ETV Bharat / state

ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ನಿಷ್ಕ್ರಿಯ: ಕೆಆರ್​ಎಸ್​​ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ

author img

By ETV Bharat Karnataka Team

Published : Nov 3, 2023, 10:14 PM IST

ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಕೆ.ಆರ್.ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಹೇಳಿದ್ದಾರೆ.

ಕೆಆರ್​ಎಸ್ ಪಕ್ಷದ ನಾಯಕರ ಪತ್ರಿಕಾಗೋಷ್ಠಿ
ಕೆಆರ್​ಎಸ್ ಪಕ್ಷದ ನಾಯಕರ ಪತ್ರಿಕಾಗೋಷ್ಠಿ

ಬೆಂಗಳೂರು: ರಾಜ್ಯದಲ್ಲಿ ಶೇ.62ರಷ್ಟು ಮಳೆಯ ಕೊರತೆ ಉಂಟಾಗಿದ್ದು, ತೀವ್ರವಾದ ಬರದ ಪರಿಸ್ಥಿತಿ ಇದೆ. ಮುಂಗಾರಿನ ಜೊತೆಗೆ ಹಿಂಗಾರು ಮಳೆಯು ಕೂಡ ವೈಫಲ್ಯವಾಗಿದ್ದು, ರಾಜ್ಯದ ಜನರು ಇನ್ನೂ ಮಳೆಯನ್ನು ನೆಚ್ಚಿಕೊಳ್ಳುವಂತಿಲ್ಲ. ಕೃಷಿ ಚಟುವಟಿಕೆ ಬಹುತೇಕ ಸ್ತಬ್ಧವಾಗಿದ್ದು, ರಾಜ್ಯದ ಯಾವ ಪ್ರಮುಖ ಜಲಾಶಯವು ಈ ಸಾಲಿನಲ್ಲಿ ಭರ್ತಿಯಾಗಿಲ್ಲ ಮತ್ತು ಭರ್ತಿಯಾಗುವುದಿಲ್ಲ. ಈಗಿನ ನೀರಿನ ಸಂಗ್ರಹವು ಕೇವಲ ಕುಡಿಯುವ ನೀರಿಗೆ ಸಾಕಾದರೆ, ಅದೇ ಹೆಚ್ಚು, ಇನ್ನು ನೀರಾವರಿಗೆ ಬಳಸುವುದು ಬಹು ದೂರದ ಮಾತಾಗಿದೆ. ಇದರಿಂದ ರೈತರು ಕಂಗಾಲಾಗಿದ್ದು, ದಿಕ್ಕು ತೋಚದಂತಾಗಿದ್ದಾರೆ ಎಂದು ಕೆ.ಆರ್.ಎಸ್. ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ವಿಷಾದ ವ್ಯಕ್ತಪಡಿಸಿದರು.

ರಾಜಾಜಿನಗರದ ಪಕ್ಷದ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಗಾರಿನ ಆರಂಭದಲ್ಲಿ ಆದ ಅಲ್ಪ ಸ್ವಲ್ಪ ಮಳೆಯಲ್ಲಿ ಬಿತ್ತನೆ ಮಾಡಿದ್ದ ರೈತರು, ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ರಾಜ್ಯದ ಬಹುತೇಕ ರೈತಾಪಿ ಜನರು ಬೆಳೆ ಸಾಲ ಪಡೆದು ಕೃಷಿ ಕಾರ್ಯದಲ್ಲಿ ತೊಡಗುತ್ತಾರೆ. ಆದರೆ, ಪಡೆದಿರುವ ಸಾಲದ ಹಣವನ್ನು ಬಿತ್ತನೆಗೆ ಬಳಸಿ, ಬರಿಗೈನಲ್ಲಿದ್ದು, ಈಗ ಸಾಲ ಹೇಗೆ ತೀರಿಸುವುದು ಮತ್ತು ಜೀವನ ಹೇಗೆ ನಡೆಸುವುದು ಎಂದು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ನೆರವು ನೀಡಿ, ಧೈರ್ಯ ತುಂಬಬೇಕಾದ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರವು ಒಕ್ಕೂಟ ಸರ್ಕಾರದ ನೆರವಿದ್ದರೆ ಮಾತ್ರ ಬರ ಪರಿಹಾರ ಸಾಧ್ಯ ಎಂದು ನಂಬಿ ಕೈಕಟ್ಟಿ ಕುಳಿತಿದೆ. ಆದರೆ, ರಾಜ್ಯ ಸರ್ಕಾರವು ಒಕ್ಕೂಟ ಸರ್ಕಾರದ ನೆರವಿಗೆ ಕಾಯದೇ, ತನ್ನ ಸಂಪನ್ಮೂಲದಿಂದಲೇ ನೆರವು ನೀಡಬಾರದು ಎಂದು ಎಲ್ಲೂ ನಿಯಮಗಳಿಲ್ಲ. ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರವು ಬರ ಪರಿಹಾರ ಕಾರ್ಯಕ್ಕೆ ತೊಡಗಬೇಕು ಎಂದು ಆಗ್ರಹಿಸಿದರು. ಒಕ್ಕೂಟ ಸರ್ಕಾರದ ಅಧಿಕಾರಿಗಳು ರಾಜ್ಯದಲ್ಲಿ ಅಧ್ಯಯನ ಕೈಗೊಂಡು ಹಿಂದಿರುಗಿ 25 ದಿನಗಳಾಗಿದ್ದು, ಅವರು ಯಾವ ರೀತಿಯ ವರದಿ ನೀಡಿದ್ದಾರೆ, ಅದರ ಮೇಲೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ಕಿಂಚಿತ್ತು ಮಾಹಿತಿ ಇಲ್ಲ. ಜನರು ಸಂಕಷ್ಟದಲ್ಲಿರುವಾಗ ಸಹಾಯ ಮಾಡದಿದ್ದರೆ, ಅದು ಯಾವ ಉಪಯೋಗಕ್ಕೂ ಬರುವುದಿಲ್ಲ ಎಂದು ಹೇಳಿದರು.

ರಾಜ್ಯದ ಬಿಜೆಪಿ ನಾಯಕರು, ರಾಜ್ಯದಲ್ಲಿನ ಬರದ ಪರಿಸ್ಥಿತಿ ಬಗ್ಗೆ ತನ್ನದೇ ಪಕ್ಷದ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿ, ಪರಿಹಾರ ಬಿಡುಗಡೆ ಮಾಡಿಸುವ ಒಂದೇ ಒಂದು ಪ್ರಯತ್ನವನ್ನು ಇದುವರೆಗೂ ಮಾಡಿಲ್ಲ. ಆದರೆ, ಈಗ ಬರ ಅಧ್ಯಯನಕ್ಕೆಂದು ರಾಜ್ಯದಲ್ಲಿ ಪ್ರವಾಸ ಹೂರಟಿದ್ದಾರೆ. ಬಹುಶಃ ಒಕ್ಕೂಟ ಸರ್ಕಾರದಿಂದ ನೆರವು ಬಾರದಿರುವ ಮುನ್ಸೂಚನೆ ಅವರಿಗೆ ದೊರೆತಿದ್ದು, ಈ ದುಃಸ್ಥಿಯಿಂದ ತಪ್ಪಿಸಿಕೊಳ್ಳಲು ಅವರು ಈಗ ಪ್ರವಾಸದ ನಾಟಕವಾಡುತ್ತಿದ್ದಾರೆ. ಇಂತಹ ನಾಟಕಗಳನ್ನು ನಿಲ್ಲಿಸಿ, ದೆಹಲಿಗೆ ತೆರಳಿ, ಪರಿಹಾರದ ಹಣವನ್ನು ಬಿಡುಗಡೆ ಮಾಡಿಸಿಕೊಂಡು ಬರಬೇಕು, ಅದನ್ನು ಬಿಟ್ಟು ಅಧ್ಯಯನ ಎಂಬ ನಾಟಕವಾಡುತ್ತಿದ್ದಾರೆ. ಇನ್ನು ಬಿಜೆಪಿಗರಲ್ಲಿ ಕೆಲವರು ಹಾಲಿ ಸರ್ಕಾರವನ್ನು ಬೀಳಿಸುವ ಕೆಲಸದಲ್ಲಿ ನಿರತರಾಗಿದ್ದರೆ, ಇನ್ನು ಕೆಲವರು ಈ ಸರ್ಕಾರ ಕೆಲವೇ ತಿಂಗಳುಗಳಲ್ಲಿ ಪತನವಾಗಲಿದೆ ಎಂದು ಕನಸು ಕಾಣುತ್ತಾ ಕಾದು ಕುಳಿತಿದ್ದಾರೆ ಎಂದು ರಘು ಜಾಣಗೆರೆ ವ್ಯಂಗ್ಯವಾಡಿದರು.

ಇದನ್ನೂ ಓದಿ: "ರಾಜಣ್ಣ ಹೇಳಿಕೆಗೆ ನಾನು ಉತ್ತರ ನೀಡಲು ಹೋಗುವುದಿಲ್ಲ.. ನಾನೊಂದು ಹೇಳಿದರೆ ನೀವೇ ಒಂದು ಬರೆಯುತ್ತೀರಿ": ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.