ಬೆಂಗಳೂರು : ನಗರದ ಜಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಐಪಿಎಲ್ ಟಿ-20 ಕ್ರಿಕೆಟ್ ನಡೆಯಲಿದ್ದು ಶ್ರೀಲಂಕಾ ಬಾಂಬ್ ಸ್ಟೋಟ ಹಿನ್ನಲೆ ಸಿಲಿಕಾನ್ ಸಿಟಿ ಪೊಲೀಸರು ಹೈ ಅಲರ್ಟ್ ಆಗಿದ್ದು ಪಂದ್ಯ ವೀಕ್ಷಣೆಗೆ ಭಾರಿ ಬಂದೋಬಸ್ತ್ ಮಾಡಲಾಗಿದೆ.
ಶ್ರೀಲಂಕಾದಲ್ಲಿ ನಡೆದ ಘಟನೆ ಹಿನ್ನೆಲೆ ನಗರದಲ್ಲಿ ಕೂಡ ಹೈಅಲರ್ಟ್, ಸ್ಟೇಡಿಯಂ ಸುತ್ತಲೂ ಖಾಕಿ ಕಣ್ಗಾವಲು ಇಡಲಿದ್ದು ಯಾರು ಅನುಮಾನಾಸ್ಪದ ವ್ಯಕ್ತಿ ಹಾಗೆ ನಿಷೇಧಿತ ವಸ್ತುಗಳನ್ನ ಬ್ಯಾನ್ ಮಾಡಲಾಗುತ್ತಿದೆ. ಇನ್ಸ್‌ಪೆಕ್ಟರ್ ಹಾಗೆ ಕಾನ್ಸ್ಟೆಬಲ್, ಮಹಿಳಾ ಸಿಬ್ಬಂದಿ , ಹೊಯ್ಸಳ, ಅಗ್ನಿಶಾಮಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ವಾಹನಗಳ ನಿಲುಗಡೆ ನಿಷೇಧ ಮಾಡಲಾಗಿದ್ದು ಅದರಲ್ಲಿ ಕ್ವೀನ್ಸ್ ರಸ್ತೆಯ ಬಾಳೇ ಕುಂದ್ರೀ ವೃತ್ತದವರೆಗೆ, ಎಂಜಿರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ, ಲಿಂಕ್ ರಸ್ತೆಯ ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ, ರಾಜಭವನ ರಸ್ತೆ, ಟಿ ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ, ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಎರಡು ಕಡೆ, ಕಬ್ಬನ್ ರಸ್ತೆಯ ಸಿಟಿಓ ವೃತ್ತದಿಂದ ಡಿಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಾಹನ ನಿಷೇಧಿಸಲಾಗಿದೆ.
ಮತ್ತು ಸೆಂಟ್ ಮಾರ್ಕ್ಸ್ ರಸ್ತೆಯ ಕ್ಯಾಶ್ ಫಾರ್ಮಸಿ ಜಂಕ್ಷನ್ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ, ಕಬ್ಬನ್‌ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ, ಪೌಂಟೇನ್ ರಸ್ತೆ ವಾಹನ, ಲ್ಯಾವೇಲಿ ರಸ್ತೆ, ಕ್ವೀನ್ಸ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ , ಸಿದ್ದಲಿಂಗಯ್ಯ ವೃತ್ತದಿಂದ ಸೆಂಟ್ ಮಾರ್ಕ್ಸ್ ರಸ್ತೆವರೆಗೆ ನಿಷೇಧ ವಾಹನ ಸಂಚಾರ ಮಾಡಲಾಗಿದೆ.
ಹಾಗೆ ಆಟೋ ರೀಕ್ಷಾ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಕ್ವೀನ್ಸ್ ರಸ್ತೆ ,ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್‌ನಿಂದ ಕ್ವೀನ್ಸ್ ವೃತ್ತದವರೆಗೆ, ಕಬ್ಬನ್‌ರಸ್ತೆ, ಬಿ.ಆರ್‌ವಿ ಜಂಕ್ಷನ್‌ನಿಂದ ಸಿಟಿಓ ವೃತ್ತ, ಎಂಜಿ ರಸ್ತೆ, ಅನಿಲ್ ಕುಂಬ್ಳೆ ವೃತ್ತದವರೆಗೆ ವ್ಯವಸ್ಥೆ ಮಾಡಲಾಗಿದೆ.
ಪಂದ್ಯ ವೀಕ್ಷಣೆ ಮಾಡಲು ಬರುವ ವಾಹನ ನಿಲುಗಡೆಗೆ ಅವಕಾಶ ಮಾಡಿದ್ದು ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ ಮತ್ತು ಯು.ಬಿಸಿಟಿ ನಿಲುಗಡೆ ಸ್ಥಳ, ಶಿವಾಜಿನಗರ ಬಸ್ ನಿಲ್ದಾಣ 1ನೇ ಮಹಡಿ, ಕೆ ಎಸ್ ಸಿ.ಎ ಸದಸ್ಯರ ವಾಹನಗಳನ್ನ ಬೌರಿಂಗ್ ಇನ್ಸ್ಟಿಟ್ಯೂಟ್ ಮತ್ತು ಸೆಂಟ್ ಜೋಸೆಫ್ ಬಾಲಕರ ಶಾಲೆ ಮೈದಾನ, ಹಾಗೆ ಹೆಚ್ಚು ಜನ ಬಿಎಂಟಿಸಿ ಸಾರಿಗೆ ಹಾಗೂ ಮೆಟ್ರೋ ಅವಳಂಬನೆ ಪೊಲೀಸ್ ಇಲಾಖೆ ಮನವಿ ಮಾಡಿದ್ದಾರೆ.