ETV Bharat / state

ಕೆಎಸ್ಆರ್‌ಟಿಸಿಯ ಎಲ್ಲ  ಸಿಬ್ಬಂದಿಯ 1 ದಿನದ ವೇತನ  ಸಿಎಂ ಪರಿಹಾರ ನಿಧಿಗೆ ಸಲ್ಲಿಕೆ...!

author img

By

Published : May 13, 2020, 12:46 PM IST

Updated : May 13, 2020, 1:00 PM IST

ರಾಜ್ಯ ರಸ್ತೆ ಸಾರಿಗೆಯ ನಾಲ್ಕು ಸಂಸ್ಥೆಗಳ ಸಮಸ್ತ ಅಧಿಕಾರಿ ಮತ್ತು ಸಿಬ್ಬಂದಿ ಒಂದು ದಿನದ ವೇತನದ ಮೊತ್ತವಾದ 9.85 ಕೋಟಿ ರೂ.ಗಳನ್ನು ಸಿಎಂ ‘ಕೋವಿಡ್ ಪರಿಹಾರ ನಿಧಿ’ಗೆ ನೀಡಲಾಗಿದೆ.

ksrtc donated one day salary to cm kovid relif fund
9.85 ಕೋಟಿ ಸಿಎಂ ಪರಿಹಾರದ ನಿಧಿಗೆ ಸಲ್ಲಿಕೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ಸಂಸ್ಥೆಗಳ ಸಮಸ್ತ ಅಧಿಕಾರಿ ಮತ್ತು ಸಿಬ್ಬಂದಿ ಒಂದು ದಿನದ ವೇತನದ ಮೊತ್ತವಾದ 9.85 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ‘ಕೋವಿಡ್ ಪರಿಹಾರ ನಿಧಿ’ಗೆ ನೀಡಲಾಗಿದೆ.

9.85 ಕೋಟಿ ಸಿಎಂ ಪರಿಹಾರ ನಿಧಿಗೆ ಸಲ್ಲಿಕೆ

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾರಿಗೆ ನಿಗಮದ ಪರವಾಗಿ ಡಿಸಿಎಂ ಲಕ್ಷ್ಮಣ ಸವದಿ ಚೆಕ್ ಹಸ್ತಾಂತರಿಸಿದರು‌. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಸಾರಿಗೆ ಇಲಾಖೆ ಪ್ರಧಾನ‌ ಕಾರ್ಯದರ್ಶಿ ಗೌರವ ಗುಪ್ತಾ, ಕೆಎಸ್‌ಆರ್​​​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ಡಾ.ರಾಮ್ ನಿವಾಸ್ ಸಪೆಟ್, ನಿರ್ದೇಶಕಿ ಕವಿತಾ ಎಸ್ ಮನ್ನಿಕೇರಿ, ಹೆಚ್.ಕೆ.ರಮಾಮಣಿ ಉಪಸ್ಥಿತರಿದ್ದರು.

ಕಳೆದ ಎರಡು ತಿಂಗಳುಗಳಿಂದ ಸಾರಿಗೆ ನಿಗಮಗಳಲ್ಲಿ ಯಾವುದೇ ಬಸ್ ಕಾರ್ಯಾಚರಣೆ ಆಗದೇ , ನಿಗಮಗಳ ಆದಾಯ ಸಂಪೂರ್ಣ ನಿಂತಿರುತ್ತದೆ. ವೇತನ ನೀಡಲೂ ಹಣವಿಲ್ಲದಂತಹ ಸ್ಥಿತಿಯಲ್ಲಿದ್ದ ಸಾರಿಗೆ ನಿಗಮಗಳಿಗೆ, ಇದೇ‌ ಮೊದಲ ಬಾರಿಗೆ ಸಾರಿಗೆ ನಿಗಮಗಳ ಇತಿಹಾಸದಲ್ಲಿ, ಸರ್ಕಾರವು ಸಾರಿಗೆ ಸಿಬ್ಬಂದಿಯ ವೇತನಕ್ಕೆ ಹಣ ಬಿಡುಗಡೆ ಮಾಡಿ ಸಾರಿಗೆ ಸಂಸ್ಥೆಗಳ ಬೆನ್ನಿಗೆ ನಿಂತು, ಸಿಬ್ಬಂದಿಯಲ್ಲಿ ಆತ್ಮಸ್ಥೆರ್ಯ ತುಂಬಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಇಲಾಖೆ ರವರು ಧನ್ಯವಾದ ಪತ್ರದೊಂದಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

Last Updated : May 13, 2020, 1:00 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.