ಬೆಂಗಳೂರು : ಕೋವಿಡ್-19 ಹಾಗೂ ಲಾಕ್‌ಡೌನ್ ಹಿನ್ನೆಲೆ ಕೆಎಸ್‌ಆರ್‌ಟಿಸಿ ಅಂತಾರಾಜ್ಯ ಸಾರಿಗೆಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದೀಗ ಅಂತಾ ರಾಜ್ಯಕ್ಕೂ ಸಾರಿಗೆ ಸಂಚಾರ ಆರಂಭಿಸಲು ನಿಗಮ ತೀರ್ಮಾನಿಸಿದೆ.
ಕೋವಿಡ್-19 ಲಾಕ್‌ಡೌನ್ ಸಡಿಲಗೊಂಡಿರುವ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ಸೆ. 22ರಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸಂಚಾರ ಆರಂಭವಾಗಲಿದೆ. ಬೆಂಗಳೂರು, ದಾವಣಗೆರೆ, ಮಂಗಳೂರು ಒಳಗೊಂಡಂತೆ ರಾಜ್ಯದ ವಿವಿಧ ಸ್ಥಳಗಳಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್‌ಗಳು ಓಡಾಟ ನಡೆಸಲಿವೆ.
ಈಗಾಗಲೇ ಆಂಧ್ರ, ಗೋವಾ ರಾಜ್ಯಕ್ಕೆ ಬಸ್‌ಗಳ ಸಂಚಾರವಿದೆ. ಇದೀಗ ಮಹಾರಾಷ್ಟ್ರಕ್ಕೂ ಸಂಚಾರ ಪುನಾರಂಭ ಮಾಡಲಾಗಿದೆ. ಮುಂಗಡ ಆಸನಗಳನ್ನು www.ksrtc.in ವೆಬ್ ಸೈಟ್ ಮತ್ತು ನಿಗಮದ/ಫ್ರಾಂಚೈಸಿ ಕೌಂಟರ್‌ಗಳ ಮುಖಾಂತರ ಕಾಯ್ದಿಸಿಕೊಳ್ಳಬಹುದಾಗಿದೆ. ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲವಾದ್ರೆ ಬಸ್ ಹತ್ತಲು ಪ್ರವೇಶ ಇರೋದಿಲ್ಲ.