ETV Bharat / state

ರಾಜ್ಯದಲ್ಲಿ 1 ಲಕ್ಷ ಜನರಿಗೆ ಎಷ್ಟು ಪೊಲೀಸ್ರಿದ್ದಾರೆ ಗೊತ್ತೇ?: ಜನಸಂಖ್ಯೆ ಹೆಚ್ಚಳವಾದ್ರೂ ಸಿಬ್ಬಂದಿ ನೇಮಕಾತಿ ಇಲ್ಲ!

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಜೂರಾದ ಸುಮಾರು 1.08 ಲಕ್ಷ ಹುದ್ದೆಗಳ ಪೈಕಿ 88 ಸಾವಿರ ಸಿಬ್ಬಂದಿ‌ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ 23 ಸಾವಿರ ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರ ಹಂತ ಹಂತವಾಗಿ ಸಿಬ್ಬಂದಿ ನೇಮಕಾತಿ ನಡೆಸುತ್ತಿದೆಯಾದರೂ ತ್ವರಿತ ನೇಮಕಾತಿಯ ಪ್ರಕ್ರಿಯೆ ವಿಳಂಬವಾಗುತ್ತಿದೆ.

Lack of police personnel in the state
ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ
author img

By

Published : Jul 16, 2020, 5:52 PM IST

Updated : Jul 16, 2020, 8:57 PM IST

ಬೆಂಗಳೂರು : ಜನಸಂಖ್ಯೆ ಹೆಚ್ಚಾದಂತೆ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸಿಬ್ಬಂದಿ ಕೊರತೆ, ಜನಸಂಖ್ಯೆ ಹೆಚ್ಚಳ, ವಲಸೆ ಪ್ರಮಾಣ ಸೇರಿದಂತೆ ವಿವಿಧ ಕಾರಣಗಳಿಂದ‌ ಅಪರಾಧ ಪ್ರಕರಣ‌ಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.

ಪೊಲೀಸ್ ಸಿಬ್ಬಂದಿ ಕೊರತೆ ದೇಶದ ಎಲ್ಲಾ ರಾಜ್ಯಗಳ ದೊಡ್ಡ ಸಮಸ್ಯೆ. ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಮಾಣದಲ್ಲಿ ಪೊಲೀಸರು ಇಲ್ಲದಿರುವುದೇ ಅಪರಾಧ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಜೂರಾದ ಸುಮಾರು 1.08 ಲಕ್ಷ ಹುದ್ದೆಗಳ ಪೈಕಿ 88 ಸಾವಿರ ಸಿಬ್ಬಂದಿ‌ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ 23 ಸಾವಿರ ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರ ಹಂತ ಹಂತವಾಗಿ ಸಿಬ್ಬಂದಿ ನೇಮಕಾತಿ ನಡೆಸುತ್ತಿದೆಯಾದರೂ ತ್ವರಿತ ನೇಮಕಾತಿಯ ಪ್ರಕ್ರಿಯೆ ವಿಳಂಬವಾಗುತ್ತಿದೆ.

ವಿದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರ ಸಂಖ್ಯೆ ತೀರಾ ಕಡಿಮೆಯಿದೆ. ಮಂಜೂರಾದ ಹುದ್ದೆಗಳಿಗೂ ಕೆಲಸ‌ ಮಾಡುತ್ತಿರುವ ಪೊಲೀಸರಿಗೂ ಅಜಗಜಾಂತರ ವ್ಯತ್ಯಾಸವಿದೆ. 2019 ರ ರಾಷ್ಟ್ರೀಯ ಮಾನದಂಡದ ಪ್ರಕಾರ, ದೇಶದ ಒಂದು ಲಕ್ಷ ಜನರಿಗೆ 198 ಪೊಲೀಸರಿರಬೇಕಾದ ಜಾಗದಲ್ಲಿ 158 ಪೊಲೀಸರಿದ್ದಾರೆ. ಕರ್ನಾಟಕದಲ್ಲಿ ಒಂದು ಲಕ್ಷ ಜನರಿಗೆ 182 ಪೊಲೀಸರು ಇರಬೇಕು. ಆದರೆ, 139 ಸಿಬ್ಬಂದಿ‌ ಮಾತ್ರ ಇದ್ದಾರೆ. ಗುಜರಾತ್​ನಲ್ಲಿ 161ರ ಜಾಗದಲ್ಲಿ 131, ಹರಿಯಾಣದಲ್ಲಿ 226 ಮಂದಿ ಬದಲು 163 ಪೊಲೀಸರಿದ್ದಾರೆ. ಮಿಜೋರಾಂ 1,016 ಪೋಸ್ಟ್​ಗೆ 771, ರಾಜಸ್ತಾನದಲ್ಲಿ 145 ಪೈಕಿ 128 ಹಾಗೂ ಪಶ್ಚಿಮ ಬಂಗಾಳದಲ್ಲಿ 158 ಸಿಬ್ಬಂದಿ‌‌ ಮಂಜೂರಾದ ಹುದ್ದೆಗಳ ಪೈಕಿ ಕೇವ‌ಲ 100 ಜನರಿದ್ದಾರೆ. ಇದೇ ರೀತಿ ದೇಶದ ಬಹುತೇಕ ರಾಜ್ಯಗಳಲ್ಲಿ‌ ಪೊಲೀಸ್ ಅನುಪಾತದಲ್ಲಿ ಏರಿಳಿತ ಇರುವುದನ್ನು ಕಾಣಬಹುದು. ರಾಜ್ಯದಲ್ಲಿ‌‌ ಆರೂವರೆ ಕೋಟಿಗಿಂತ ಹೆಚ್ಚು‌ ಜನರಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ‌‌ ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿಲ್ಲ.

ನಿವೃತ್ತ ಡಿಜಿಪಿ ಶಂಕರ ಬಿದರಿ

ದೇಶದಲ್ಲಿ ಡಿಜಿಟಲೀಕರಣ ಹೆಚ್ಚಾಗುತ್ತಿರುವ ಪರಿಣಾಮ ಹಳ್ಳಿಗಳು ಪಟ್ಟಣಗಳಾಗುತ್ತಿವೆ. ಪಟ್ಟಣ‌ ನಗರವಾಗಿ, ನಗರ ಮಹಾನಗರವಾಗಿ ಬದಲಾಗುತ್ತಿವೆ. ಹಳ್ಳಿಗಳಿಂದ ಮಹಾನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ವಲಸೆ ಬರುವವರ ಪ್ರಮಾಣ ಅಧಿಕವಾಗಿದೆ. ದಿನೇ ದಿನೆ ಆರ್ಥಿಕ, ಉದ್ಯಮ ಹಾಗೂ ಕೈಗಾರಿಕೆಗಳು ಹಿಗ್ಗಿಸಿಕೊಳ್ಳುತ್ತಿವೆ.‌ ಕೃಷಿ ಪ್ರದೇಶಗಳು ವಸತಿ‌‌ ಪ್ರದೇಶಗಳಾಗಿ ಪರಿವರ್ತನೆಯಾಗಿವೆ. ‌‌ಇದೆಲ್ಲದರ ಬೆಳವಣಿಗೆಯಿಂದ‌ ಪೊಲೀಸ್ ಠಾಣೆಗಳ‌ ಮೇಲೆ‌‌ ಒತ್ತಡ ಬೀಳುತ್ತಿದೆ.
ಇನ್ನೊಂದೆಡೆ ಕೋಮುಗಲಭೆ ಹಾಗೂ ಭಯೋತ್ಪಾದನೆ ಕೃತ್ಯಗಳ‌ ಜೊತೆಗೆ ಅಪರಾಧ ಜಗತ್ತಿನಲ್ಲಿ ಹೊಸ ಹೊಸ ರೀತಿಯಲ್ಲಿ ವಂಚನೆ, ಕೌಟುಂಬಿಕ‌ ಕ್ರೌರ್ಯ, ಸೈಬರ್ ಕ್ರೈಂ, ಹೀಗೆ ನಿತ್ಯ‌ ನೂತನ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಹಲವು ಸವಾಲುಗಳ‌ ನಡುವೆ ಪೊಲೀಸರು ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿಜಿಪಿಯಾಗಿದ್ದ ಬಾಲಕೃಷ್ಣ ರಾವ್ ಅವರ ಅವಧಿಯಲ್ಲಿ ಗ್ರಾಮೀಣ, ನಗರ,‌ ಮಹಾನಗರ‌ ಮೂರು ಭಾಗಗಳಾಗಿ ವಿಂಗಡಿಸಿ ಯಾವ ಠಾಣೆಗಳಲ್ಲಿ ಎಷ್ಟು ಮಂದಿ‌‌ ಪೊಲೀಸರಿರಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ‌‌‌ ಪೊಲೀಸರನ್ನು ನೇಮಕ ಮಾಡಬೇಕೆಂದು‌ ಹೇಳಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ‌ಇದಕ್ಕೆ ಬಂಗಾರಪ್ಪ ಅನುಮೋದಿಸಿದ್ದರು.‌ ಇವೆಲ್ಲ ಆಗಿ 24 ವರ್ಷ ಗತಿಸಿದರೂ ಸಿಬ್ಬಂದಿ‌ ನೇಮಕಾತಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಿಲ್ಲ. ಜನಸಂಖ್ಯೆ ಹೆಚ್ಚಳವಾದರೂ ಪೊಲೀಸ್ ಸಿಬ್ಬಂದಿ ನೇಮಕದಲ್ಲಿ ಹೆಚ್ಚಳವಾಗಿಲ್ಲ. ಇದನ್ನು ರಾಜ್ಯ ಸರ್ಕಾರ ಪರಿಶೀಲನೆ‌ ನಡೆಸಬೇಕು ನಿವೃತ ಡಿಜಿಪಿ ಶಂಕರ ಬಿದರಿ ಹೇಳುತ್ತಾರೆ.

Last Updated : Jul 16, 2020, 8:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.