ETV Bharat / state

ವಿಧಾನಪರಿಷತ್ ಚುನಾವಣೆ: ಬೆಂಗಳೂರು ನಗರದಲ್ಲಿ ಈ ಬಾರಿ 703 ಕಡಿಮೆ ಮತ

25 ಕ್ಷೇತ್ರಗಳ ಪೈಕಿ ಬೆಂಗಳೂರಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 2,059 ಮತದಾರರಿದ್ದಾರೆ, 86 ಮತಗಟ್ಟೆಗಳಿವೆ. ನಗರದ ಮಹಾರಾಣಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ಇರಲಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಜೆ.ಮಂಜುನಾಥ್ ಸುದ್ದಿಗೋಷ್ಠಿ

author img

By

Published : Nov 15, 2021, 4:24 PM IST

ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆ ಕೇಂದ್ರದ ಒಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮತಗಟ್ಟೆಗಳು, ಮತದಾರರ ಪಟ್ಟಿ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಜೆ.ಮಂಜುನಾಥ್ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಒಟ್ಟು ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ. ಡಿ.14 ರಂದು ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 16 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 23 ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. ನ.24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನ.26 ನಾಮಪತ್ರ ಹಿಂಪಡೆಯಲು ಕೊನೇಯ ದಿನವಾಗಿದೆ.

ಬೆಂ. ನಗರ ವ್ಯಾಪ್ತಿಯಲ್ಲಿ ಅಧಿಕಾರದಲ್ಲಿರುವ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಚುನಾಯಿತ ಪ್ರತಿನಿಧಿಗಳು ಮತ ಚಲಾಯಿಸಲಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಬಿಬಿಎಂಪಿ ಹಾಗೂ ಎರಡು ನಗರ ಸಭೆ, ಮೂರು ಗ್ರಾಮ ಪಂಚಾಯತಿಗಳಲ್ಲಿ ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇಲ್ಲದ ಕಾರಣ, ಚುನಾವಣೆಯಲ್ಲಿ ಭಾಗಿಯಾಗುತ್ತಿಲ್ಲ. ಇದರಿಂದಾಗಿ ಈ ಬಾರಿ 703 ಕಡಿಮೆ ಮತಗಳಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

25 ಕ್ಷೇತ್ರಗಳ ಪೈಕಿ ಬೆಂಗಳೂರಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 2,059 ಮತದಾರರಿದ್ದಾರೆ, 86 ಮತಗಟ್ಟೆಗಳಿವೆ. ನಗರದ ಮಹಾರಾಣಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ಇರಲಿದೆ.

ತಂಡಗಳು ರಚನೆ ಆಗಿದ್ದು, 3 ಪಾಳಿಗಳಲ್ಲಿ ಎಮ್​​​​​ಸಿಸಿ ತಂಡ ಕೆಲಸ ಮಾಡಲಿದೆ. ನಿಯಂತ್ರಣ ಕೊಠಡಿ ಹಾಗೂ ದೂರು ನಿರ್ವಹಣಾ ಕೇಂದ್ರಕ್ಕೆ 080-22211106 ಗೆ ದೂರು ಅಥವಾ ಸಲಹೆ ನೀಡಬಹುದಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆ ಮುಗಿಯುವವರೆಗೂ ಜಾರಿಯಲ್ಲಿರಬೇಕು ಎಂದರು.

ಒಟ್ಟು ಮತಗಟ್ಟೆಗಳ ಸಂಖ್ಯೆ :

ಬೆಂ.ಉತ್ತರ - 11

ಯಲಹಂಕ - 18

ಬೆಂಗಳೂರು ದಕ್ಷಿಣ- 15

ಬೆಂ.ಪೂರ್ವ- 11

ಆನೇಕಲ್- 28+3

ಒಟ್ಟು- 86

ಒಟ್ಟು ಮತದಾರರ ಸಂಖ್ಯೆ :

ಬೆಂ.ಉತ್ತರ 233, ಯಲಹಂಕ 371, ಬೆಂ.ದಕ್ಷಿಣ 353, ಬೆಂ.ಪೂರ್ವ 262, ಆನೇಕಲ್ 840 ಸೇರಿ ಒಟ್ಟು 2,059 ಮತದಾರರಿದ್ದಾರೆ. ಈ ಐದೂ ತಾಲೂಕುಗಳಲ್ಲಿ ತಲಾ ಮೂರು ಎಂಸಿಸಿ ತಂಡಗಳ ರಚನೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.