ETV Bharat / sports

ಸ್ಪಿನ್​ ಬೌಲಿಂಗ್​ಗೆ ಮುಂದಾದ ಮೊಹ್ಮದ್​ ಸಿರಾಜ್​: 45 ನಿಮಿಷಕ್ಕೂ ಮೊದಲೇ ಪಂದ್ಯ ನಿಲ್ಲಿಸಿದ ಅಂಪೈರ್, ಅಸಲಿಗೆ ಆಗಿದ್ದೇನು? - IND VS BAN Test - IND VS BAN TEST

ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್​ನ ಪಂದ್ಯದ ಮೂರನೇ ದಿನದಾಟವನ್ನು ನಿಗದಿತ ಸಮಯಕ್ಕೂ ಮೊದಲೆ ಮುಕ್ತಾಯಗೊಳಿಸಲಾಗಿದೆ. ಅದಕ್ಕೆ ಕಾರಣ ಏನೆಂದು ಇದೀಗ ತಿಳಿಯಿರಿ.

ಮೊಹ್ಮದ್​ ಸಿರಾಜ್​
ಮೊಹ್ಮದ್​ ಸಿರಾಜ್​ (AP)
author img

By ETV Bharat Sports Team

Published : Sep 21, 2024, 7:18 PM IST

ಹೈದರಾಬಾದ್​: ಭಾರತ ಮತ್ತು ಬಾಂಗ್ಲಾದೇಶ ನಡುವೆ ಚೆನ್ನೈನ ಚೆಪಾಕ್​ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಮೂರನೇ ದಿನದಾಟವನ್ನು ನಿಗದಿತ ಸಮಯ 45 ನಿಮಿಷಕ್ಕೂ ಮೊದಲೇ ನಿಲ್ಲಿಸಲಾಗಿದೆ.

ಹೌದು, ಪಂದ್ಯ ನಡೆಯುತ್ತಿದ್ದ ವೇಳೆ ಸಂಜೆ 4.15ರ ಸುಮಾರಿಗೆ ಮೈದಾನದ ಸುತ್ತ ಮೋಡ ಆವರಿಸಿತ್ತು. ಇದರಿಂದಾಗಿ ಬೆಳಕಿನ ಕೊರತೆ ಉಂಟಾಗಿದೆ. ಕೂಡಲೇ ಮೈದಾನದಲ್ಲಿನ ಫ್ಲೆಡ್​ ಲೈಟ್​ಗಳನ್ನು ಬೆಳಗಿಸಲು ಸೂಚಿಸಲಾಗಿತ್ತು. ಆದರೆ ಆ ಲೈಟ್​ಗಳಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಆಟ ಮುಂದುವರಿಸಬೇಕೆ ಬೇಡವೇ ಎಂದು ಚರ್ಚೆ ನಡೆಸಿದ ಅಂಪೈರ್​ಗಳು ಇಂದಿನ ಆಟವನ್ನು ಇಲ್ಲಿಗೆ ಮುಕ್ತಾಯ ಗೊಳಿಸಲು ಸೂಚಿಸಿದರು. ಈ ವೇಳೆ ನಾಯಕ ರೋಹಿತ್​ ಶರ್ಮಾ, ಬೆಳಕು ಉತ್ತಮವಾಗಿದ್ದು ಪಂದ್ಯವನ್ನು ಮುಂದುವರೆಸಬಹುದಾಗಿದೆ. ಜತೆಗೆ ವೇಗದ ಬೌಲರ್​ಗಳ ಬದಲಿಗೆ ಸ್ಪೀನ್ನರ್​ಗಳಿಂದ ಬೌಲಿಂಗ್​ ಮುಂದುವರೆಸುವುದಾಗಿ ಅಂಪೈರ್​ಗೆ ತಿಳಿಸಿದರು.

ಅದಾಗಲೇ ಮೊಹ್ಮದ್​ ಸಿರಾಜ್​ ತಮ್ಮ ಓವರ್​ನ 2 ಎಸೆತಗಳನ್ನು ಪೂರ್ಣಗೊಳಿಸಿದ್ದರು. ರೋಹಿತ್​ ಅವರ ಮಾತು ಕೇಳಿದ ಬಳಿಕ ಉಳಿದ ನಾಲ್ಕು ಎಸೆತಗಳನ್ನು ಸ್ಪಿನ್​ ಬೌಲಿಂಗ್​ ಮಾಡುವುದಾಗಿ ಬೇಡಿಕೆ ಇಟ್ಟರು. ಅಲ್ಲದೇ ಸ್ಪಿನ್​ ಬೌಲಿಂಗ್​ ಅಭ್ಯಾಸವನ್ನು ಮಾಡಲಾರಂಭಿಸಿದ್ದರು. ಆದ್ರೆ ಇದಕ್ಕೊಪ್ಪದ ಅಂಪೈರ್​ ಪಂದ್ಯವನ್ನು ನಿಲ್ಲಿಸಲು ಕರೆ ನೀಡಿದರು. ಇದರಿಂದಾಗಿ 45 ನಿಮಷಕ್ಕೂ ಮೊದಲೇ ಪಂದ್ಯ ಮುಕ್ತಾಯಗೊಂಡಿದೆ.

ಉಳಿದಂತೆ ಮೊದಲ ಟೆಸ್ಟ್​ನಲ್ಲಿ ಬಾಂಗ್ಲಾಗೆ ಭಾರತ ಬೃಹತ್​ ಗುರಿ ನೀಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಆರ್​ ಅಶ್ವಿನ್​ ಶತಕ ಮತ್ತು ಜಡೇಜಾರ ಅರ್ಧಶತಕದ ನೆರವಿನಿಂದ 376 ರನ್​ ಕಲೆಹಾಕಿದ್ದ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ ಪಂತ್​ ಮತ್ತು ಗಿಲ್​ ಶತಕದಿಂದಾಗಿ 4 ವಿಕೆಟ್​ ನಷ್ಟಕ್ಕೆ 287 ರನ್​ ಕಲೆ ಹಾಕಿ ಡಿಕ್ಲೇರ್​ ಘೋಷಣೆ ಮಾಡಿಕೊಂಡಿತು. ಇದರೊಂದಿಗೆ ರೋಹಿತ್​ ಪಡೆ 515 ರನ್​ಗಳ ಮುನ್ನಡೆ ಸಾಧಿಸುವುದರ ಜೊತೆಗೆ ಎದುರಾಳಿ ತಂಡಕ್ಕೆ ಬೃಹತ್​ ಗುರಿಯೊಂದನ್ನು ನೀಡಿತು.

ಈ ಗುರಿಯನ್ನು ಬೆನ್ನು ಹತ್ತಿರುವ ಬಾಂಗ್ಲಾ ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕ ಬ್ಯಾಟರ್​ಗಳಾದ ಜಾಕೀರ್​ ಹಸನ್​, ಶದಮ್​ ಇಸ್ಲಾಮ್​ 62 ರನ್​ಗಳ ಜೊತೆಯಾಟವಾಡಿ ಉತ್ತಮ ಫಾರ್ಮನಲ್ಲಿ ಕಾಣಿಸಿಕೊಂಡಿದ್ದರು. ಆದರೆ, 33 ರನ್​ ಗಳಿಸಿದ್ದ ಜಾಕೀರ್​ಗೆ ಬುಮ್ರಾ ಪೆವಿಲಿಯನ್​ ದಾರಿ ತೋರಿಸಿದರು, ನಂತರ 35 ರನ್ ಕಲೆಹಾಕಿದ್ದ ಶದಮ್​ ಆರ್​ ಅಶ್ವಿನ್​ ಬಲೆಗೆ ಬಿದ್ದರು. ಬಳಿಕ ಬಂದ ಮೊಮಿನುಲ್​ ಹಖ್​ (13), ಮುಷಿಫಿಕರ್​ ರಹೀಮ್​ (13) ಕೂಡ ಬಹುಬೇಗ ವಿಕೆಟ್​ ಒಪ್ಪಿಸಿ ಹೊರ ನಡೆದರು. ನಾಯಕ ನಜ್​ಮುಲ್​ ಹೊಸೈನ್​ ಶಾಂಟೋ ಅರ್ಧಶತಕ ಪೂರೈಸಿ, ಶಕೀಬ್​ರೊಂದಿಗೆ ನಾಲ್ಕನೇ ದಿನದಾಟಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದ ಫೀಲ್ಡಿಂಗ್​ ಸೆಟ್​​ ಮಾಡಿದ ರಿಷಭ್​ ಪಂತ್​: ವಿಡಿಯೋ ವೈರಲ್​ - Rishabh Pant sets field

ETV Bharat Logo

Copyright © 2024 Ushodaya Enterprises Pvt. Ltd., All Rights Reserved.