತಿದೆ‌. ಯಾವ್ ಹೋಟೆಲ್, ಯಾವ ಮಾಲ್, ಹಾಗೂ ಪಬ್​ನಿಂದ ಎಷ್ಟೆಷ್ಟು ಮಾಮೂಲಿ ಬರುತ್ತೆ ಅಂತಲೂ ಉಲ್ಲೇಖ ಮಾಡಲಾಗಿದೆ. ಜೊತೆಗೆ ಲಕ್ಷ ಲಕ್ಷ ಹಣ ಪಡೆದು ಮುಚ್ಚಿಹಾಕಿರುವ ಪ್ರಕರಣಗಳ ಎಫ್ಐಆರ್ ಹಾಗೂ ಯುಡಿಆರ್ ನಂಬರ್ ಸಮೇತ ದೂರುದಾರರರು ಉಲ್ಲೇಖ ಮಾಡಿದ್ದಾರೆ.

ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ‌ ಪ್ರತಿಕ್ರಿಯಿಸಿರುವ‌ ಇನ್​ಸ್ಪೆಕ್ಟರ್ ಶರಣಗೌಡ, 'ನನ್ನ ಮೇಲೆ ಬಂದಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳಾಗಿದೆ. ವಿನಾಕಾರಣ ನನ್ನ ಮೇಲೆ ಆಪಾದನೆ ಮಾಡಲಾಗಿದೆ‌‌‌.‌ ಪತ್ರ ಬರೆದ ಕಾನ್​ಸ್ಟೇಬಲ್ ಶಿವಕುಮಾರ್ ಎಂಬಾತನನ್ನು ವಿಚಾರಣೆ ನಡೆಸಿ ಹಿರಿಯ ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣ: ಮೂವರು ಸ್ಮಗ್ಲರ್ ಸೇರಿ ಆರು ಮಂದಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.