ETV Bharat / state

ಸಂಸದರ ಪತ್ನಿಯ ಟ್ರಸ್ಟ್​ಗೆ ಅಕ್ರಮವಾಗಿ ಸೈಟು ಮಂಜೂರು: KHBಗೆ ಹೈಕೋರ್ಟ್ ದಂಡ, ತನಿಖೆಗೆ ಆದೇಶ - bangaore latest news

2004ರಲ್ಲಿ ಕೆಎಚ್‌ಬಿ ಯಲಹಂಕದಲ್ಲಿ ಸಂಸದ ಉಮೇಶ್ ಜಾದವ್ ಅವರ ಪತ್ನಿ ಗಾಯತ್ರಿ ಅವರ ಮೂರ್ತಿ ಚಾರಿಟಬಲ್ ಟ್ರಸ್ಟ್ ಗೆ ಸಿಎ ಸೈಟು ಮಂಜೂರು ಮಾಡಿತ್ತು. ಶಾಲೆ ಕಟ್ಟಲು ಉಪಯೋಗಿಸುವ ಷರತ್ತಿನ ಮೇರೆಗೆ 3 ಲಕ್ಷ ರೂಪಾಯಿಗೆ ಸೈಟು ನೀಡಲಾಗಿತ್ತು. 16 ವರ್ಷಗಳ ಕಾಲ ಸೈಟನ್ನು ಹಾಗೆಯೇ ಉಳಿಸಿಕೊಂಡಿದ್ದ ಟ್ರಸ್ಟ್ ನಂತರ ಸಾರ್ವಜನಿಕ ಬಳಕೆಗೆ ಉಪಯೋಗಿಸದೆ ಮಾರಾಟ ಮಾಡಲು ಮುಂದಾಗಿದೆ.

illegally land sanctioned to the MLA Umesh jadhav's wife
ಸಂಸದರ ಪತ್ನಿ ಟ್ರಸ್ಟ್​ಗೆ ಅಕ್ರಮವಾಗಿ ಸೈಟು ಮಂಜೂರು
author img

By

Published : Sep 30, 2021, 3:16 PM IST

ಬೆಂಗಳೂರು: ಸಂಸದ ಉಮೇಶ್ ಜಾದವ್ ಅವರ ಪತ್ನಿ ಹೆಸರಿನ ಮೂರ್ತಿ ಚಾರಿಟಬಲ್ ಟ್ರಸ್ಟ್​ಗೆ ಅಕ್ರಮವಾಗಿ ಮಂಜೂರು ಮಾಡಿದ್ದ ಸೈಟು ವರ್ಗಾವಣೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಕರ್ನಾಟಕ ಹೌಸಿಂಗ್ ಬೋರ್ಡ್​ಗೆ 1 ಲಕ್ಷ ರೂ ದಂಡ ವಿಧಿಸಿದೆ.

ಸೈಟನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹೀಗಾಗಿ ಸೈಟು ನೀಡುವಲ್ಲಿ ಶಾಮೀಲಾಗಿರುವ ಗೃಹ ಮಂಡಳಿ ಅಧಿಕಾರಿಗಳ ವಿರುದ್ಧ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೆಯೇ, ಒಂದು ತಿಂಗಳಲ್ಲಿ ಸೈಟನ್ನು ಹಿಂಪಡೆದು ಸೂಕ್ತ ರೀತಿಯಲ್ಲಿ ಬಳಕೆ ಮಾಡಲು ಅದನ್ನು ವಿನಿಯೋಗಿಸಬೇಕು ಎಂದು ಹಂಗಾಮಿ ಸಿಜೆ ಎಸ್.ಸಿ.ಶರ್ಮಾ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.

ಇದೇ ವೇಳೆ ಸಿಎ ಸೈಟನ್ನು ಷರತ್ತುಗಳ ಮೇರೆಗೆ ಸಂಸದ ಉಮೇಶ್ ಜಾದವ್ ಅವರ ಪತ್ನಿ ಮುಖ್ಯಸ್ಥಿಕೆಯ ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ನೀಡಿ, ಕಳೆದ ವರ್ಷ ಅದನ್ನು ಶುದ್ಧ ಮಾರಾಟ ಕ್ರಮ ಪತ್ರಕ್ಕೆ ಬದಲಾವಣೆ ಮಾಡಲಾಗಿದೆ. ಈ ಮೂಲಕ ಕೆಎಚ್​ಬಿ ಅಕ್ರಮದಲ್ಲಿ ಭಾಗಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಗೃಹ ಮಂಡಳಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

2004ರಲ್ಲಿ ಕೆಎಚ್‌ಬಿ ಯಲಹಂಕದಲ್ಲಿ ಸಂಸದ ಉಮೇಶ್ ಜಾದವ್ ಅವರ ಪತ್ನಿ ಗಾಯತ್ರಿ ಅವರ ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ಸಿಎ ಸೈಟು ಮಂಜೂರು ಮಾಡಿತ್ತು. ಶಾಲೆ ಕಟ್ಟಲು ಉಪಯೋಗಿಸುವ ಷರತ್ತಿನ ಮೇರೆಗೆ 3 ಲಕ್ಷ ರೂಪಾಯಿಗೆ ಸೈಟು ನೀಡಿತ್ತು. 16 ವರ್ಷಗಳ ಕಾಲ ಸೈಟನ್ನು ಹಾಗೆಯೇ ಉಳಿಸಿಕೊಂಡಿದ್ದ ಟ್ರಸ್ಟ್ ನಂತರ ಸೈಟನ್ನು ಸಾರ್ವಜನಿಕ ಬಳಕೆಗೆ ಉಪಯೋಗಿಸದೆ ಮಾರಾಟ ಮಾಡಲು ಮುಂದಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆಯ ವೇಳೆ 2020ರಲ್ಲಿ ಸೈಟನ್ನು ಷರತ್ತುಗಳ ಬದಲಿಗೆ ಶುದ್ಧ ಕ್ರಯಕ್ಕೆ ಮಾಡಿಕೊಟ್ಟಿದ್ದು ಬೆಳಕಿಗೆ ಬಂದಿತ್ತು. ಈ ವೇಳೆ ಟ್ರಸ್ಟ್ ಸೈಟು ಹಿಂದಿರುಗಿಸುವುದಾಗಿ ತಿಳಿಸಿದ್ದರೂ, ನಂತರ ವ್ಯತಿರಿಕ್ತ ಹೇಳಿಕೆ ನೀಡಿತ್ತು. ಇದು ನ್ಯಾಯಾಲಯದ ಅಸಮಾಧಾನಕ್ಕೂ ಕಾರಣವಾಗಿತ್ತು. ಅರ್ಜಿದಾರರ ಪರ ವಕೀಲರು 3 ಲಕ್ಷಕ್ಕೆ ಪಡೆದಿರುವ ಸೈಟು ಪ್ರಸ್ತುತ 10 ಕೋಟಿ ರೂ ಮಾರುಕಟ್ಟೆ ಮೌಲ್ಯ ಹೊಂದಿದೆ. ಹೀಗಾಗಿಯೇ ಅಕ್ರಮ ನಡೆದಿದೆ. ಹೀಗಾಗಿ ಸೈಟನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲು ನಿರ್ದೇಸಿಸಬೇಕು ಎಂದು ಕೋರಿದ್ದು. ಅರ್ಜಿದಾರರ ಪರ ವಕೀಲ ಎಚ್. ಸುನಿಲ್ ಕುಮಾರ್ ವಾದ ಮಂಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.