ಬೆಂಗಳೂರು : ಉಸಿರಾಟದ ಸಮಸ್ಯೆಗಳ ಪರಿಹಾರಕ್ಕೆ ಮಾರತ್ ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆ, ಏರ್ ವೇ ಮತ್ತು ವಾಯ್ಸ್ ಕ್ಲಿನಿಕ್ ಆರಂಭಿಸಿದೆ.
ಈ ಆಸ್ಪತ್ರೆಯಲ್ಲಿ ಶಿಶುಗಳು, ಮಕ್ಕಳು ಹಾಗೂ ವಯಸ್ಕರಿಗೆ ಧ್ವನಿ ಹೊರಡಿಸುವಲ್ಲಿ ಆಗುವ ತೊಂದರೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು. ಏರ್ ವೇ ಹಾಗೂ ಧ್ವನಿಗೆ ಸಂಬಂಧಿಸಿದ ಎಲ್ಲಾ ತೊಂದರೆಗಳಿಗೂ ಇಲ್ಲಿ ಪರಿಹಾರ ಸಿಗಲಿದೆ.
ಮೊದಲು ಜನರಿಗಿರುವ ತೊಂದರೆಯನ್ನು ಪತ್ತೆ ಹಚ್ಚಲು ಎಂಡೋಸ್ಕೊಪಿ ಮಾಡಲಾಗುವುದು. ಹಾಗೆಯೇ, ಮಕ್ಕಳು ಯಾವುದಾದರೂ ವಸ್ತುಗಳನ್ನು ನುಂಗಿದ್ದರೆ ಎಂಡೋಸ್ಕೊಪಿ ಮೂಲಕ ಪತ್ತೆಹಚ್ಚಲಾಗುವುದು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಕ್ಲಿನಿಕ್ ಆರಂಭಿಸಲಾಗಿದೆ. ಇದಕ್ಕಾಗಿ ವಿಶೇಷ ಪರಿಣತಿ ಹೊಂದಿರುವ ತಜ್ಞರು ಹಾಗೂ ವೈದ್ಯರ ತಂಡ ಕೂಡ ಸಿದ್ಧಗೊಂಡಿದೆ.
ಸರಿಯಾಗಿ ಮಾತನಾಡಲು ಸಾಧ್ಯವಾಗದ ಮಕ್ಕಳಿಗೆ ಥೆರಪಿ ಮಾಡುವುದು, ಕರ್ಕಶ ಧ್ವನಿ, ಗೊರಕೆ ಹೊಡೆಯುವಂತಹ ಕಾಯಿಲೆಗಳಿಗೆ ಇಲ್ಲಿ ಪರಿಹಾರ ದೊರೆಯಲಿದೆ.