ಬೆಂಗಳೂರು: ಭಾರತೀಯ ಮಜ್ದೂರ್ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ & ವೈ. ಶಿ. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ನಿಯೋಗವು ಇಂದು ಆರೋಗ್ಯ ಸಚಿವ ಶ್ರೀರಾಮುಲುರನ್ನ ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಂಡರು.
ಹಲವು ಜಿಲ್ಲೆಗಳಲ್ಲಿ 3-4ತಿಂಗಳಿಂದ ವೇತನ ಆಗದೇ ಇರುವ ಬಗ್ಗೆ ಹಾಗೂ RNTCP ಯ ನೌಕರರಿಗೆ GPS ಅಳವಡಿಕೆಯನ್ನು ರದ್ದುಪಡಿಸುವಂತೆ ಸೇರಿ ಹಲವು ಬೇಡಿಕೆಯ ಬಗ್ಗೆ ಚರ್ಚೆ ನಡೆಸಿದರು. ಈ ವರೆಗೂ ಆದ ಬೆಳವಣಿಗೆ ಬಗ್ಗೆ ಮತ್ತು ಮುಷ್ಕರದ ಬಗ್ಗೆ, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಪ್ರಮುಖ ಬೇಡಿಕೆಗಳ ಬಗ್ಗೆ ಸಹ ಚರ್ಚೆ ಮಾಡಿಲಾಯಿತು.
ಈ ಬಗ್ಗೆ ಸಕಾರಾತ್ಮಕ ವಾಗಿ ಸ್ಪಂದಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಅತಿ ಶೀಘ್ರದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಸಂಘದ ಪ್ರಮುಖ ಪದಾಧಿಕಾರಿಗಳು ಒಳಗೊಂಡ ಸಭೆ ನಿಗಧಿ ಮಾಡಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಲಾಗುವುದಾಗಿ ಭರವಸೆ ನೀಡಿದ್ದಾರೆ.
ಇನ್ನು ಈ ನಿಯೋಗದಲ್ಲಿ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷರು ನೀಲಕಂಠ ರೆಡ್ಡಿ ಮತ್ತು ಸಂಘದ ವತಿಯಿಂದ ಅಧ್ಯಕ್ಷರು ವಿಶ್ವಾರಾಧ್ಯ ಎಚ್. ವೈ, ಉಪಾಧ್ಯಕ್ಷರಾದ ವೆಂಕಟೇಶ ಸೇರಿದಂತೆ ಇತರರು ಉಪಸ್ಥಿತಿರಿದರು.