ETV Bharat / state

ಭರ್ತಿಯಾಗಿವೆ ಕೋವಿಡ್ ಕೇರ್ ಸೆಂಟರ್: ಬೆಡ್ ಸಮಸ್ಯೆ ಉಲ್ಬಣ ಸಾಧ್ಯತೆ - ಬೆಡ್ ಸಮಸ್ಯೆ

ಸಿಲಿಕಾನ್​ ಸಿಟಿಯಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಆಸ್ಪತ್ರೆಗಳಲ್ಲೂ ಬೆಡ್​ ಸಮಸ್ಯೆ ಕಂಡುಬರುತ್ತಿದೆ. ಇದೀಗ ಕೋವಿಡ್ ಕೇರ್ ಸೆಂಟರ್​ನಲ್ಲೂ ಬೆಡ್ ಸಮಸ್ಯೆ ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ.

ಸಿಎಂ ಸೇರಿ ಸಚಿವರಿಂದ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ

author img

By

Published : Jul 24, 2020, 8:39 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಥಿತಿ ದಿನದಿಂದ ದಿನಕ್ಕೆ ವಿಷಮಗೊಳ್ಳುತ್ತಿದೆ. ಬದುಕಿದರೆ ಸಾಕು ಎನ್ನುವ ಬದಲು ಬೆಡ್ ಸಿಕ್ಕರೆ ಸಾಕು ಎನ್ನುವ ದಿನ ಬರಲು ದೂರವೇನಿಲ್ಲ. ಐಸಿಯು, ವೆಂಟಿಲೇಟರ್, ಕೋವಿಡ್ ಕೇರ್ ಸೆಂಟರ್ ಬೆಡ್​ಗೂ ಈಗ ಪರದಾಡುವ ಸನ್ನಿವೇಶ ಎದುರಾಗುತ್ತಿದೆ.

ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆ
ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆ

ರಾಜ್ಯ ರಾಜಧಾನಿಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿದ್ದು, ರೋಗ ಲಕ್ಷಣವಿಲ್ಲದ ಸೋಂಕಿತರನ್ನು ಇರಿಸಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್​ಗಳು ತುಂಬಿ ತುಳುಕುತ್ತಿವೆ. ಹೊಸದಾಗಿ ಬರುವವರಿಗೆ ಇನ್ನು ಬೆಡ್ ಸಿಗದ ಆತಂಕ ಎದುರಾಗುತ್ತಿದೆ.

ಸಿಎಂ ಸೇರಿ ಸಚಿವರಿಂದ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ
ಸಿಎಂ ಸೇರಿ ಸಚಿವರಿಂದ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ

ಕೊರೊನಾ ಸ್ಥಿತಿ ನಿಧಾನಕ್ಕೆ ಸರ್ಕಾರದ ಕೈ ಜಾರುತ್ತಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮೊದಲು ವೆಂಟಿಲೇಟರ್ ಕೊರತೆ, ನಂತರ ಐಸಿಯು ಕೊರತೆ ಸೃಷ್ಟಿಯಾಯಿತು. ಶೇ.95 ರಷ್ಟು ಸೋಂಕಿತರಿಗೆ ಐಸಿಯು, ವೆಂಟಿಲೇಟರ್ ಅಗತ್ಯವಿಲ್ಲ ಎನ್ನುವ ಸಬೂಬು ಹೇಳಿದ್ದ ಸರ್ಕಾರಕ್ಕೆ ನಂತರ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್​ಗಳ ಕೊರತೆ ಸೃಷ್ಟಿಯಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆಗಳಿಂದ ಶೇ.50 ರಷ್ಟು ಬೆಡ್ ಪಡೆದು ಪರಿಸ್ಥಿತಿ ನಿಭಾಯಿಸುವ ಸರ್ಕಸ್ ನಡೆಸುತ್ತಿದೆ.

ಆದರೆ, ಈಗ ಕೋವಿಡ್ ಕೇರ್ ಸೆಂಟರ್​ಗಳಲ್ಲಿಯೂ ಹಾಸಿಗೆಗಳ ಕೊರತೆ ಎದುರಾಗುತ್ತಿದೆ. ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆ ಎದುರಾದಾಗ ಇದಕ್ಕೆ ಪರಿಹಾರವಾಗಿ ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ಆಸ್ಪತ್ರೆ ಬದಲು ಆರೈಕೆ ಕೇಂದ್ರಗಳಲ್ಲಿ ಇರಿಸುವ ಚಿಂತನೆ ನಡೆಸಿದ್ದ ಸರ್ಕಾರ, 8 ಕೋವಿಡ್ ಕೇರ್ ಸೆಂಟರ್ ಆರಂಭಿಸಿ ರೋಗ ಲಕ್ಷಣ ಇಲ್ಲದವರನ್ನು ಅಲ್ಲಿಗೆ ಕಳುಹಿಸುತ್ತಿದೆ.

ಹಜ್ ಭವನದಲ್ಲಿ 384 ಬೆಡ್, ಜಿಕೆವಿಕೆಯಲ್ಲಿ 716 ಬೆಡ್, ಬಾಲಕರ ಹಾಸ್ಟೆಲ್ 200 ಬೆಡ್, ಕೋರಮಂಗಲದಲ್ಲಿ 245 ಬೆಡ್, ಎಸ್ಎಸ್ಎಹೆಚ್​ನಲ್ಲಿ 176 ಬೆಡ್, ಸರ್ಕಾರಿ ಆಯುರ್ ಕಾಲೇಜ್​ನಲ್ಲಿ 250 ಬೆಡ್, ಬಾಲಕಿಯರ ಹಾಸ್ಟೆಲ್ 143 ಬೆಡ್, ಎನ್ಇಆರ್​ಜಿಹೆಚ್ 510 ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10 ಸಾವಿರ ಬೆಡ್ ಸಾಮರ್ಥ್ಯದ ಕೇರ್ ಸೆಂಟರ್​ಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಸದ್ಯ ಇರುವ 8 ಕೋವಿಡ್ ಕೇರ್ ಸೆಂಟರ್​ಗಳು ಇದೀಗ ಬಹುತೇಕ ಭರ್ತಿಯಾಗಿವೆ. ಒಟ್ಟು 2,624 ಬೆಡ್​ಗಳಲ್ಲಿ 2334 ಬೆಡ್​ಗಳು ಭರ್ತಿಯಾಗಿದ್ದು, ಕೇವಲ 290 ಬೆಡ್​ಗಳು ಮಾತ್ರ ಖಾಲಿ ಇವೆ. ಬೆಂಗಳೂರಿನಲ್ಲಿ ನಿತ್ಯ 2 ಸಾವಿರಕ್ಕೂ ಹೆಚ್ಚಿನ ಕೊರೊನಾ ಪ್ರಕರಣ ಪತ್ತೆಯಾಗುತ್ತಿದ್ದು, ಅದರಲ್ಲಿ ರೋಗ ಲಕ್ಷಣ ಇಲ್ಲದವರ ಸಂಖ್ಯೆಯೂ ಸಾಕಷ್ಟಿದೆ. ಆದರೆ, ಈಗ ಕೋವಿಡ್ ಕೇರ್ ಸೆಂಟರ್​ನಲ್ಲಿ ಬೆಡ್ ಇಲ್ಲ ಎಂದರೆ ಮನೆಯಲ್ಲಿಯೇ ಐಸೋಲೇಷನ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಆದರೆ, ಎಲ್ಲರ ಮನೆಗಳು ಹೋಂ ಐಸೋಲೇಷನ್​ಗೆ ಯೋಗ್ಯವಾಗಿರುವುದಿಲ್ಲ. ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ಬೇಕೇಬೇಕು. ಆದರೆ, ಸದ್ಯ ಕೊರೊನಾ ಸೋಂಕು ಹರಡುತ್ತಿರುವ ತೀವ್ರತೆ ನೋಡಿದರೆ ಇನ್ನೆರಡು ದಿನದಲ್ಲಿ ಕೋವಿಡ್ ಕೇರ್ ಸೆಂಟರ್ ಹೌಸ್ ಫುಲ್ ಆಗುವುದು ಬಹುತೇಕ ಖಚಿತವಾಗಿದೆ. ನಂತರ ಕೇರ್ ಸೆಂಟರ್ ಇಲ್ಲದೇ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.

ಸರ್ಕಾರ ಆದಷ್ಟು ಬೇಗ 10 ಸಾವಿರ ಬೆಡ್ ಸಾಮರ್ಥ್ಯದ ವಸ್ತು ಪ್ರದರ್ಶನ ಕೇಂದ್ರದಲ್ಲಿನ ಕೋವಿಡ್ ಕೇರ್ ಸೆಂಟರ್ ಆರಂಭಿಸದೇ ಇದ್ದಲ್ಲಿ ರಾಜ್ಯ ರಾಜಧಾನಿಯ ಕೋವಿಡ್ ಸೋಂಕಿತರ ಪರಿಸ್ಥಿತಿ ಹೇಳತೀರದಂತಾಗಲಿದೆ. ಬೆಡ್​ಗಾಗಿ ಆಸ್ಪತ್ರೆ, ಕೇರ್ ಸೆಂಟರ್ ಅಲೆದಾಡಬೇಕಾಗಲಿದೆ. ಈಗಾಗಲೇ ಸೋಂಕಿತರು ಬೆಡ್​ಗಾಗಿ ಸಿಎಂ ನಿವಾಸ, ರಾಜಭವನದ ಮುಂದೆಲ್ಲಾ ಬಂದು ಅಂಗಲಾಚಿದ ಘಟನೆ ಕಣ್ಮುಂದೆ ಇದೆ. ಸರ್ಕಾರ ಎಚ್ಚೆತ್ತುಕೊಳ್ಳದೇ ಇದ್ದರೆ ಸೋಂಕಿತರು ಬೀದಿಗಿಳಿಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.