ETV Bharat / state

ನೆಲಕಚ್ಚಿದ ಪಾದರಕ್ಷೆ ಉದ್ಯಮ: ತಲೆ ಮೇಲೆ ಕೈ ಹೊತ್ತು ಕುಳಿತ ಮಾಲೀಕರು!

ನಗರದ ಹೃದಯ ಭಾಗದಲ್ಲಿರುವ ಗಾಂಧಿನಗರದ ಪಾದರಕ್ಷೆ ಮಳಿಗೆಯಲ್ಲಿ ವ್ಯಾಪಾರವಿಲ್ಲದೆ ಮಾಲೀಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

footware industry
ನೆಲ ಕಚ್ಚಿದ ಪಾದರಕ್ಷೆ ಉದ್ಯಮ
author img

By

Published : Jun 8, 2020, 7:21 PM IST

Updated : Jun 9, 2020, 12:07 AM IST

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಗಾಂಧಿನಗರದ ಪಾದರಕ್ಷೆ ಮಳಿಗೆಯಲ್ಲಿ ಲಾಕ್​ಡೌನ್​ಗೆ ಮೊದಲು ದಿನಕ್ಕೆ ₹ 10,000 ವ್ಯಾಪಾರ ನಡೆಯುತ್ತಿದ್ದ ಅಂಗಡಿಗಳಲ್ಲಿ ಈಗ ₹1000 ವ್ಯಾಪಾರ ಆಗುವುದು ಕಷ್ಟ ಎಂಬಂತೆ ಆಗಿದೆ.

ಪಾದರಕ್ಷೆ ಅಂಗಡಿ ಮಾಲೀಕ ಮೊಹಮ್ಮದ್ ಇಖ್ಬಾಲ್ ಈಟಿವಿ ಭಾರತದ ಜೊತೆ ಮಾತನಾಡಿ, ವ್ಯಾಪಾರವಿಲ್ಲದ ಈ ಕಷ್ಟದ ಸಂದರ್ಭ ಎಂದೂ ಕಂಡಿರಲಿಲ್ಲ ಎಂದು ಬೇಸರ ಹೊರ ಹಾಕಿದರು. ಮದ್ಯಾಹ್ನ 1 ಗಂಟೆಯಾದರೂ ಬೋಣಿ ಕೂಡ ಆಗದೆ ಇರುವ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಅಂಗಡಿ ಬಾಡಿಗೆ, ವಿದ್ಯುತ್ ದರ ಕಟ್ಟಲೇಬೇಕಾಗಿದೆ. ಹೀಗಾಗಿ ಪಾದರಕ್ಷೆ ವ್ಯಾಪಾರ ಸಂಪೂರ್ಣ "ಪ್ಲಾಪ್" ಆಗಿದೆ ಎಂದರು.

ನೆಲಕಚ್ಚಿದ ಪಾದರಕ್ಷೆ ಉದ್ಯಮ

ಅದರಲ್ಲೂ ಜನರೀಗ ಉತ್ತಮ ಗುಣಮಟ್ಟದ ಪಾದರಕ್ಷೆ ಕೊಳ್ಳುವ ಬದಲಿಗೆ ಕೇವಲ ಸಾಧಾರಣ ಬೆಲೆಯ ಹವಾಯ್ ಚಪ್ಪಲಿ ಕೊಳ್ಳುತ್ತಿದ್ದಾರೆ. ಹೀಗಾರದೆ ಕೆಲಸಗಾರರಿಗೆ ಸಂಬಳ ಹೇಗೆ ನೀಡುವುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪಾದರಕ್ಷೆ ಮಳಿಗೆ ವ್ಯಾಪಾರಿಗಳು ಹೇಳುವ ಪ್ರಕಾರ, ವ್ಯಾಪಾರದಲ್ಲಿ ಚೇತರಿಕೆ ಕಾಣಲು ಇನ್ನೂ ಒಂದು ವರ್ಷ ಬೇಕಂತೆ.

Last Updated : Jun 9, 2020, 12:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.