ಕಾರವಾರ (ಉತ್ತರ ಕನ್ನಡ) : ಶಿರೂರು ಬಳಿ ಗುಡ್ಡ ಕುಸಿತದ ವೇಳೆ ಗಂಗಾವಳಿ ನದಿಯಲ್ಲಿ ತೇಲಿ ಹೋಗಿದ್ದ ಟ್ಯಾಂಕರ್ ಲಾರಿಯ ಎರಡು ಟಯರ್ಗಳು ಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆಸಲಾಗಿದೆ.
ಶಿರೂರು ಬಳಿ ಗಂಗಾವಳಿ ನದಿಯಲ್ಲಿ ಡ್ರೆಜ್ಜಿಂಗ್ ಯಂತ್ರದ ಮೂಲಕ ಶೋಧಕಾರ್ಯ ಮಾಡುವ ವೇಳೆ ದಡದಿಂದ 15 ಅಡಿ ದೂರದಲ್ಲಿ ಟಯರ್ ಇರುವ ಕುರುಹು ಪತ್ತೆಯಾಗಿತ್ತು. ಈ ಹಿನ್ನೆಲೆ ಮುಳುಗುತಜ್ಞ ಈಶ್ವರ ಮಲ್ಫೆ ನದಿಯಾಳಕ್ಕೆ ಮುಳುಗಿ ಲಾರಿಯ ಟಯರ್ಗೆ ಕೇಬಲ್ ಕಟ್ಟಿ ಬಂದಿದ್ದರು.
ಅದರಂತೆ ಡ್ರೆಜ್ಜಿಂಗ್ ಯಂತ್ರದ ಮೂಲಕ ಎರಡು ಟಯರ್ ಮೇಲೆ ಎತ್ತಲಾಗಿದೆ. ಮೊದಲು ಕೇರಳ ಮೂಲದ ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಜ್ ಲಾರಿಯ ಎರಡು ಚಕ್ರಗಳು ಎಂದು ತಿಳಿಯಲಾಗಿತ್ತು. ಆದರೆ, ಪತ್ತೆಯಾಗಿರುವ ಲಾರಿ ಟಯರ್ ಹಾಗೂ ಕ್ಯಾಬಿನ್ ಗುಡ್ಡಕುಸಿತ ಸಂದರ್ಭದಲ್ಲಿ ತೇಲಿಹೋಗಿದ್ದ ಟ್ಯಾಂಕರ್‌ನದು ಎಂದು ಗುರುತು ಮಾಡಲಾಗಿದೆ.
ಮುಂಭಾಗದ ಎಕ್ಸೆಲ್ ಸಮೇತ ಟಯರ್ ಪತ್ತೆ ಮಾಡಲಾಗಿದೆ. ಇದೀಗ ಇದೇ ಸ್ಥಳದಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ನಿರಂತರ ಕಾರ್ಯಾಚರಣೆ ಮುಂದುವರೆಸಲಾಗಿದೆ. ಕೆಲ ಗಂಟೆಯ ಮೊದಲು ಡ್ರೆಜ್ಜರ್ ಮೂಲಕ ಕಾರ್ಯಾಚರಣೆ ವೇಳೆ ಲಾರಿಯಲ್ಲಿದ್ದ ಮರದ ತುಂಡು ಪತ್ತೆಯಾಗಿತ್ತು. ಇದೀಗ ಮತ್ತೆ ಇದೇ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಇದನ್ನೂ ಓದಿ : ಶಿರೂರು ಬಳಿ ಕಾರ್ಯಾಚರಣೆಯಲ್ಲಿ ಹಗ್ಗ, ಕಟ್ಟಿಗೆ ತುಂಡು ಪತ್ತೆ: ಬೆಂಜ್ ಲಾರಿಯ ಸುಳಿವು? - Shiruru hill collapsed operation