ETV Bharat / state

ಪ್ರಶ್ನೆ ಕೇಳಿದ್ದು ರವಿಕುಮಾರ್, ಉತ್ತರ ಕೊಟ್ಟಿದ್ದು ಸುಧಾಕರ್: ಸದನದ ಬಾವಿಗಿಳಿದು ಜೆಡಿಎಸ್​​ ಪ್ರತಿಭಟನೆ

ರಾಜ್ಯದಲ್ಲಿ ಹೊಸದಾಗಿ 62 ನರ್ಸಿಂಗ್ ಮತ್ತು 40 ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ವಿಚಾರದಲ್ಲಿ ದೊಡ್ಡ ಅವ್ಯವಹಾರವಾಗಿದೆ. ಇದರ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಈಗಾಗಲೇ ತನಿಖೆ ನಡೆಯುತ್ತಿದೆ. ಅತ್ಯಂತ ವ್ಯವಸ್ಥಿತ ತನಿಖೆ ನಡೆಯಲಿದೆ ಎಂದು ಸಚಿವ ಡಾ. ಸುಧಾಕರ್ ಭರವಸೆ ನೀಡಿದರು.

jds protest
ಬಾವಿಗಿಳಿದು ಜೆಡಿಎಸ್ ಪ್ರತಿಭಟನೆ
author img

By

Published : Mar 18, 2021, 7:29 PM IST

ಬೆಂಗಳೂರು: ನರ್ಸಿಂಗ್ ಕಾಲೇಜು ಹಾಗೂ ಅಲೈಡ್ ಕಾಲೇಜುಗಳ ‌ಅವ್ಯವಹಾರವನ್ನು ಸದನ ಸಮಿತಿಗೆ ವಹಿಸುವಂತೆ ಒತ್ತಾಯಿಸಿ ಜೆಡಿಎಸ್ ಸದಸ್ಯರು ಬೇಸರಗೊಂಡು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ವಿಧಾನ ಪರಿಷತ್​​ನಲ್ಲಿ ನಡೆಯಿತು.

ರಾಜ್ಯದಲ್ಲಿ ಹೊಸದಾಗಿ 62 ನರ್ಸಿಂಗ್ ಮತ್ತು 40 ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ವಿಚಾರದಲ್ಲಿ ದೊಡ್ಡ ಅವ್ಯವಹಾರವಾಗಿದೆ. ಇದರ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಎಂದು ಒತ್ತಾಯಿಸಿದರು. ಇದಕ್ಕೆ ಈಗಾಗಲೇ ತನಿಖೆ ನಡೆಯುತ್ತಿದೆ. ಅತ್ಯಂತ ವ್ಯವಸ್ಥಿತ ತನಿಖೆ ನಡೆಯಲಿದೆ ಎಂದು ಸಚಿವ ಡಾ. ಸುಧಾಕರ್ ಭರವಸೆ ನೀಡಿದರು. ಈ ಬಾರಿಯಾಗಿರುವ 45 ಕಾಲೇಜುಗಳ ತನಿಖೆಯ ವರದಿ ಬರಲಿದೆ. ಹಿಂದಿನ ಸರ್ಕಾರಗಳು ಪರವಾನಗಿ ನೀಡಿದ 650 ಕಾಲೇಜುಗಳ ಸ್ಥಿತಿಗತಿ ಬಗ್ಗೆ ಮೂರು ತಿಂಗಳ ಒಳಗೆ ವರದಿ ಕೊಡುವುದಾಗಿ ಭರವಸೆ ನೀಡಿದರು.

ಇದರಿಂದ ತಮಗೆ ಸಮಾಧಾನವಾಗಿದೆ ಎಂದು ಸದಸ್ಯ ರವಿಕುಮಾರ್ ತಿಳಿಸಿದರು. ಆದರೆ ಜೆಡಿಎಸ್ ಸದಸ್ಯರಾದ ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಅಪ್ಪಾಜಿಗೌಡ, ತಿಪ್ಪೇಸ್ವಾಮಿ, ರಮೇಶ್ ಗೌಡ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದನ ಸಮಿತಿಗೆ ವಹಿಸುವಂತೆ ಆಗ್ರಹಿಸಿ, ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ತನಿಖೆಯಿಂದ ಪರಿಹಾರ ಸಿಗಲ್ಲ. ಇದರಿಂದ ಸದನ ಸಮಿತಿ ರಚಿಸುವಂತೆ ಒತ್ತಾಯಿಸಿದರು.

ಸದನ ಸಮಿತಿಗೆ ವಹಿಸುವ ಕಾರ್ಯ ನಾನು ಮಾಡಲು ಸಾಧ್ಯವಿಲ್ಲ. ಪ್ರಶ್ನೆ ಕೇಳಿದ ಸದಸ್ಯರಿಗೆ ಸಚಿವರಿಂದ ಸಿಕ್ಕ ಉತ್ತರ ಸಮಾಧಾನ ತಂದಿದೆ. ಅಲ್ಲದೆ ನಿಯಮ 72ರ ಅಡಿ ನಡೆದ ಚರ್ಚೆಯಲ್ಲಿ ಹೆಚ್ಚಿನ ಸದಸ್ಯರು ಪಾಲ್ಗೊಳ್ಳಲು ಅವಕಾಶ ಇಲ್ಲ. ಅವಕಾಶವನ್ನು ಜೆಡಿಎಸ್ ಸದಸ್ಯರು ಪಡೆದು ಚರ್ಚೆ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಈಗಾಗಲೇ ಸಾಕಷ್ಟು ಸಮಯ ಕಳೆದಿದೆ. ಸರ್ಕಾರ ಸಹ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದೆ. ಹೀಗಿರುವಾಗ ಅನಗತ್ಯ ಗದ್ದಲ ಬೇಡ. ಸುಗಮ ಕಲಾಪ ನಡೆಸಲು ಅವಕಾಶ ಮಾಡಿಕೊಡಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಮನವಿ ಮಾಡಿದರು.

ಆದರೂ ಜೆಡಿಎಸ್ ಸದಸ್ಯರು ತಮ್ಮ ಪಟ್ಟು ಸಡಿಲಿಸಲಿಲ್ಲ. ಕಾಂಗ್ರೆಸ್ ಪಕ್ಷ ಸದಸ್ಯರು ಸಹ ತಮ್ಮ ಪ್ರಶ್ನೆ ಕೇಳಲು ಹಿಂದೇಟು ಹಾಕಿದರು. ಪರಿಷತ್ ಆರ್ಡರ್​​ನಲ್ಲಿ ಇಲ್ಲದ ಸಂದರ್ಭ ಚರ್ಚೆ ನಡೆಸುವುದು ಸರಿಯಲ್ಲ. ದಯವಿಟ್ಟು ಸದನ ಮುಂದೂಡಿ ಚರ್ಚಿಸಿ ನಿರ್ಧಾರ ಕೈಗೊಳ್ಳಿ ಎಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.