ಬೆಂಗಳೂರು : ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ವಿಧಾನಸಭೆ ಅಧಿವೇಶನ ಮುಗಿಸಿಕೊಂಡು ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಗೆ ಹಿಂದಿರುಗಿದ ಸಚಿವ ಮಾಧುಸ್ವಾಮಿ ಮತ್ತು ಕಾರು ಚಾಲಕ ಸ್ವಯಂ ಕೊರೊನಾ ತಪಾಸಣೆಗೆ ಒಳಗಾಗಿದ್ದರು. ಪರೀಕ್ಷಾ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲದಿರುವುದರಿಂದ ವೈದ್ಯರ ಸಲಹೆ ಮೇರೆಗೆ ಮೆನೆಯಲ್ಲೇ ಹೋಂ ಕ್ವಾರಂಟೈನ್ ಆಗಿದ್ದಾರೆ.
ಕಳೆದ ಶನಿವಾರವಷ್ಟೇ ಅಧಿವೇಶನ ಮುಗಿದಿದ್ದು, ಕಡೆಯ ದಿನದಂದು ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯಯದ ಮೇಲಿನ ಚರ್ಚೆಗೆ, ಸಿಎಂ ಜೊತೆ ಉತ್ತರ ನೀಡುವ ಜವಾಬ್ದಾರಿಯನ್ನು ಸಚಿವ ಮಾಧುಸ್ವಾಮಿ ನಿರ್ವಹಿಸಿದ್ದರು. ಇಡೀ ದಿನ ಸಾಕಷ್ಟು ಸಮಯ ಉಭಯ ಸದನಗಳ ಕಲಾಪದಲ್ಲಿ ಮಾತನಾಡಿದ್ದರು. ಇದೀಗ ಮಾಧುಸ್ವಾಮಿ ಅವರ ಸಂಪರ್ಕಕ್ಕೆ ಬಂದಿರುವ ಉಭಯ ಸದನಗಳ ಸದಸ್ಯರಲ್ಲಿ ಆತಂಕ ಮೂಡಿದೆ.