ETV Bharat / state

ನಕಲಿ ಸಹಿ ಮಾಡಿ 25 ಕೋಟಿ ರೂ. ಮೌಲ್ಯದ ಭೂಮಿ ಕಬಳಿಕೆ ಆರೋಪ, ದೂರು ದಾಖಲು

ತಮ್ಮ ಸಹಿಯನ್ನು ನಕಲು ಮಾಡಿ ಪಿತ್ರಾರ್ಜಿತ ಆಸ್ತಿ ಕಬಳಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ನ್ಯಾಯಾಲಯದ ಮೊರೆಹೋಗಿದ್ದಾರೆ.

land cheating by Forged signature in bangalore
ನಕಲಿ ಸಹಿ ಮಾಡಿ 25 ಕೋಟಿ ರೂ. ಮೌಲ್ಯದ ಭೂಮಿ ಕಬಳಿಕೆ
author img

By

Published : Aug 2, 2020, 12:47 AM IST

ಬೆಂಗಳೂರು: ಸಹಿ ನಕಲು ಮಾಡಿ ಭೂಮಿ ಕಬಳಿಸಿದ್ದಾರೆ ಎಂದು ಮಹಿಳೆಯೋರ್ವರು ದೂರು ದಾಖಲು ಮಾಡಿದ್ದು, ನ್ಯಾಯಕ್ಕಾಗಿ ಆಗ್ರಹ ಮಾಡಿದ್ದಾರೆ.

ತಮ್ಮ ಸಹಿಯನ್ನು ನಕಲು ಮಾಡಿ ಪಿತ್ರಾರ್ಜಿತ ಆಸ್ತಿ 2 ಎಕರೆ 3.8 ಗುಂಟೆ ಜಾಗವನ್ನು ಎಂಎಲ್​ ಡಿಸಿ‌ ಮುನಿರಾಜು ಎಂಬುವವರು ಕಬಳಿಸಿದ್ದಾರೆ ಎಂದು ಸರಸ್ವತಮ್ಮ ಎಂಬುವರು ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಭೂಮಿ ಕಬಳಿಕೆ ಆರೋಪ ಮಾಡಿರುವ ಕುಟುಂಬ

ಕೆ ಆರ್ ಪುರದ ಭಟ್ಟರಹಳ್ಳಿ‌ಯ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ 25 ಕೋಟಿಗೂ ಹೆಚ್ಚು ಬೆಲೆಬಾಳುವ ಸರ್ವೆ ನಂಬರ್‌ 41/2 5 ಎಕ್ಕರೆ ಜಾಗದಲ್ಲಿ 2 ಎಕರೆ 3.8 ಗುಂಟೆ ಜಾಗವನ್ನು ಕಬಳಿಸುವ ಉದ್ದೇಶದಿಂದ ಎಂ ಎಲ್ ಡಿ‌ ಸಿ ಮುನಿರಾಜು ಜತೆ ವೆಂಕಟೇಶ, ಶಂಕರ್, ಸಂಪತ್ ಕುಮಾರ್, ದಿಲೀಪ್, ಮಂಜುಳಾ, ಉಮಾ, ಬಿ.ಜಿ.ಪ್ರಕಾಶ್ ಮತ್ತು ಖಾಸಗಿ ಕಂಪನಿಯವರು ಸೇರಿ ನನ್ನ ನಕಲಿ ಸಹಿ ಬಳಸಿ ಬಾಣಸವಾಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಯಾವುದೇ ರೀತಿಯ ನೋಂದಣಿ ಮಾಡಿಸದೆ ಜಿಪಿಎ ದಾಖಲೆಯನ್ನು ಸೃಷ್ಟಿ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.