ETV Bharat / state

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ: ಮೃತ್ತಿಕಾ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ

ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಪೂರಕವಾಗಿ ನಾಡಿನಾದ್ಯಂತ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನಕ್ಕೆ ಸಿಎಂ ಇಂದು ಚಾಲನೆ ನೀಡಿದರು.

ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ

author img

By

Published : Oct 21, 2022, 4:49 PM IST

ಬೆಂಗಳೂರು: ನವೆಂಬರ್ 11 ರ‌ದು ನಡೆಯಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಪೂರಕವಾಗಿ ನಾಡಿನಾದ್ಯಂತ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದ್ದಾರೆ

ಪವಿತ್ರ ಮೃತ್ತಿಕೆ ಸಂಗ್ರಹ: ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದಿಂದ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ಸಿಎಂ ದೇವರಾಜ ಅರಸು, ಲಾಲ್ ಬಹಾದ್ದೂರ್ ಶಾಸ್ತ್ರಿ ಸೇರಿದಂತೆ ಇತರ ಪ್ರತಿಮೆಗಳ ಬಳಿಯಿಂದ ಮಣ್ಣನ್ನು ತೆಗೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಾಡಿನೆಲ್ಲೆಡೆ ಪವಿತ್ರ ಮೃತ್ತಿಕೆಯನ್ನು ಸಂಗ್ರಹ ಮಾಡಲಾಗುತ್ತದೆ.

ಮೃತ್ತಿಕಾ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ

ಶುಕ್ರವಾರ ಚಾಲನೆಗೊಂಡಿರುವ ಈ ಅಭಿಯಾನ ನವೆಂಬರ್ 7 ರಂದು ಮುಕ್ತಾಯಗೊಳ್ಳಲಿದೆ. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಕೆಲವರು ಕೆಂಪೇಗೌಡರ ಬಗ್ಗೆ‌ ಹಗುರವಾಗಿ ಮಾತಾಡ್ತಾರೆ. ಅವರೇನು ಚಕ್ರವರ್ತಿನಾ? ಅವರಿಗ್ಯಾಕೆ ಅಷ್ಟೊಂದು ಮಹತ್ವ ಅಂತಾರೆ. ಎಷ್ಟು ದೊಡ್ಡವರು ಅನ್ನೋದು ಮುಖ್ಯವಲ್ಲ. ಎಂಥ ಕೆಲಸ ಮಾಡಿದ್ದಾರೆ ಅನ್ನೋದು ಮುಖ್ಯ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್​ಗೆ ಟಾಂಗ್​ ನೀಡಿದ ಅಶೋಕ್​: ಈ ನೀರು, ನೆಲ ಕೆಂಪೇಗೌಡರ ಆಶೀರ್ವಾದದಿಂದ ಬಂದಿದೆ. ಕೆಂಪೇಗೌಡರಿಂದ ಬೆಂಗಳೂರು ಸೃಷ್ಟಿಯಾಗಿರುವುದು. ಪ್ರತಿಯೊಬ್ಬರೂ ಅವರಿಗೆ ನಮನ ಸಲ್ಲಿಸಲೇಬೇಕು. 75 ವರ್ಷ ಇಂತಹ ಕಾರ್ಯಕ್ರಮ ಯಾಕೆ ಮಾಡಿಲ್ಲ?. ಈ 75 ವರ್ಷಗಳಲ್ಲಿ ಕೆಂಪೇಗೌಡರ ಒಂದು ಪ್ರತಿಮೆ ಮಾಡಿಲ್ಲ. ಹಲವು ಸರ್ಕಾರಗಳು ಬಂದು ಹೋದರೂ ಕೆಂಪೇಗೌಡರಿಗೆ ಇಂತಹ ಗೌರವ ಸಿಕ್ಕಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್​ಗೆ ಟಾಂಗ್ ನೀಡಿದರು.

ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗ ಕೆಂಪೇಗೌಡರಿಗೆ ನಿಜವಾದ ಗೌರವ, ನಮನ ಸಲ್ಲಿಸಿದ್ದಾರೆ. ಅವರಿಬ್ಬರಿಗೂ ಒಕ್ಕಲಿಗ ಸಮುದಾಯದ ವತಿಯಿಂದ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಬೆಂಗಳೂರಿನಲ್ಲಿ ಮಾತ್ರ ಅದರ ನಿರ್ಮಾತೃ ಪ್ರತಿಮೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕೊಡುಗೆಯನ್ನು ಈ ನಾಡು ಎಂದಿಗೂ ಮರೆಯಲ್ಲ. ನಾನು ಸಿಎಂ ಆಗಿದ್ದಾಗ ಅಶೋಕ್ ನೇತೃತ್ವದ ಸಮಿತಿಯಿಂದ ಪ್ರಸ್ತಾಪ ಮಾಡಲಾಗಿತ್ತು. ನಾನು ತಕ್ಷಣ ಹಣಕಾಸು ನೆರವು ಕೊಟ್ಟು ಒಪ್ಪಿಗೆ ಕೊಟ್ಟಿದ್ದೆ. ಕೆಂಪೇಗೌಡರು ಹಲವಾರು ಕೆರೆಗಳನ್ನು ನಿರ್ಮಿಸಿದವರು. ಬೆಂಗಳೂರನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿದವರು. ಜಗತ್ತಿನ ಯಾವ ನಗರದ ವಿಮಾನ ನಿಲ್ದಾಣಗಳಲ್ಲೂ ಆ ನಗರ ನಿರ್ಮಾತೃಗಳ ಪ್ರತಿಮೆ ಇಲ್ಲ. ಬೆಂಗಳೂರಿನಲ್ಲಿ ಮಾತ್ರ ಅದರ ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಇರೋದು ಎಂದು ಹೇಳಿದರು.

ಇದನ್ನೂಓದಿ: ಕೆಂಪೇಗೌಡ ಪ್ರತಿಮೆ, ಏರ್‌ಪೋರ್ಟ್ ಟರ್ಮಿನಲ್ ಉದ್ಘಾಟನೆಗೆ ಮೋದಿ ಆಗಮನ: ಸಿದ್ದತೆಗೆ ಸಿಎಂ ಸೂಚನೆ

ಮಾಜಿ ಸಿಎಂ ಸದಾನಂದಗೌಡ ಮಾತನಾಡಿ, ಜಗತ್ತಿನಲ್ಲಿ ಹಲವರು ತಮ್ಮದೇ ಆದ ಪ್ರಬುದ್ಧತೆಯ ಚಾಪು ಹೊತ್ತು ಹೋಗುತ್ತಾರೆ. ‌ಬಹುಶಃ ಕೆಂಪೇಗೌಡರು ಕೂಡ ಅಷ್ಟೇ. ಒಂದು‌ ನಗರಕ್ಕೆ ಬೇಕಾದ ಉದ್ಯಾನವನ,‌ ನೀರು, ರಸ್ತೆ ಎಲ್ಲವೂ ಅಭಿವೃದ್ಧಿ ಆದರೆ ಒಂದು ನಗರವಾಗೋದು. ಇವತ್ತು ಬೆಂಗಳೂರು ಅಂದರೆ ಎಲ್ಲರಿಗೂ ಗೊತ್ತು. ಏರ್​ಪೋರ್ಟ್‌ನಲ್ಲಿ ಯಾರೇ‌ ಇಳಿದು ಬಂದರೂ ಕೆಂಪೇಗೌಡರ ಬಗ್ಗೆ ತಿಳಿಯಲಿದೆ. ಗುಜರಾತ್‌ನಲ್ಲಿ ಸರ್ದಾರ್‌ ವಲ್ಲಭ‌ಬಾಯ್ ಪಟೇಲ್ ಪ್ರತಿಮೆ ರೀತಿ, ಇಲ್ಲಿ ಕೆಂಪೇಗೌಡರ ಪ್ರತಿಮೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.