ಬೆಂಗಳೂರು: ಕೊರೊನಾ, ಲಾಕ್ಡೌನ್ನಿಂದಾಗಿ ಡಿಪೋ ಸೇರಿದ್ದ ಸಾವಿರಾರು ಕೆಎಸ್ಆರ್ಟಿಸಿ ಬಸ್ಗಳು ಇಂದು ರಸ್ತೆಗಿಳಿದಿದ್ದು, ಆರಂಭಕ್ಕೂ ಮೊದಲು ಬಸ್ ನಿಲ್ದಾಣದಲ್ಲಿ ಚಾಲಕರು, ನಿರ್ವಾಹಕರು ಪೂಜೆ ಸಲ್ಲಿಸಿದರು.
ಕಳೆದ ಮೂರು ತಿಂಗಳಿಂದ ಯಾವುದೇ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದ ಮೆಜಸ್ಟಿಕ್ ಬಸ್ ನಿಲ್ದಾಣದಲ್ಲಿ ಇಂದು ಸಾವಿರಾರು ಬಸ್ಗಳು ಪ್ರಯಾಣಕ್ಕೆ ಸಜ್ಜಾಗಿದ್ದು, ಇದಕ್ಕೂ ಮೊದಲು ಚಾಲಕರು, ನಿರ್ವಾಹಕರು ಅರ್ಚಕರನ್ನು ಕರೆಸಿ ಪೂಜೆ ಮಾಡಿಸಿದರು. ಬಳಿಕ ಕುಂಬಳಕಾಯಿ ಒಡೆದು ಬಸ್ಗಳನ್ನು ಚಾಲನೆ ಮಾಡಿದರು. ತಮ್ಮ ತಮ್ಮ ಊರುಗಳಿಗೆ ತೆರಳಲು ಕಾಯುತ್ತಿದ್ದ ಸಾವಿರಾರು ಜನರು ಖುಷಿಯಿಂದ ಪ್ರಯಾಣ ಬೆಳೆಸಿದರು.
ಪ್ರಯಾಣಿಕರಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ( online ticketing ) ಮೂಲಕ ಪ್ರಯಾಣಿಸಲು ಕೆಎಸ್ಆರ್ಟಿಸಿ ಕೋರಿದ್ದು, ಇದರಿಂದ ಬಸ್ ನಿಲ್ದಾಣದಲ್ಲಿ ಜನ ಸಂದಣಿ ಮತ್ತು ಸರತಿ ಸಾಲುಗಳಲ್ಲಿ ಕಾಯುವುದನ್ನು ತಪ್ಪಿಸಲು ಮನವಿ ಮಾಡಿಕೊಂಡಿದೆ.
ಬಸ್ಗಳಲ್ಲಿ ಶೇ. 50% ಆಸನಗಳ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವುದರಿಂದ ಅತ್ಯಧಿಕ ಬಸ್ಗಳ ಕಾರ್ಯಾಚರಣೆ ಅವಶ್ಯಕವಿದ್ದು, ಈ ಸಂಬಂಧ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಲ್ಲಿ ಅವರ ಪ್ರಯಾಣವು ಸುಗಮವಾಗಿರಲಿದೆ. ಹಾಗಾಗಿ ಜನರು ಮುಂಗಡ ಟಿಕೆಟ್ ಬುಕ್ ಮಾಡಲು www.ksrtc.in ಸಂಪರ್ಕಿಸಬಹುದಾಗಿದೆ.