ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮಗಳು ನಿವೃತ್ತ ಸಿವಿಲ್, ಜಿಲ್ಲಾ ನ್ಯಾಯಾಧೀಶರನ್ನು ಅಥವಾ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ತನಿಖಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳಬಹುದು ಎಂದು ಹೈಕೋರ್ಟ್ ಇಂದು ತಿಳಿಸಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಎನ್‌ಇಕೆಆರ್‌ಟಿಸಿ) ಸಿಬ್ಬಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದ್ದು, ಆ ಮೂಲಕ ಎನ್ಇಕೆಆರ್‌ಟಿಸಿ ಕ್ರಮವನ್ನು ಎತ್ತಿಹಿಡಿದು, ಅರ್ಜಿಯನ್ನು ವಜಾಗೊಳಿಸಿತು.
ಅಲ್ಲದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿ (ನಡವಳಿಕೆ ಮತ್ತು ಶಿಸ್ತು) ನಿಯಮಾವಳಿ 1971ರ ನಿಯಮ 23(2)ರಲ್ಲಿ ಪ್ರಾಧಿಕಾರ (ಅಥಾರಿಟಿ) ಎನ್ನುವ ಪದ ಬಳಕೆ ಮಾಡಲಾಗಿದೆ ಎನ್ನುವ ಕಾರಣಕ್ಕೆ ಆರ್‌ಟಿಸಿಯ ಅಧಿಕಾರಿಯನ್ನು ಬಿಟ್ಟು ಬೇರೆಯವರನ್ನು ನೇಮಕ ಮಾಡಬಾರದೆಂದು ಎಲ್ಲಿಯೂ ಹೇಳಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ : ಅರ್ಹ ತೃತೀಯ ಲಿಂಗಿಗಳಿಗೆ ಪ್ರವೇಶಾತಿ ಅವಕಾಶ ನೀಡಲು NLSIUಗೆ ಹೈಕೋರ್ಟ್ ನಿರ್ದೇಶನ
ನಿಯಮಗಳಲ್ಲಿ ಅಥಾರಿಟಿ ಪದದ ವ್ಯಾಖ್ಯಾನ ನೀಡಲಾಗಿದ್ದರೂ ಸಹ ತನಿಖಾ ಪ್ರಾಧಿಕಾರ (ಎನ್ವಕೈರಿ ಆಥಾರಿಟಿ) ಇಂತಹವರೇ ಇರಬೇಕೆಂದು ನಿರ್ದಿಷ್ಟವಾಗಿ ವ್ಯಾಖ್ಯಾನಿಸಿಲ್ಲ. ಹಾಗಾಗಿ ಶಿಸ್ತು ಉಲ್ಲಂಘನೆ ಪ್ರಕರಣಗಳಲ್ಲಿ ಯಾರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಬೇಕು ಎಂಬ ವಿವೇಚನಾ ಅಧಿಕಾರ ಶಿಸ್ತು ಪ್ರಾಧಿಕಾರಕ್ಕೆ ಇದ್ದೇ ಇರುತ್ತದೆ. ಆ ಪ್ರಾಧಿಕಾರ ತನಗೆ ಸೂಕ್ತವೆನಿಸಿದ ವ್ಯಕ್ತಿಯನ್ನು ವಿಚಾರಣ ಅಧಿಕಾರಿಯನ್ನಾಗಿ ನೇಮಕ ಮಾಡುತ್ತದೆ ಎಂದು ನ್ಯಾಯಾಲಯ ಆದೇಶಿಸಿತು.
ನ್ಯಾಯಾಲಯ ಎನ್‌ಇಕೆಆರ್‌ಸಿಟಿ ವಾದವನ್ನು ಎತ್ತಿ ಹಿಡಿದು ನಿಯಮಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ಅಥವಾ ಕಾನೂನು ವೃತ್ತಿಪರರನ್ನು ವಿಚಾರಣಾಧಿಕಾರಿಗಳನ್ನು ನೇಮಕ ಮಾಡಲು ಅವಕಾಶವಿದೆ ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ : ಗಿರೀಶ್ ಸೇರಿದಂತೆ ಇತರೆ ಅರ್ಜಿದಾರರ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳಿಗೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಶಿಸ್ತು (ಡಿಸಿಪ್ಲಿನರಿ) ತನಿಖೆಗೆ ನಿವೃತ್ತ ಸಿವಿಲ್ ಮತ್ತು ಜಿಲ್ಲಾ ನ್ಯಾಯಾಧೀಶರನ್ನು ಹಾಗೂ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ನೇಮಕ ಮಾಡಿಕೊಂಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅರ್ಜಿ ವಜಾಗೊಂಡಿದ್ದು, ಕೆಎಸ್‌ಆರ್‌ಟಿಸಿ ಸೆರಿದಂತೆ ಯಾವುದೇ ನಿಗಮ ತನ್ನ ವ್ಯಾಪ್ತಿಯ ಶಿಸ್ತು ಪ್ರಾಧಿಕಾರಕ್ಕೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿಕೊಂಡಿತ್ತು.
ಇದನ್ನೂ ಓದಿ : ಬೆಳಗಾವಿ ಮಾಹಿತಿ ಆಯುಕ್ತರ ಹುದ್ದೆ ಭರ್ತಿ, ಕಲಬುರಗಿ ಪೀಠದ ಕಾರ್ಯಾಚರಣೆ ಕೋರಿ ಅರ್ಜಿ: ಸರ್ಕಾರಕ್ಕೆ ನೊಟೀಸ್