ETV Bharat / state

ಮುಗಿಯದ ಬಿಜೆಪಿ ಗದ್ದಲ; ಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ

ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡದ ಹಿನ್ನಲೆ ಬಿಜೆಪಿ ಪ್ರತಿಭಟನೆ ನಡೆಸಿತು. ಆದ ಕಾರಣ ವಿಧಾನ ಪರಿಷತ್​ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

legislative-council-adjourned-to-tomorrow
ಮುಗಿಯದ ಬಿಜೆಪಿ ಗದ್ದಲ; ಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ
author img

By

Published : Jul 4, 2023, 6:01 PM IST

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ನಿಲ್ಲದ ಹಿನ್ನೆಲೆ ವಿಧಾನ ಪರಿಷತ್ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಬೆಳಗ್ಗೆ ಮೂರು ಸಾರಿ ಮುಂದೂಡಿಕೆಯಾಗಿದ್ದ ಪರಿಷತ್ ಕಲಾಪ ಮಧ್ಯಾಹ್ನದ ನಂತರ ಗದ್ದಲದ ಕಾರಣಕ್ಕಾಗಿ ಮತ್ತೊಮ್ಮೆ ಮುಂದೂಡಿಕೆಯಾಯಿತು. 15 ನಿಮಿಷಗಳ ವಿರಾಮದ ಬಳಿಕ ಸಮಾವೇಶಗೊಂಡ ಸದನದಲ್ಲಿ ಬಿಜೆಪಿ ತನ್ನ ಪಟ್ಟು ಸಡಿಲಿಸದೆ ನಿಳುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡದಿದ್ದರೆ ಯಾವುದೇ ಚಟುವಟಿಕೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಒತ್ತಡ ಹೇರಿತು.

ಪ್ರಶ್ನೋತ್ತರ ಅವಧಿ ಹಾಗೂ ಶೂನ್ಯ ವೇಳೆಯನ್ನು ಮುಗಿಸಿ ನಿಲುವಳಿ ಸೂಚನೆ ಪ್ರಸ್ತಾವನೆಗೆ ಅವಕಾಶ ನೀಡುವುದಾಗಿ ಬೆಳಗ್ಗೆ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ ಕೆ ಪ್ರಾಣೇಶ್ ರೂಲಿಂಗ್ ನೀಡಿದ್ದರು. ಅದನ್ನೇ ಎತ್ತಿ ಹಿಡಿಯುವಂತೆ ಕಾಂಗ್ರೆಸ್ ಸದಸ್ಯರು ಸಭಾಪತಿ ಬಸವರಾಜ್ ಹೊರಟ್ಟಿ ಅವರ ಮೇಲೆ ಒತ್ತಡ ಹೇರಿದರು.

ಬಿಜೆಪಿ ನಾಯಕರ ಮನವೊಲಿಸಿ ಪ್ರಶ್ನೋತ್ತರ ಅವಧಿ ನಡೆಸುವ ಪ್ರಯತ್ನವನ್ನು ಬಸವರಾಜ್ ಹೊರಟ್ಟಿ ನಿರಂತರವಾಗಿ ಮಾಡಿದರು. ಆದರೆ ಬಿಜೆಪಿ ಸದಸ್ಯರು ತಮ್ಮ ಪಟ್ಟು ಬಿಡಲಿಲ್ಲ. ಜೆಡಿಎಸ್ ಸದಸ್ಯರಾದ ಮರಿತಿಬ್ಬೇಗೌಡ ಹಾಗೂ ಬೋಜೇಗೌಡ ಅವರು ಸಹ ಮಾತನಾಡಿ, ಬಿಜೆಪಿ ನಾಯಕರು ಪ್ರತಿಭಟನೆ ಹಿಂಪಡೆದು ಪ್ರಶ್ನೋತ್ತರ ಅವಧಿ ನಡೆಸಲು ಅವಕಾಶ ಮಾಡಿಕೊಡಬೇಕು. ಅತ್ಯಂತ ಮಹತ್ವದ ವಿಚಾರಗಳ ಮೇಲೆ ಚರ್ಚೆ ನಡೆಯಬೇಕಿರುವುದರಿಂದ ಕಲಾಪ ಮುಂದುವರಿಸಲು ಅವಕಾಶ ಮಾಡಿಕೊಡಬೇಕು. ಸದನದ ಬಾವಿಗಿಳಿದಿರುವ ಬಿಜೆಪಿ ಸದಸ್ಯರು ಮರಳಿ ತಮ್ಮ ಸ್ಥಾನಕ್ಕೆ ಆಗಮಿಸಿ ಸದನವನ್ನು ಒಂದು ಸಹಜ ಸ್ಥಿತಿಗೆ ತರಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ : ಎತ್ತಿನಹೊಳೆ ಕುಡಿವ ನೀರಿನ ಕಾಮಗಾರಿ ಸದ್ಯದಲ್ಲೇ ಪರಿಶೀಲನೆ ಮಾಡ್ತೇನಿ : ಡಿಸಿಎಂ ಡಿ ಕೆ ಶಿವಕುಮಾರ್

ಆದರೆ ಐದು ಗ್ಯಾರಂಟಿಗಳನ್ನು ಘೋಷಿಸುವಾಗ ಎಲ್ಲರಿಗೂ ಉಚಿತ ಎಂದು ಹೇಳಿ ಇದೀಗ ನಿಯಮಾವಳಿಗಳನ್ನ ಅಳವಡಿಸುತ್ತಿರುವ ರಾಜ್ಯ ಸರ್ಕಾರ ವಚನಭ್ರಷ್ಟವಾಗಿದೆ. ಸಾರ್ವಜನಿಕ ಮಹತ್ವದ ವಿಚಾರ ಆಗಿರುವ ಹಿನ್ನೆಲೆ ನಿಲುವಳಿ ಸೂಚನೆ ಪ್ರಸ್ತಾಪ ಸಲ್ಲಿಸಲು ಅವಕಾಶ ನೀಡುವಂತೆ ಬಿಜೆಪಿ ಪಕ್ಷದ ಹಿರಿಯ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದರು. ಅತ್ಯಂತ ಮಹತ್ವದ ವಿಚಾರಗಳು ಇರುವ ಸಂದರ್ಭದಲ್ಲಿ ಉಳಿದೆಲ್ಲ ಚರ್ಚೆಗಳನ್ನು ಬದಿಗಿರಿಸಿ ನಿಳುವಳಿ ಸೂಚನೆಗೆ ಅವಕಾಶ ನೀಡಿದ ಇತಿಹಾಸ ಈ ಹಿಂದೆ ಸಾಕಷ್ಟು ಇದೆ. ಅದನ್ನು ಪರಿಗಣಿಸಿ ಸಭಾಪತಿಗಳು ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವಿನ ತಿಕ್ಕಾಟದ ಹಿನ್ನೆಲೆ ಕಲಾಪವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ಸ್ಥಿತಿ ಎದುರಾದಾಗ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

ಇದನ್ನೂ ಓದಿ : ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ವಿಚಾರ: ಸದನದಲ್ಲಿ ಶಿವಲಿಂಗೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ವಾಗ್ವಾದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.