ಬೆಂಗಳೂರು: ಆರನೇ ವೇತನ ಆಯೋಗಕ್ಕೆ ಪಟ್ಟು ಹಿಡಿದಿದ್ದ ಸಾರಿಗೆ ನೌಕರರು 14 ದಿನಗಳ ಮುಷ್ಕರಕ್ಕೆ ಇಂದು ತೆರೆ ಎಳೆಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಸಾರಿಗೆ ನೌಕರರ ಮುಷ್ಕರ ಈ ಹಂತದಲ್ಲಿ ಸಮಂಜಸವಲ್ಲ. ಕೂಡಲೇ ಸಾರಿಗೆ ಸಂಸ್ಥೆಗಳು ಕಾರ್ಯಾರಂಭ ಮಾಡುವುದು ಸೂಕ್ತ ಎಂದು ಕೆಎಸ್‌ಆರ್‌ಟಿಸಿ, ಎನ್‌ಇಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಹೀಗಾಗಿ ಮುಷ್ಕರ ನಡೆಸಬೇಕೋ? ಬೇಡವೋ ಎಂಬ ಕುರಿತು ಸಾರಿಗೆ ನೌಕರರ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಶೀಘ್ರದಲ್ಲಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.
ಈ ಮೂಲಕ ರಾಜ್ಯದಲ್ಲಿ 14 ದಿನಗಳ ಮುಷ್ಕರ ಇಂದೇ ಅಂತ್ಯಗೊಳ್ಳುವ ಎಲ್ಲ ಸಾಧ್ಯತೆಯೂ ಇದೆ ಎನ್ನಲಾಗಿದೆ. ಕೋವಿಡ್ ಮಿತಿಮೀರುತ್ತಿದ್ದು, ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಆಗಲಿದ್ದು, ಹೀಗಾಗಿ, ಮುಷ್ಕರ ಕೈಬಿಡುವಂತೆ ಹೇಳಿದೆ. ಇದೀಗ ಸರ್ಕಾರದ ಮನವಿಗೂ ಬಗ್ಗದ ಸಾರಿಗೆ ನೌಕರರು ಕೋರ್ಟ್ ಮಾತಿಗೆ ಬೆಲೆ ಕೊಡ್ತಾರಾ ಕಾದು ನೋಡಬೇಕಿದೆ. ಇಂದು ಒಂದು ಸುತ್ತು ಸಭೆ ನಡೆಸಿ, ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಲಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ ಈ ಹಂತದಲ್ಲಿ ಸಮಂಜಸವಲ್ಲ, ಕೂಡಲೇ ಕಾರ್ಯಾರಂಭ ಮಾಡುವುದು ಸೂಕ್ತ: ಹೈಕೋರ್ಟ್