ETV Bharat / state

ಆ್ಯಸಿಡ್‌ ನಾಗನ ಪರ ವಕಾಲತ್ತಿಗೆ ವಕೀಲರ ನಕಾರ: ಕೋರ್ಟ್‌ ವಿಚಾರಣೆಗೆ ತಾಂತ್ರಿಕ ತೊಂದರೆ

ಆ್ಯಸಿಡ್ ದಾಳಿಕೋರ ನಾಗರಾಜ್ ಅಲಿಯಾಸ್​ ಆ್ಯಸಿಡ್‌ ನಾಗನ ಪರ ವಕಾಲತ್ತಿಗೆ ಯಾವೊಬ್ಬ ವಕೀಲರೂ ಮುಂದಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

author img

By

Published : Jan 5, 2023, 1:15 PM IST

nagesh case
ಆ್ಯಸಿಡ್‌ ನಾಗ

ಬೆಂಗಳೂರು: ಪ್ರೀತಿ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಯುವತಿಯ ಮೇಲೆ ಆ್ಯಸಿಡ್ ಎರಚಿದ ನಾಗರಾಜ್ ಅಲಿಯಾಸ್​ ಆ್ಯಸಿಡ್‌ ನಾಗ ವಿಕೃತಿ ಮೆರೆದಿದ್ದ. ಇದೀಗ ಕೋರ್ಟ್‌ನಲ್ಲಿ ಈತನ ಪರ ವಕಾಲತ್ತು ವಹಿಸಲು ವಕೀಲರು ಮುಂದೆ ಬರುತ್ತಿಲ್ಲ. ಹೀಗಾಗಿ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ತಾಂತ್ರಿಕವಾಗಿ ತೊಂದರೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.

ಆ್ಯಸಿಡ್ ದಾಳಿ ಪ್ರಕರಣದ ವಿವರ: ಕಳೆದ ವರ್ಷ ಏಪ್ರಿಲ್ 28 ರಂದು ಸುಂಕದಕಟ್ಟೆ ನಿವಾಸಿಯಾಗಿರುವ ಯುವತಿಯೊಬ್ಬಳು ಪ್ರೀತಿ ನಿರಾಕರಿಸಿದ್ದಕ್ಕೆ ಕೋಪಗೊಂಡು ಆಕೆಯ‌ ಮೇಲೆ ಸೈಕೋ ಪ್ರೇಮಿ ನಾಗರಾಜ್ ಆ್ಯಸಿಡ್ ಎರಚಿ ದುಷ್ಕೃತ್ಯವೆಸಗಿದ್ದ. ಬಳಿಕ ತಮಿಳುನಾಡಿನ ದೇವಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಯನ್ನ ಬಂಧಿಸಿ, ಕರೆ ತರುವಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತನ ಕಾಲಿಗೆ ಗುಂಡು‌ ಹಾರಿಸಿದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು‌.

ಇದಾದ ನಂತರ ಆರೋಪಿಗೆ ತ್ವರಿತವಾಗಿ ಶಿಕ್ಷೆಯಾಗಬೇಕೆಂದು ಕಾಮಾಕ್ಷಿಪಾಳ್ಯ ಪೊಲೀಸರು ಆದಷ್ಟು ಬೇಗ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ‌ ನಡೆಯಬೇಕಿದೆ. ಆದರೆ, ಹೇಯ ಕೃತ್ಯವೆಸಗಿದ ಆರೋಪಿ ನಾಗನ ಪರವಾಗಿ ಇದೀಗ ಯಾವೊಬ್ಬ ವಕೀಲರು ಕೂಡಾ ವಕಾಲತ್ತು ವಹಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ, ವಿಚಾರಣೆಗೆ ತಾಂತ್ರಿಕವಾಗಿ ತೊಡಕಾಗಿದೆ. 'ಕಾನೂನಿನಲ್ಲಿ ಆರೋಪಿ ಪರ ವಕಾಲತ್ತನ್ನು ಹಾಕದೇ ಕೇಸ್ ಚಾರ್ಜ್ ಆಗಲ್ಲ. ಆರೋಪಿಗೆ ಜಾಮೀನು ಕೂಡ ಸಿಗಲ್ಲ. ಸದ್ಯ ಈ ತಾಂತ್ರಿಕ ತೊಂದರೆಯಿಂದ ಕೇಸ್ ನಿಂತಲ್ಲೇ ನಿಂತಿದೆ. ಒಂದೆಡೆ ನಾಗನ ಪರ ವಕೀಲರೊಬ್ಬರು ವಕಾಲತ್ತು ಹಾಕಿದರೆ ಕೇಸ್ ಚಾರ್ಜ್ ಆಗಿ ಆದಷ್ಟು ಬೇಗ ಶಿಕ್ಷೆಯಾಗಲಿದೆ' ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಇದನ್ನೂ ಓದಿ: ಆ್ಯಸಿಡ್​ ನಾಗನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆಯಾಗಲಿ, ಆತನೂ ನರಳಬೇಕು: ಸಂತ್ರಸ್ತೆಯ ಆಕ್ರೋಶ

ಆ್ಯಸಿಡ್‌ ದಾಳಿ, ಆರೋಪಿ ಬಾಯ್ಬಿಟ್ಟ ಸತ್ಯವೇನು?: ಈ ಹಿಂದೆ ನಡೆಸಿದ ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಎಲ್ಲಾ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾನೆ. ಯುವತಿಯ ಮೇಲೆ ಆ್ಯಸಿಡ್ ಹಾಕಬಾರದೆಂದು ಈ ಹಿಂದೆ ಯೋಚಿಸಿದ್ದೆ. ಘಟನೆಯ ಹಿಂದಿನ ದಿನ ದಾಳಿ ಮಾಡುವುದಾಗಿ ಯುವತಿಗೆ ಹೆದರಿಸಿದ್ದೆ ಅಷ್ಟೇ. ಆದರೆ, ಯುವತಿಯು ಈ ವಿಷಯವನ್ನು ನನ್ನ ತಂದೆಯ ಬಳಿ ಹೇಳಿದ್ದಳು. ಅದು ನನ್ನ ಅಣ್ಣನಿಗೆ ಗೊತ್ತಾಗಿತ್ತು. ಯುವತಿಯಿಂದ ವಿಷಯ ತಿಳಿದುಕೊಂಡು ನನಗೆ ಸಾಕಷ್ಟು ಬೈದಿದ್ದ. ಇದರಿಂದ ಆ್ಯಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿದೆ ಅಂತಾ ಹೇಳಿದ್ದನು.

ಇದನ್ನೂ ಓದಿ: ಯುವತಿ ಮೇಲೆ ಆ್ಯಸಿಡ್​ ದಾಳಿ ಹಿಂದಿನ ಕಾರಣ ಬಾಯ್ಬಿಟ್ಟ ಆರೋಪಿ ನಾಗ.. ಕಾರಣ ಇದೇ ಅಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.