ETV Bharat / state

ಜನತಾ ಕರ್ಫ್ಯೂ ಬೆಂಬಲಿಸುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ - ಕೊರೊನಾ ವೈರಸ್​​ ಬಗ್ಗೆ ಲಕ್ಷ್ಮಣ್​​ ಸವದಿ ಪ್ರತಿಕ್ರಿಯೆ

ಕೊರೊನಾ ವೈರಸ್​​ ಹೋಗಲಾಡಿಸುವ ನಿಟ್ಟಿನಲ್ಲಿ ಜನರು ಜನತಾ ಕರ್ಫ್ಯೂ ಬೆಂಬಲಿಸುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.

lakshman savadi reaction to janatha karfue
ಲಕ್ಷ್ಮಣ ಸವದಿ ಮನವಿ
author img

By

Published : Mar 21, 2020, 12:54 PM IST

ಬೆಂಗಳೂರು: ಕೊರೊನಾ ಪಿಡುಗನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆಕೊಟ್ಟಿದ್ದು, ಇದನ್ನು ಬೆಂಬಲಿಸುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ‌‌.

lakshman savadi reaction to janatha karfue
ಲಕ್ಷ್ಮಣ ಸವದಿ ಮನವಿ

ಜನತಾ ಕರ್ಫ್ಯೂ ಆಚರಿಸುವ ಅಂಗವಾಗಿ ಕೆಎಸ್ಆರ್​​​​ಟಿಸಿ, ಬಿಎಂಟಿಸಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗಳು ಬಸ್​​ ಸಂಚಾರ‌ ಕಡಿಮೆಗೊಳಿಸಲು ನಿರ್ಧರಿಸಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.

ಕೊರೊನಾ ರೋಗವು ಅಪಾಯದ ಮಟ್ಟ ತಲುಪುವುದಕ್ಕಿಂತ ಮುಂಚೆಯೇ ನಮ್ಮಲ್ಲಿ ಹೆಚ್ಚೆಚ್ಚು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರೆಡು ಈ ಬಗ್ಗೆ ಸಂಪೂರ್ಣ ಸಂಯೋಜನೆ ಮತ್ತು ಸಮನ್ವಯತೆಯೊಂದಿಗೆ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದರಿಂದ ಇದರ ಹರಡುವಿಕೆ ನಿಯಂತ್ರಣದಲ್ಲಿದೆ. ಆದರೆ ಮುಂದೆಯೂ ಇನ್ನಷ್ಟು ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ. ಅದ್ದರಿಂದ ಸ್ವಯಂ ಆಚರಣೆಯಿಂದ "ಜನತಾ ಕರ್ಫ್ಯೂ" ವನ್ನು ಸಂಪೂರ್ಣ ಯಶಸ್ವಿಯಾಗುವಂತೆ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯ. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು "ಜನತಾ ಕರ್ಫ್ಯೂ ನಲ್ಲಿ ಭಾಗವಹಿಸುವುದು ಔಚಿತ್ಯಪೂರ್ಣವಾಗಿದೆ.

ಕೊರೊನಾ ವೈರಸ್ ಕ್ಷಿಪ್ರಗತಿಯಲ್ಲಿ ಹರಡದಂತೆ ನಿಯಂತ್ರಿಸುವ ಕ್ರಮವಾಗಿ ಈಗಾಗಲೇ ನಮ್ಮ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಹೆಚ್ಚಿನ ಸ್ವಚ್ಛತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಚಾಲಕ ಮತ್ತು ನಿರ್ವಾಹಕರುಗಳಿಗೆ ಮಾಸ್ಕ್ ಗಳನ್ನು ನೀಡಲಾಗಿದೆ. ಬಸ್ ನಿಲ್ದಾಣಗಳಲ್ಲಿಯೂ ಸ್ವಚ್ಛತೆ ಕಾಪಾಡುವುದು ಸೇರಿದಂತೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ ಈ ಎಲ್ಲಾ ಪ್ರಯತ್ನಗಳು ಸಂಪೂರ್ಣ ಫಲ ನೀಡಲು ಸಾರ್ವಜನಿಕರು ಮತ್ತು ಪ್ರಯಾಣಿಕರು ತಮ್ಮ ಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.